Asianet Suvarna News Asianet Suvarna News

ಪುತ್ತೂರಿನ ರೀತಿ 10ನೇ ತರಗತಿ ಬಾಲಕಿ ಮೇಲೆ ರೇಪ್ ಮಾಡಿ ವಿಡಿಯೋ ಹರಿಬಿಟ್ಟರು!

ಹತ್ತನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ/  ವಿಡಿಯೋ ಮಾಡಿ ಶೇರ್ ಮಾಡಿದ ವಿದ್ಯಾರ್ಥಿಗಳ ತಂಡ/ ತಮಿಳುನಾಡಿನಲ್ಲಿ ಘಟನೆ/ ಎಚ್ಚೆತ್ತುಕೊಂಡ ಪೊಲೀಸರಿಂದ ಪ್ರಕರಣ ದಾಖಲು

Class 11 boy rapes Class 10 girl as his friend films the act Tamil Nadu
Author
Bengaluru, First Published Sep 28, 2020, 9:43 PM IST

ಕೊಯಂಬತ್ತೂರ್(ಸೆ. 28) ಕರ್ನಾಟಕದ ಪುತ್ತೂರಿನಿಂದ ಕಳೆದ ವರ್ಷ ಇಂಥದ್ದೆ ಒಂದು ಘಟನೆ ವರದಿಯಾಗಿತ್ತು. 11ನೇ ತರಗತಿ ವ್ಯಾಸಂಗ ಮಾಡುತ್ತಿರುವ  16ವರ್ಷದ ಬಾಲಕ  10ನೇ ತರಗತಿಯ 15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದು ಸ್ನೇಹಿತರು ಅದನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಗುರುಬಾರಪಲ್ಲಿಯಲ್ಲಿ ನಡೆದ ಘಟನೆ ಬೆಳಕಿಗೆ ಬಂದಿದೆ.  ಸೋಶಿಯಲ್ ಮೀಡಿಯಾದಲ್ಲಿ  ವಿಡಿಯೋ ಹರಿದಾಡಿದ ನಂತರ ಪೊಲೀಸರು ಎಚ್ಚರ ತೆಗೆದುಕೊಂಡಿದ್ದಾರೆ.

ಸಂತ್ರಸ್ತ ಬಾಲಕಿಯ ತಾಯಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದು ತಂದೆ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದು ಮದ್ಯದ ದಾಸರಾಗಿದ್ದಾರೆ. ತಮ್ಮ ಶಾಲೆಯಲ್ಲಿ ಓದುತ್ತಿದ್ದಾನೆ.

ಪುತ್ತೂರಿನಲ್ಲಿ ವಿದ್ಯಾರ್ಥಿನಿಗೆ ಡ್ರಗ್ಸ್ ನೀಡಿ ಗ್ಯಾಂಗ್ ರೇಪ್ 

ಗ್ರಾಮದ ನಿರ್ಜನ ಪ್ರದೇಶಕ್ಕೆ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಲಾಗಿದೆ.  ಇದನ್ನು ವಿಡಿಯೋ ಮಾಡಿ  9 ನೇ ತರಗತಿ ಓದುತ್ತಿರುವ ಮತ್ತೊಬ್ಬನಿಗೆ ಕಳಿಸಲಾಗಿದ್ದು ಆತ ಎಲ್ಲ ಕಡೆ ಶೇರ್ ಮಾಡಿದ್ದಾನೆ.

ಘಟನೆ ನಡೆದ ನಂತರ ಮಗಳನ್ನು ತಂದೆ ಗೃಹಬಂಧನದಲ್ಲಿ ಇರಿಸಿದ್ದ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ತಂದೆ ಪೊಲೀಸರ ಮೊರೆ ಹೋಗಿದ್ದಾನೆ.

ಸಂತ್ರಸ್ತೆಯನ್ನು ವೈದ್ಯಕೀಯ ತಪಾಸಣೆಗೆ ಕಳಿಸಲಾಗಿದ್ದು ಪೊಕ್ಸೋ ಮತ್ತು ಐಟಿ ಆಕ್ಟ್ ಅಡಿಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದೆ.

Follow Us:
Download App:
  • android
  • ios