ರಾಯಚೂರು, [ಫೆ.23]: ಫೇಸ್‍ಬುಕ್‍ನಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ಪೋಸ್ಟ್ ಹಾಕುತ್ತಿದ್ದ ಪುಂಡ ಯುವಕನನ್ನ ಜಿಲ್ಲೆಯ ಸೈಬರ್ ಎಕನಾಮಿಕ್ ನಾರ್ಕೋಟಿಕ್ (ಸಿಇಎನ್] ಅಪರಾಧ ಪೊಲೀಸ್ ಠಾಣೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಸಿರವಾರ ತಾಲೂಕಿನ ಮರಕಿಗುಡ್ಡ ತಾಂಡಾದ ಅಮರೇಶ್ ಬಂಧಿತ ಆರೋಪಿ. ಫೇಸ್‍ಬುಕ್‍ನಲ್ಲಿ ನಕಲಿ ಖಾತೆ ತೆರೆಯಲು ಸಹಕರಿಸಿದ್ದ ಇನ್ನೊಬ್ಬ ಆರೋಪಿ ರಾಜು ಪವಾರ ಪರಾರಿಯಾಗಿದ್ದಾನೆ.

ವಿಡಿಯೋ: ಮಹಿಳೆಯ ಅಶ್ಲೀಲ ಪೋಟೋ ಹರಿಬಿಟ್ಟ ವ್ಯಕ್ತಿಗೆ ಬಿಸಿ-ಬಿಸಿ ಕಜ್ಜಾಯ

ಈ ಇಬ್ಬರು ಪುಂಡರು ಓರ್ವ ಮಹಿಳೆಯ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದರು. ಮಹಿಳೆ ಫೋಟೋವನ್ನು ಅಶ್ಲೀಲವಾಗಿ ಮಾರ್ಫಿಂಗ್ ಮಾಡಿ ಫೇಸ್‍ಬುಕ್‍ಗೆ ಅಪ್ಲೋಡ್ ಮಾಡುತ್ತಿದ್ದರು. 

ಅಷ್ಟೇ ಅಲ್ಲದೆ ಕೆಲವು ವಿಡಿಯೋಗಳನ್ನು ಆರೋಪಿಗಳು ಅಪ್ಲೋಡ್ ಮಾಡಿದ್ದಾರೆ. ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಈ ಕುರಿತು ತನಿಖೆ ಆರಂಭಿಸಿದ್ದ ಪೊಲೀಸರಿಗೆ ಆರೋಪಿಗಳು ಫೋಟೋ ಹಾಗೂ ವಿಡಿಯೋ ಅಪ್ಲೋಡ್ ಮಾಡುತ್ತಿದ್ದ ಕಂಪ್ಯೂಟರ್ ಐಪಿ ಅಡ್ರೆಸ್ ಸಿಕ್ಕಿದೆ. ಅದರ ಆಧಾರದ ಮೇಲೆ ಶೋಧಕಾರ್ಯ ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.