ಮಾಸ್ಕ್ ಧರಿಸದ ವಿವಾಹಿತ ಮಹಿಳೆ ಎಳೆದೊಯ್ದು ರೇಪ್ ಎಸಗಿದ ಪೊಲೀಸ್
* ಮಾಸ್ಕ್ ಧರಿಸದೇ ಓಡಾಡುತ್ತಿದ್ದ ಮಹಿಳೆ ಅಪಹರಣ
* ಮಹಿಳೆ ಮೇಲೆ ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿ
* ಕಳೆದ ವರ್ಷದ ಪ್ರಕರಣ ಈಗ ದೂರು ದಾಖಲು
ಸೂರತ್( ಜೂ.16) ಮಾಸ್ಕ್ ಇಲ್ಲದೆ ಓಡಾಡುತ್ತಿದ್ದ ಮಹಿಳೆಯನ್ನು ಹಿಡಿದಿದ್ದ ಪೊಲೀಸ್ ಕಾನ್‌ಸ್ಟೆಬಲ್ ಆಕೆ ಮೇಲೆ ಕಳೆದ ವರ್ಷಅತ್ಯಾಚಾರ ಎಸಗಿದ್ದಾನೆ. 33 ವರ್ಷದ ಮಹಿಳೆ ದೌರ್ಜನ್ಯಕ್ಕೆ ಒಳಗಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸೂರತ್‌ನ ಉಮರ್ಪದ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದವ ಹೀನ ಕೆಲಸ ಮಾಡಿದ್ದಾನೆ. ನನ್ನನ್ನು ಅಪಹರಣ ಮಾಡಿ ನಿರಂತರ ದೌರ್ಜನ್ಯ ಎಸಗಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಬೆಂಗಳೂರು ಗ್ಯಾಂಗ್ ರೇಪ್ ಆರೋಪಿಗಳ ಹೇಳಿಕೆ ಕೇಳಿ ಪೊಲೀಸರೆ ದಂಗು
ಕಳೆದ ವರ್ಷ ನನ್ನ ಮೇಲೆ ಅತ್ಯಾಚಾರ ಎಸಗಿ ಅದನ್ನು ವಿಡಿಯೋ ರೇಕಾರ್ಡ್ ಮಾಡಿಕೊಂಡವ ನಂತರ ನಿರಂತರವಾಗಿ ಹಿಂಸೆ ನೀಡಿದ್ದಾನೆ. ಕರೆ ಮಾಡಿ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎನ್ನುವುದು ಮಹಿಳೆಯ ದೂರು.
ಆದರೆ ಆರೋಪಿ ಪೊಲೀಸ್ ನರೇಶ್ ಕಪಾಡಿಯಾ ಹೆಂಡತಿ ಬೇರೆ ಕತೆ ಹೇಳಿದ್ದಾರೆ. ದೂರು ಕೊಟ್ಟ ಮಹಿಳೆ ಮತ್ತು ಆಕೆಯ ಗಂಡ ತಮ್ಮ ಮನೆ ಹತ್ತಿರ ಬಂದಿ ಗಲಾಟೆ ಮಾಡಿದ್ದು ಅಲ್ಲದೇ ಜಾತಿನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸ್ ಅಧಿಕಾರಿ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಸಂತ್ರಸ್ತೆ ಮತ್ತು ಆಕೆಯ ಪತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.
ನರೇಶ್ ಕಪಾಡಿಯಾವನ್ನು ಈ ಹಿಂದೆ ಪಲ್ಸಾನಾ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಜನವರಿಯಲ್ಲಿ ಉಮರ್ಪಾಡಾ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ನರೇಶ್ ಕಪಾಡಿಯಾ ಜನರೊಂದಿಗೆ ವಾಗ್ವಾದ ನಡೆಸುತ್ತಿದ್ದ ವಿಡಿಯೋ ಒಂದು ಆ ಸಂದರ್ಭದಲ್ಲಿ ವೈರಲ್ ಆಗಿತ್ತು
2020 ರ ಲಾಕ್ ಡೌನ್ ಸಮಯ ಪಾಲ್ಸಾನಾದಲ್ಲಿ ಹಾಲು ಖರೀದಿಸಲು ತೆರಳುತ್ತಿದ್ದ ವೇಳೆ ನಾನು ಮಾಸ್ಕ್ ಧರಿಸಿರಲಿಲ್ಲ. ಇದೇ ಕಾರಣ ಇಟ್ಟುಕೊಂಡು ಬೆದರಿಸಿ ಅಪಹರಿಸಲಾಗಿದೆ. ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುವ ಬದಲು ಬೇರೊಂದು ಜಾಗಕ್ಕೆ ಕರೆದುಕೊಂಡು ಹೋಗಿ ನನ್ನ ಮೇಲೆ ದೌರ್ಜನ್ಯ ಎಸಗಲಾಗಿದೆ ಎಂದು ಮಹಿಳೆ ಆರೋಪಿಸಿದ್ದಾಳೆ. ದೌರ್ಜನ್ಯ ಎಸಗುತ್ತಿರುವುದನ್ನೇ ಚಿತ್ರೀಕರಣ ಮಾಡಿಕೊಂಡು ಬ್ಲ್ಯಾಕ್ ಮೇಲ್ ಮಾಡಲಾಗುತ್ತಿತ್ತು ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.