ಗುಹವಾಟಿ (ಡಿ. 07) ಹಲವಾರು ವರ್ಷಗಳ ಹಿಂದೆ  ಹೆತ್ತ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಗುವಾಹಟಿಯ ಕಾನೂನು ಕಾಲೇಜೊಂದರ ಪ್ರಾಂಶುಪಾಲರನ್ನು ಪೊಲೀಸರು ಬಂಧಿಸಿದ್ದಾರೆ.

ಬಿಆರ್‌ಎಂ ಸರ್ಕಾರಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಅಶುತೋಷ್ ಕುಂದು  ಮೇಲೆ ಅವರ 26 ವರ್ಷದ ಮಗಳೇ ಅತ್ಯಾಚಾರದ ಆರೋಪ ಮಾಡಿದ್ದರು ಆರೋಪಿಯನ್ನು ಬಂಧಿಸಿ ಸೋಮವಾರ  ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು ಮತ್ತು ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಕೆಲಸ ಅರಸಿ ಬಂದ ಬಳ್ಳಾರಿ ಬಾಲಕಿ ಮೇಲೆ ಮಂಡ್ಯದಲ್ಲಿ ದೌರ್ಜನ್ಯ

ನವೆಂಬರ್ 30 ರಂದು ಎಫ್ಐಆರ್ ದಾಖಲಾಗಿತ್ತು.  ತಂದೆ ಹಲವಾರು ತಿಂಗಳುಗಳಿಂದ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಯುವತಿ ಆರೋಪಿಸಿದ್ದಾರೆ. ಅತ್ಯಾಚಾರ ಮತ್ತು ಇತರೆ ಆರೋಪದ ಮೇಲೆ ಎಫ್ ಐಆರ್ ದಾಖಲಿಸಿಕೊಳ್ಳಲಾಗಿತ್ತು.

ತಂದೆಯೇ ನನಗೆ ನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಹತ್ತು ವರ್ಷಗಳ ಹಿಂದೆ ನನಗೆ ಏನೂ ತಿಳಿಯದ ಸಮಯದಲ್ಲಿ ಅತ್ಯಾಚಾರ ಮಾಡಿದ್ದರು ಎಂದು ಮಗಳೆ ಆರೋಪಿಸಿದ್ದು ಅದರ ಆಧಾರದಲ್ಲಿ ಪೊಲೀಸರು ಕ್ರಮ ಜರುಗಿಸಿದ್ದಾರೆ.