ಮುಂಬೈ(ಅ.18): ನಟಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಪ್ರಕರಣ ಸಂಬಂಧ ಹಿರಿಯ ನಟ ಮಿಥುನ್‌ ಚಕ್ರವರ್ತಿ ಅವರ ಪುತ್ರ ಮಹಾಕ್ಷಯ್‌ ವಿರುದ್ಧ ಮುಂಬೈನಲ್ಲಿ ಎಫ್‌ಐಆರ್‌ ದಾಖಲಾಗಿದೆ.

2015ರಲ್ಲಿ ಮಹಾಕ್ಷಯ್‌ ಮನೆಗೆ ತೆರಳಿದ್ದ ವೇಳೆ ಆತ ನೀಡಿದ್ದ ಪಾನೀಯ ಕುಡಿದ ಬಳಿಕ ತನಗೆ ಪ್ರಜ್ಞೆ ತಪ್ಪಿತ್ತು. ಈ ವೇಳೆ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಬಳಿಕವೂ ಮದುವೆಯಾಗುವುದಾಗಿ ನಂಬಿಸಿ ನನ್ನ ಮೇಲೆ 3 ವರ್ಷ ಲೈಂಗಿಕವಾಗಿ ಬಳಸಿಕೊಂಡಿದ್ದ. ಈ ಮಧ್ಯೆ ಗರ್ಭಿಣಿಯಾದಾದ ಬಳಿಕ ಗರ್ಭಪಾತ ಮಾಡುವಂತೆ ಒತ್ತಾಯಿಸುತ್ತಿದ್ದ ಎಂದು ದೂರಿನಲ್ಲಿ ನಟಿ ಆರೋಪಿಸಿದ್ದಾರೆ.

ಈ ನಡುವೆ ಪುತ್ರನ ಕೃತ್ಯದ ಬಗ್ಗೆ ಗೊತ್ತಿದ್ದೂ ಮಹಾಕ್ಷಯ್‌ರ ತಾಯಿ ಯೋಗಿತಾ ಬಾಲಿ ಸುಮ್ಮನಿದ್ದರು ಎಂದು ಮಹಿಳೆ ದೂರಿದ್ದಾಳೆ. ಈ ಹಿನ್ನೆಲೆಯಲ್ಲಿ ಅವರ ಹೆಸರನ್ನೂ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.