Asianet Suvarna News Asianet Suvarna News

ಶಿವಮೊಗ್ಗ: ಭದ್ರಾವತಿ ಶಾಸಕರ ಪುತ್ರನ ಕೊಲೆಗೆ ಸಂಚು, ಜೈಲಿನಿಂದಲೇ ಹತ್ಯೆಗೆ ಸ್ಕೆಚ್‌..!

ಡಿಚ್ಚಿ ಮುಬಾರಕ್ ಎಂಬಾತನೇ ಜೈಲಿನಿಂದ ಬಸವೇಶನ ಹತ್ಯೆಗೆ ಸಂಚು ರೂಪಿಸಿದ್ದ. ಆರೋಪಿ ಡಿಚ್ಚಿ ಮುಬಾರಕ್‌ ಕರಣವೊಂದರಲ್ಲಿ‌ ಜೈಲಿನಲ್ಲಿದ್ದಾನೆ. ಆರೋಪಿ ಮುಬಾರಕ್ ಎಂಬಾತನಿಗೆ ಕೊಲೆ ಮಾಡುವಂತೆ ಸುಪಾರಿ ನೀಡಿದ್ದನಂತೆ.   ಭದ್ರಾವತಿ ಗಾಂಧಿ ಸರ್ಕಲ್‌ನಲ್ಲಿ ಬಸವೇಶನನ್ನು ಕೊಲೆ ಮಾಡುವಂತೆ ಡಿಚ್ಚಿ ಮುಬಾರಕ್ ಸೂಚಿಸಿದ್ದನಂತೆ.  

Conspiracy to kill Bhadravati MLA bk sangameshwar's son basavesh grg
Author
First Published Aug 22, 2024, 11:32 AM IST | Last Updated Aug 22, 2024, 4:29 PM IST

ಶಿವಮೊಗ್ಗ(ಆ.22):  ಜಿಲ್ಲೆಯ ಭದ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ ಅವರ ಪುತ್ರ ಬಸವೇಶನ ಹತ್ಯೆಗೆ ಸ್ಕೆಚ್ ರೂಪಿಸಲಾಗಿದೆ ಎಂಬ ಆಘಾತಕಾರಿ ಸುದ್ದಿ ಬಂದಿದೆ. ಹೌದು, ಬಸವೇಶನ ಹತ್ಯೆಗೆ ಆರೋಪಿ ಜೈಲಿನಿಂದಲೇ ಹತ್ಯೆಗೆ ಸ್ಕೆಚ್ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ.

ಡಿಚ್ಚಿ ಮುಬಾರಕ್ ಎಂಬಾತನೇ ಜೈಲಿನಿಂದ ಬಸವೇಶನ ಹತ್ಯೆಗೆ ಸಂಚು ರೂಪಿಸಿದ್ದ. ಆರೋಪಿ ಡಿಚ್ಚಿ ಮುಬಾರಕ್‌ ಕರಣವೊಂದರಲ್ಲಿ‌ ಜೈಲಿನಲ್ಲಿದ್ದಾನೆ. ಆರೋಪಿ ಮುಬಾರಕ್ ಎಂಬಾತನಿಗೆ ಕೊಲೆ ಮಾಡುವಂತೆ ಸುಪಾರಿ ನೀಡಿದ್ದನಂತೆ.   ಭದ್ರಾವತಿ ಗಾಂಧಿ ಸರ್ಕಲ್‌ನಲ್ಲಿ ಬಸವೇಶನನ್ನು ಕೊಲೆ ಮಾಡುವಂತೆ ಡಿಚ್ಚಿ ಮುಬಾರಕ್ ಸೂಚಿಸಿದ್ದನಂತೆ.  

ಚಿಕ್ಕಬಳ್ಳಾಪುರ: ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೃದ್ಧೆಯ ಮೇಲೆ ಕಾಮುಕನ ಅಟ್ಟಹಾಸ..!

ಕೊಲೆ ಬಗ್ಗೆ ಗುತ್ತಿಗೆದಾರ ಸುನೀಲ್ ಎಂಬಾತನ ಬಗ್ಗೆ ತಿಳಿಸಿದ್ದ ಮುಬಾರಕ್. ಕಾರು ಹಾಗೂ ನಾಲ್ಕು ಮಂದಿ ಹುಡುಗರನ್ನು ಕಳುಹಿಸುವುದಾಗಿ ಹೇಳಿದ್ದನು ಎಂದಿದ್ದ ಮುಬಾರಕ್. ಹತ್ಯೆಗೆ ಚಾಕು ಖರೀದಿಸಿರುವುದಾಗಿ ಮುಬಾರಕ್ ತೋರಿಸಿದ್ದನಂತೆ. 

ಘಟನೆ ಸಂಬಂಧ ಮುಬಾರಕ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.  ಭದ್ರಾವತಿ ಹಳೆನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕ ಪುತ್ರ ಬಸವೇಶನಿಗೆ ಪೊಲೀಸರು ಭದ್ರತೆ ನೀಡಿದ್ದಾರೆ. 

Latest Videos
Follow Us:
Download App:
  • android
  • ios