ಆಟೋ ಚಾಲಕನ ಹತ್ಯೆ, ಪೊಲೀಸ್ ತನಿಖೆಯಲ್ಲಿ ಕಾಮದಾಟ ಬಯಲು

ಮಹಿಳೆಯೊಂದಿಗೆ ಆಟೋ ಚಾಲಕನ ಲವ್ವಿ-ಡವ್ವಿ
ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದವನನ್ನು  ಹತ್ಯೆ ಮಾಡಿದ ಪತಿ
ಆಟೋ ಚಾಲಕನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದ ಪತಿ

Chamarajanagara Police Arrests Accused Who Murdered Auto Driver rbj

ಚಾಮರಾಜನಗರ, (ಜೂನ್.13): ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಬಳಿಯ ದರ್ಗಾದ ಬಳಿ ನಡೆದಿದೆ. 

 ರಾಮನಗರ ಮೂಲದ ಆಟೋ ಚಾಲಕನಾಗಿದ್ದ ಸೈಯದ್ ಮುಜಾಯಿದ್ ಅಲಿಯಾಸ್ ಬರ್ನಿಂಗ್ ಬಾಬಾ ಕೊಲೆಯಾದ ವ್ಯಕ್ತಿ. ಈ ಪ್ರಕರಣದ ಸಂಬಂಧ ತನಿಖೆ ನಡೆಸಿದ ಪೊಲೀಸರು ಐವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ.

Bengaluru Crime News: ಲಾಡ್ಜ್‌ನಲ್ಲಿ ಮಹಿಳೆ ಶವ ಪತ್ತೆ: ಪ್ರಿಯಕರನಿಂದ ಕೊಲೆ ಶಂಕೆ

 ಕಳೆದ ಒಂದು ವಾರದ ಹಿಂದೆ ಸೈಯದ್ ಮೃತದೇಹ ಪತ್ತೆಯಾಗಿತ್ತು. ಅಪರಿಚಿತ ಶವ ಪತ್ತೆಯಾದ ಬಳಿಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಗಳಾದ ಸೈಯದ್ ಸಿಕಂದರ್, ಮುಸಾವೀರ್, ಶೌಕತ್ ಅಲಿ, ಹಬೀಬ್ ವುಲ್ಲಾ, ಸೈಯದ್ ಸಲೀಂರನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ರಾಮನಗರದ ಮೂಲದವರು ಎಂಬ ಮಾಹಿತಿ ತಿಳಿದುಬಂದಿದೆ.

ಮೃತ ಸೈಯದ್ ಮುಜಾಯಿದ್ ಅಲಿಯಾಸ್ ಬರ್ನಿಂಗ್ ಬಾಬಾ ಎನ್ನುವಾತ ಬಂಧಿತ ಆರೋಪಿ ಸೈಯದ್ ಸಿಕಂದರ್ ಪತ್ನಿ ಜೊತೆ ಮೃತ ವ್ಯಕ್ತಿ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಇದರಿಂದ ದರ್ಗಾ ಹೋಗೋಣಾ ಎಂದು ಸೈಯದ್​​ನನ್ನು ಕರೆ ತಂದಿದ್ದ ಆರೋಪಿಗಳು, ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದರು. 

ಪ್ರಕರಣದ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಕಳುಹಿಸಿಲಾಗಿದೆ.

ಟೀಚರಮ್ಮನ ಕಾಮದಾಟ ಬಯಲು
ವಿಜಯಪುರ: 
ಯುವಕನೊಬ್ಬನ ಜೊತೆಗಿನ ಕಾಮದಾಟಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಕೊಲೆ ಮಾಡಿಸಿ ನಾಟಕ ಮಾಡಿದ್ದ ಪತ್ನಿ ನವರಂಗಿ ಆಟವನ್ನು ಪೊಲೀಸ್ರು ಬಯಲಿಗೆಳೆದಿದ್ದಾರೆ.

ಹೌದು.... ವಿಜಯಪುರದಲ್ಲಿ ಇದೇ 8ರಂದು ನಡೆದಿದ್ದ ಕೊಲೆ ಪ್ರಕರಣವೊಂದನ್ನು ಪೊಲೀಸರು ಭೇದಿಸಿದ್ದಾರೆ. ಏಕ್ತಾ ನಗರ ನಿವಾಸಿ ಪ್ರಕಾಶ ಹಳ್ಳಿ(40)ಮನೆಯಲ್ಲೇ ಕೊಲೆಯಾಗಿತ್ತು. ತನ್ನ ಪತಿ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಪತ್ನಿ, ಅಂಗನವಾಡಿ ಟೀಚರ್​ ರಾಜೇಶ್ವರಿ ಹೊಸಮನಿ ಗೋಳೋ ಎಂದು ಅತ್ತಿದ್ದಳು. ಆದರೆ ಇದು ಸಹಜ ಸಾವಲ್ಲ, ಬದಲಿಗೆ ಪತ್ನಿಯೇ ಕೊಲೆ ಮಾಡಿರುವುದು ಎಂದು ಪೊಲೀಸ್ ತನಿಖೆ ವೇಳೆ ಬಟಾಬಯಾಗಿದೆ.

30 ವರ್ಷದ ರಾಜೇಶ್ವರಿ ಅಂಗನವಾಡಿಯಲ್ಲಿ ಟೀಚರ್​ ಆಗಿದ್ದಾಳೆ. ಈಕೆ 24 ವರ್ಷದ ರವಿ ತಳವಾರ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇವರ ಪ್ರೇಮಕ್ಕೆ ಪತಿ ಪ್ರಕಾಶ ಅಡ್ಡಿಯಾಗುತ್ತಿದ್ದರು ಎನ್ನುವ ಕಾರಣಕ್ಕೆ ಊಟದಲ್ಲಿ ನಿದ್ದೆಮಾತ್ರೆ ಕೊಟ್ಟು ನಂತರ ಸಾಯಿಸಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ರಾಜೇಶ್ವರಿ ಹೊಸಮನಿ, ರವಿ ತಳವಾರ ಜತೆ ಇವರಿಗೆ ಸಹಕರಿಸಿರುವ ಗುರುಪಾದ ದಳವಾಯಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲ ವರ್ಷಗಳಿಂದ ಪ್ರಿಯಕರ ರವಿ ತಳವಾರನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು ರಾಜೇಶ್ವರಿ. ಈ ಹಿಂದೆ ಮೂರು ಬಾರಿ ತಿಂಗಳುಗಟ್ಟಲೇ ರವಿ ಜೊತೆ ಓಡಿ ಹೋಗಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ಆಗಾಗ ಗಲಾಟೆ ಆಗುತ್ತಿತ್ತು. ಜೂನ್ 8ರ ರಾತ್ರಿ ಮನೆಗೆ ಬಂದ ಗಂಡನಿಗೆ ಚಿಕನ್ ನಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಟ್ಟಿದ್ದಳು.

Latest Videos
Follow Us:
Download App:
  • android
  • ios