ಮಣಿಪುರ ರೀತಿ ಘಟನೆ, ದಲಿತ ಯುವಕನ ಬಡಿದು ಕೊಂದು ತಾಯಿಯನ್ನೂ ವಿವಸ್ತ್ರಗೊಳಿಸಿ ಅಟ್ಟಹಾಸ!
ತಂಗಿಯ ಮೇಲೆ ಅತ್ಯಾಚಾರ ಘಟನೆ ಕುರಿತು ದಾಖಲಿಸಿದ್ದ ದೂರು ವಾಪಸ್ ಪಡೆಯುವಂತೆ ಆರೋಪಿಗಳು 18ರ ದಲಿತ ಯುವಕನ ಬಡಿದು ಹತ್ಯೆಗೈದರೆ, ತಡೆಯಲು ಬಂದ ದಲಿತ ಯುವಕನ ತಾಯಿಯನ್ನು ವಿವಸ್ತ್ರಗೊಳಿಸಲಾಗಿದೆ. ಮಣಿಪುರ ರೀತಿಯ ಘಟನೆಗೆ ಮತ್ತೆ ದೇಶವೇ ತಲೆತಗ್ಗಿಸುವಂತಾಗಿದೆ.

ಇಂದೋರ್(ಆ.27) ಮಣಿಪುರ ಹಿಂಸಾಚಾಸ, ಅತ್ಯಾಚಾರ, ನಗ್ನ ಮೆರವಣಿ ಸೇರಿದಂತೆ ಅತ್ಯಂತ ಕ್ರೂರ ನಡೆಗಳಿಂದ ಭಾರತ ತಲೆತಗ್ಗಿಸುವಂತಾಗಿತ್ತು. ಇದೀಗ ಇದೇ ರೀತಿಯ ಭೀಕರ ಘಟನೆ ವರದಿಯಾಗಿದೆ. 2019ರಲ್ಲಿ ತಂಗಿ ಮೇಲೆ ನಡೆದ ಅತ್ಯಾಚಾರ ಕುರಿತು ದೂರು ದಾಖಲಿಸಲಾಗಿತ್ತು. ಈ ದೂರು ವಾಪಸ್ ಪಡೆಯುವಂತೆ ಆಗ್ರಹಿಸಿ ಆರೋಪಿಗಳು 18ರ ಹರೆಯದ ದಲಿತ ಯುವಕನ ಬಡಿಗೆಯಿಂದ ಬಡಿದು ಕೊಂದಿದ್ದಾರೆ. ಇದೇ ವೇಳೆ ಯುವಕನ ತಾಯಿಯನ್ನು ವಿವಸ್ತ್ರಗೊಳಿಸಿ ಕಟ್ಟಿಹಾಕಿದ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ.
ಸಾಗರ್ ಜಿಲ್ಲೆಯ 18ರ ಹರೆಯದ ದಲಿತ ಯುವಕ ನಿತಿನ್ ಅಹಿರ್‌ವಾರ್ ಮೃತ ದುರ್ದೈವಿ. 2019ರಲ್ಲಿ ನಿತಿನ್ ಅಹಿರ್‌ವಾರ್ ತಂಗಿ ಮೇಲೆ ಅತ್ಯಾಚಾರ ನಡೆದಿತ್ತು. ತಂಗಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗಳ ಹೆಸರು ಉಲ್ಲೇಖಿಸಿ ನಿತಿನ್ ಅಹಿರ್‌ವಾರ್ ದೂರು ದಾಖಲಿಸಿದ್ದರು. ಈ ಪ್ರಕರಣದ ತನಿಖೆ ನಡೆಯುತ್ತಿದೆ.ವಿಚಾರಣೆಗಳು ನಡೆದಿದೆ. ಈ ಅತ್ಯಾಚಾರ ಪ್ರಕರಣದಲ್ಲಿನ ಆರೋಪಿಗಳು ಜೈಲು ಸೇರುವುದು ಖಚಿತವಾಗುತ್ತಿದ್ದಂತೆ ಆಕ್ರೋಶಗೊಂಡಿದ್ದಾರೆ.
