ಹೈದರಾಬಾದ್(ಜ. 01)  ಅವರು ಮದುವೆಯಾಗಿ ಏಳು ವಾರಗಳು ಕಳೆದಿತ್ತು. ಕುಟುಂಬವನ್ನು ಎದುರು ಹಾಕಿಕೊಂಡು ಮದುವೆಯಾದ ಮಹೇಶ್ವರಿ ಮತ್ತು ಆಡಂ ಸ್ಮಿತ್ ಕರ್ನೂಲ್ ಜಿಲ್ಲೆಯಿಂದ ಬೇರೆ ಕಡೆಗೆ ತೆರಳಿದ್ದಳು.  ಅದೋನಿ ಪಟ್ಟಂದಲ್ಲಿ ಹೊಸ ಜೀವನವನ್ನು ಆರಂಭಿಸಿದ್ದರು.

ಆದರೆ ಗುರುವಾರ ಮಧ್ಯಾಹ್ನ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಆಡಂನನ್ನು ಕ್ರೂರವಾಗಿ ಹತ್ಯೆ ಮಾಡುತ್ತಾರೆ. ಕಬ್ಬಿಣದ ಪೈಪ್ ಗಳಿಂದ ಆತನ ತಲೆಯನ್ನು ಒಡೆಯಲಾಗುತ್ತದೆ. ಪತ್ನಿ ಮಹೇಶ್ವರಿ ಹೇಳುವಂತೆ ಆಕೆಯ ಕುಟುಂಬಸ್ಥರೇ ಗಂಡನ ಹತ್ಯೆ ಮಾಡಿದ್ದಾರೆ.

ಪತ್ನಿಗೆ ಸೆಕ್ಸ್ ಟಿಪ್ಸ್ ನೀಡುತ್ತಿದ್ದ ನೆರೆಮನೆಯವನ ಹತ್ಯೆ

ಆಡಂ ಮಾದಿಗ ಸಮುದಾಯಕ್ಕೆ ಸೇರಿದ ವ್ಯಕ್ತಿ. ಮಹೇಶ್ವರಿ ಕುರುಬ ಸಮುದಾಯಕ್ಕೆ ಸೇರಿದವರು.  ಗುರ್ಜಾಲಾದಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಿದ್ದರು. ನಂತರ ಪ್ರೀತಿಸಿ ಮದುವೆಯಾಗಿದ್ದರು.

ಇದಾದ ಮೇಲೆ ಮಹೇಶ್ವರಿ ತನ್ನ ಪ್ರಾಣಕ್ಕೂ ಆತಂಕ ಇದ್ದು ರಕ್ಷಣೆ ಕೊಡಿ ಎಂದು ಪೊಲೀಸರ ಬಳಿ ಕೇಳಿಕೊಂಡಿದ್ದಾರೆ. ತನ್ನ ಕುಟುಂಬದವರೇ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾಳೆ.

ನಾವು ಇಬ್ಬರು  ಬೇರೆ ಬೇರೆ ಜಾತಿಗೆ ಸೇರಿದವರು. ನಮ್ಮ ಕುಟುಂಬ ಮದುವೆಗೆ ಒಪ್ಪಿಗೆ ಕೊಟ್ಟಿರಲಿಲ್ಲ. ನಾವಿಬ್ಬರೂ ಓಡಿ ಹೋಗಿ ಹೈದರಾಬಾದ್ ನ ಆರ್ಯ ಸಮಾಜದಲ್ಲಿ ಮ,ದುವೆ ಆದೆವು. ನನ್ನ ತಂದೆ ಮತ್ತು ಚಿಕ್ಕಪ್ಪ ಸೇರಿಕೊಂಡೇ ಗಂಡನ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ. ಇದೇ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಇಲ್ಲಿವರೆಗೆ ಯಾರನ್ನೂ ಬಂಧಿಸಿಲ್ಲ.. ಪ್ರಕರಣದ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.