Asianet Suvarna News Asianet Suvarna News

ಬೆಂಗಳೂರು ಹತ್ಯೆಯಲ್ಲಿ ನಂ.4, ರೇಪ್‌ನಲ್ಲಿ ನಂ.2

  • 20 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ದೇಶದ 19 ಮಹಾನಗರ
  • 2020ರಲ್ಲಿ 1849 ಹತ್ಯೆ ಮತ್ತು 2533 ಅತ್ಯಾಚಾರ ಪ್ರಕರಣ
Crime rate raises in bengaluru city snr
Author
Bengaluru, First Published Sep 17, 2021, 8:28 AM IST
  • Facebook
  • Twitter
  • Whatsapp

ನವದೆಹಲಿ (ಸೆ.17): 20 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ದೇಶದ 19 ಮಹಾನಗರಗಳಲ್ಲಿ 2020ರಲ್ಲಿ 1849 ಹತ್ಯೆ ಮತ್ತು 2533 ಅತ್ಯಾಚಾರ ಪ್ರಕರಣಗಳು ನಡೆದಿವೆ. 

ಈ ಪೈಕಿ 179 ಕೊಲೆ ಪ್ರಕರಣಗಳೊಂದಿಗೆ ಬೆಂಗಳೂರು ನಂ.2 ಸ್ಥಾನದಲ್ಲಿದೆ. ಇನ್ನು 108 ಅತ್ಯಾಚಾರ ಪ್ರಕರಣಗಳೊಂದಿಗೆ 4ನೇ ಸ್ಥಾನ ಪಡೆದುಕೊಂಡಿದೆ.

ಒಬ್ಬನೇ ಇದ್ದೇನೆ ಎಂದು ಸ್ಟೇಟಸ್ ಹಾಕಿ ಸಾವು ತಂದುಕೊಂಡ ರೌಡಿಶೀಟರ್..!

ರಾಷ್ಟ್ರೀಯ ಅಪರಾಧ ಬ್ಯೂರೋ ಬಿಡುಗಡೆ ಮಾಡಿರುವ ಅನ್ವಯ ಅತಿ ಹೆಚ್ಚು ಹತ್ಯೆ ನಡೆದ ಮಹಾನಗರಗಳ ಪೈಕಿ ದೆಹಲಿ (1849), ಬೆಂಗಳೂರು (179), ಚೆನ್ನೈ (15) ಟಾಪ್‌ 3 ಸ್ಥಾನ ಪಡೆದಿವೆ. 19 ಮಹಾನಗರಗಳಲ್ಲಿ ದೆಹಲಿಯ ಪಾಲೇ 40ರಷ್ಟಿದೆ.

ಇನ್ನು ಅತ್ಯಾಚಾರ ಪ್ರಕರಣಗಳ ಪಟ್ಟಿಯಲ್ಲಿ ದೆಹಲಿ (461), ಮುಂಬೈ(148), ಸೂರತ್‌ (116) ಟಾಪ್‌ 3 ಸ್ಥಾನ ಪಡೆದುಕೊಂಡಿವೆ.

Follow Us:
Download App:
  • android
  • ios