ಅತ್ಯಾಚಾರ ಆರೋಪಿಯನ್ನು 24 ಗಂಟೆಯಲ್ಲಿ ಬಂಧಿಸಿದ ದಾವಣಗೆರೆ ಪೊಲೀಸರು
ಆರೋಪಿಗಳು ನೇರವಾಗಿ ನಿತಿನ್ ಅಹಿರ್‌ವಾರ್ ಮನೆಗೆ ಆಗಮಿಸಿ 2019ರಲ್ಲಿ ದಾಖಲಿಸಿದ್ದ ಕೇಸ್ ವಾಪಸ್ ಪಡೆಯುವಂತೆ ತಾಕೀತು ಮಾಡಿದ್ದಾರೆ. ಆದರೆ ಇದಕ್ಕೆ ನಿತಿನ್ ಅಹಿರ್‌ವಾರ್ ಒಪ್ಪಿಲ್ಲ. ಬೆದರಿಕೆ ಹಾಕಿದರೂ ಕೇಸ್ ವಾಪಸ್ ಪಡೆಯಲು ನಿರಾಕರಿಸಿದ್ದಾನೆ. ಇದರಿಂದ ಆರೋಪಿಗಳು ಮತ್ತಷ್ಟು ಕೆರಳಿದ್ದಾರೆ. ನಿತಿನ್ ಅಹಿರ್‌ವಾರ್ ಮನೆ ಧ್ವಂಸ ಮಾಡಿದ್ದಾರೆ. ಬಳಿಕ ನಿತಿನ್ ಮೇಲೆ ಹಲ್ಲೆ ನಡೆಸಿದ್ದಾರೆ.
ನಿತಿನ್ ಅಹಿರ್‌ವಾರ್ ಕಟ್ಟಿ ಹಾಕಿ ತೀವ್ರವಾಗಿ ಥಳಿಸಿದ್ದಾರೆ. ಇದೇ ವೇಳೆ ಮಧ್ಯಪ್ರವೇಶಿಸಿದ ನಿತಿನ್ ಅಹಿರ್‌ವಾರ್ ತಾಯಿಯನ್ನು ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿಹಾಕಿದ್ದಾರೆ. ಯಾರಾದರೂ ನೆರವಿಗೆ ಬಂದರೆ ಅವರ ಕುಟುಂಬಕ್ಕೂ ಇದೇ ಗತಿ ಎಂದು ಬೆದರಿಸಿದ್ದಾರೆ. ಹೀಗಾಗಿ ಯಾರೂ ಕೂಡ ನೆರವಿಗೆ ಬಂದಿಲ್ಲ. ಬಳಿಕ ನಿತಿನ್ ಅಹಿರ್‌ವಾರ್ ಮೇಲೆ ಹಲ್ಲೆ ನಡೆಸಿದ್ದಾರೆ.
ಪೊಲೀಸರು ಆಗಮಿಸುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ನಿತಿನ್ ಅಹಿರ್‌ವಾರ್ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಇತ್ತ ನಿತಿನ್ ಅಹಿರ್‌ವಾರ್ ತಾಯಿ ಕೂಡ ಗಾಯಗೊಂಡಿದ್ದಾರೆ. ಈ ಘಟನೆ ಕುರಿತು 8 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈಕೃತ್ಯದ ಹಿಂದೆ ಮತ್ತಷ್ಟು ಆರೋಪಿಗಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಶೀಘ್ರದಲ್ಲೇ ಅವರನ್ನೂ ಬಂಧಿಸಲಾಗುತ್ತದೆ ಎಂದಿದ್ದಾರೆ.
ಬಾಲಕಿಯ ಬೆತ್ತಲೆ ಫೋಟೋ ತೆಗೆದು ವೈರಲ್ ಮಾಡಿದ ಪಕ್ಕದ ಮನೆ ಯುವಕ: ಜೀವವನ್ನೇ ಕಳ್ಕೊಂಡ ಅಪ್ರಾಪ್ತೆ!
ಬಹುಜನ ಸಮಾಜವಾದಿ ಪಾರ್ಟಿ ನಾಯಕಿ ಮಾಯಾವತಿ ಘಟನೆ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸರ್ಕಾರ ಜನರಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಅದರಲ್ಲೂ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಆದರೆ ಸರ್ಕಾರ ಮುಂದಿನ ಚುನಾವಣಾ ತಯಾರಿದಲ್ಲಿದೆ. ದಲಿತರ ವಿಚಾರದಲ್ಲಿ ನಿರ್ಲಕ್ಷ್ಯವಹಿಸುತ್ತಿದೆ ಎಂದು ಆರೋಪಿಸಿದ್ದಾರೆ.