Asianet Suvarna News Asianet Suvarna News

ಅನೈತಿಕ ಸಂಬಂಧ ಶಂಕೆ: ಬೆಂಗ್ಳೂರು ಏರ್ಪೋರ್ಟ್‌ನಲ್ಲಿ ವ್ಯಕ್ತಿಯ ಬರ್ಬರ ಹತ್ಯೆ..!

ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಏರ್ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆಗೈಯಲಾಗಿದೆ. ರಾಮಕೃಷ್ಣ ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾನೆ. 

Brutal killing of man at Bengaluru international Airport grg
Author
First Published Aug 28, 2024, 9:55 PM IST | Last Updated Aug 28, 2024, 9:55 PM IST

ಬೆಂಗಳೂರು(ಆ.28):  ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬನ್ನ ದುಷ್ಕರ್ಮಿಯೊಬ್ಬ ಭೀಕರವಾಗಿ ಕೊಲೆಗೈದ ಘಟನೆ ಇಂದು(ಬುಧವಾರ) ನಡೆದಿದೆ. 

ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಏರ್ಪೋರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆಗೈಯಲಾಗಿದೆ. ರಾಮಕೃಷ್ಣ ಎಂಬಾತನೇ ಕೊಲೆಯಾದ ದುರ್ದೈವಿಯಾಗಿದ್ದಾನೆ.  

ಪ್ರೀತಿಸಿ ಮದುವೆಯಾದ ಸುಂದರಾಂಗಿ ಹೆಂಡ್ತಿಯ ಶೀಲ ಶಂಕಿಸಿ, ಕೊಂದೇಬಿಟ್ಟ ಗಂಡ!

ಏರ್ಪೋರ್ಟ್‌ನ ಟರ್ಮಿನಲ್ 1ನಲ್ಲಿ ಚಾಕುವಿನಿಂದ ಇರಿದು‌ ರಾಮಕೃಷ್ಣನನ್ನ ಕೊಲೆ ಮಾಡಿ ದುಷ್ಕರ್ಮಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ. 

Latest Videos
Follow Us:
Download App:
  • android
  • ios