Asianet Suvarna News Asianet Suvarna News

ಗಾಂಧೀಜಿ, ಸಿಎಂ ಬೊಮ್ಮಾಯಿ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಧರ್ಮೇಂದ್ರ ಅರೆಸ್ಟ್!

* ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ವಿವಾದಾತ್ಮಕ ಹೇಳಿಕೆ ವಿಚಾರ

* ಹಿಂದೂ ಮಾಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಬಂಧನ

* ದೇವಾಲಯ ಕೆಡವಿದ ವಿಚಾರದಲ್ಲಿ ಸಿ ಎಂ ಬಸವರಾಜ ಬೊಮ್ಮಾಯಿಗೆ ಬೆದರಿಕೆ ಹಾಕಿದ್ದ ಧರ್ಮೇಂದ್ರ

* ಆ ಬಳಿಕ ತನ್ನ ಹೇಳಿಕೆಗೆ ಕ್ಷಮೆಯಾಚಿಸಿದ್ದ ಹಿಂದೂ ಮಹಾ ಸಭಾದ ಮುಖಂಡ ಧರ್ಮೇಂದ್ರ

controversial statement Hindu mahasabha leader dharmendra Arrested mah
Author
Bengaluru, First Published Sep 19, 2021, 6:16 PM IST
  • Facebook
  • Twitter
  • Whatsapp

ಮಂಗಳೂರು (ಸೆ. 19) ದೇವಾಲಯ ಧ್ವಂಸ ವಿಚಾರ  ವಿರೋಧಿಸುವ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿಂದೂ ಮಹಾಸಭಾ ಮುಖಂಡ ಧರ್ಮೇಂದ್ರ ಅವರನ್ನು ಬಂಧಿಸಲಾಗಿದೆ. ದೇವಾಲಯ ಕೆಡವಿದ ವಿಚಾರದಲ್ಲಿ ಸಿ ಎಂ ಬಸವರಾಜ ಬೊಮ್ಮಾಯಿಗೆ ಬೆದರಿಕೆ ಹಾಕಿದ ರೀತಿ ಮಾತನಾಡಿದ್ದರು.

ಆ ಬಳಿಕ ತನ್ನ ಹೇಳಿಕೆಗೆ ಕ್ಷಮೆಯಾಚಿಸಿದ್ದರು. ಸದ್ಯ ಧರ್ಮೇಂದ್ರರನ್ನು ಬಂಧಿಸಿದ ಮಂಗಳೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಂಗಳೂರಿನ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ದೇವಾಲಯ ಧ್ವಂಸ ವಿಚಾರ ಖಂಡಿಸಿದ್ದರು. ಧರ್ಮೇಂದ್ರ ವಿರುದ್ದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಗಾಂಧೀಜಿಯನ್ನೇ ಬಿಟ್ಟಿಲ್ಲ ಎಂದಿದ್ದ ಧರ್ಮೇಂದ್ರ

ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರ ಇದ್ಯಾ ? ತಾಲಿಬಾನ್ ಆದ್ರೂ ಪರ್ವಾಗಿಲ್ಲ, ಇದಕ್ಕಿಂತ ಕೀಳು ಮಟ್ಟದ ಸರ್ಕಾರ ನಡೆಸುತ್ತಿದ್ದೀರಾ ನೀವು. ನಾಚಿಕೆ ಇಲ್ಲದ ಮುಖ್ಯಮಂತ್ರಿ, ನೈತಿಕತೆ ಇಲ್ಲದ ಮಂತ್ರಿ ಮಂಡಲ. ಭಾರತೀಯ ಜನತಾ ಪಕ್ಷವೇ ಬೆನ್ನು ಮೂಳೆ ಇಲ್ಲದ ಪಕ್ಷ ಎಂದು ವಾಗ್ದಾಳಿ ಮಾಡಿದ್ದರು.

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಆದೇಶದ ಅನ್ವಯ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ದೇವಾಲಯ ತೆರವು ಮಾಡಲಾಗಿತ್ತು. ಜೆಸಿಬಿ ಮೂಲಕ ದೇವಾಲಯ ತೆರವು ಮಾಡಿದ್ದು ಜನಾಕ್ರೋಶಕ್ಕೆ ಕಾರಣವಾಗಿತ್ತು. ಹಿಂದು ಸಂಘಟನೆಗಳು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದವು. 

 

Follow Us:
Download App:
  • android
  • ios