ಮದುವೆಯಾಗುವಂತೆ ಒತ್ತಡ, 19 ವರ್ಷದ ಗರ್ಭಿಣಿ ಗೆಳತಿಯನ್ನು ಕೊಂದು ಹೂತಿಟ್ಟ ಬಾಯ್‌ಫ್ರೆಂಡ್‌ ಸಲೀಂ!

19 ವರ್ಷದ ಯುವತಿಯನ್ನು ಕೊಂದ ಆರೋಪದ ಮೇಲೆ ದೆಹಲಿ ಪೊಲೀಸರು ಸಂಜು ಅಲಿಯಾಸ್‌ ಸಲೀಂ ಹಾಗೂ ಪಂಕಜ್‌ ಎನ್ನುವವರನ್ನು ಬಂಧಿಸಿದ್ದಾರೆ.

Boyfriend kills 19 year-old pregnant girlfriend in Delhi san

ದೆಹಲಿ (ಅ.26): ಹರಿಯಾಣದ ನಿರ್ಜನ ಪ್ರದೇಶದಲ್ಲಿ 19 ವರ್ಷದ ಗರ್ಭಿಣಿ ಯುವತಿಯನ್ನು ಕೊಂದು ಶವವನ್ನು ಗುಂಡಿಯಲ್ಲಿ ಹೂತುಹಾಕಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ, ಮೂರು ಜನರು ಸಂಜು ಅಲಿಯಾಸ್‌ ಸಲೀಂ, ಪಂಕಜ್‌ ಹಾಗೂ ರಿತಿಕ್‌. ಅಪರಾಧದಲ್ಲಿ ಭಾಗಿಯಾಗಿದ್ದಾರೆ. ಸಂಜು ಮತ್ತು ಪಂಕಜ್ ಅವರನ್ನು ಬಂಧಿಸಲಾಗಿದ್ದು, ಅಪರಾಧವನ್ನು ಒಪ್ಪಿಕೊಂಡಿದ್ದಾರೆ, ರಿತಿಕ್ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ. ಸಂಜು ಅಲಿಯಾಸ್‌ ಸಲೀಂ ಎನ್ನುವ ವ್ಯಕ್ತಿಯ ಜೊತೆ ಸಂಬಂಧ ಬೆಳೆಸಿದ್ದ ಯುವತಿ ಗರ್ಭಿಣಿಯಾಗಿದ್ದಳು. ಇದರಿಂದಾಗಿ ತನ್ನನ್ನು ಮದುವೆಯಾಗುವಂತೆ ಆಕೆ ಒತ್ತಡ ಹೇರುತ್ತಿದ್ದಳು. ಇದೇ ಕಾರಣಕ್ಕೆ ಆಕೆಯ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ತನ್ನ ಸಹೋದರಿ ನಾಪತ್ತೆಯಾಗಿದ್ದಾಳೆ ಎಂದು ದೆಹಲಿ ಪೊಲೀಸರು ಅಕ್ಟೋಬರ್ 22 ರಂದು ಸಂತ್ರಸ್ತೆಯ ಸಹೋದರನಿಂದ ದೂರು ಸ್ವೀಕರಿಸಿದಾಗ ಈ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೇ ತನ್ನ ಸಹೋದರಿಯೊಂದಿಗೆ ಸ್ನೇಹ ಬೆಳೆಸಿದ ವ್ಯಕ್ತಿಯೊಬ್ಬ ಆಕೆಯ ನಾಪತ್ತೆಯಲ್ಲಿ ಭಾಗಿಯಾಗಿರಬಹುದು ಎಂದು ಅವರು ಶಂಕಿಸಿದ್ದಾರೆ.

ದೂರುಗಳನ್ನು ಸ್ವೀಕರಿಸಿದ ಕೂಡಲೇ, ಕೊಲೆಯ ತನಿಖೆಗಾಗಿ ದೆಹಲಿ ಪೊಲೀಸರ ಬಹು ತಂಡಗಳನ್ನು ರಚಿಸಿತ್ತು. ಈ ವೇಳೆ ಮಹಿಳೆಯ ಫೋನ್ ಸ್ವಿಚ್ ಆಫ್ ಆಗಿರುವುದು ಗೊತ್ತಾಗಿತ್ತು. ದೆಹಲಿ ಪೊಲೀಸರು ಸಂಜು ಮತ್ತು ಪಂಕಜ್ ಅವರನ್ನು ಇಲ್ಲಿಯವರೆಗೆ ಬಂಧಿಸಿದ್ದಾರೆ ಮತ್ತು ಅವರು ಗರ್ಭಿಣಿಯಾಗಿದ್ದ 19 ವರ್ಷದ ಯುವತಿಯನ್ನು ಕೊಂದು ಶವವನ್ನು ಹೂತಿಟ್ಟಿದ್ದಾಗಿ ಒಪ್ಪಿಕೊಂಡಿದ್ದಾರೆ. ಬಂಧಿತ ಆರೋಪಿಗಳು ವಿಚಾರಣೆಯ ವೇಳೆ, ಅಕ್ಟೋಬರ್ 21 ರಂದು ಕಾರನ್ನು ಬಾಡಿಗೆಗೆ ತೆಗೆದುಕೊಂಡು ಸಂತ್ರಸ್ತೆಯನ್ನು ಆಕೆಯ ಕೆಲವು ವಸ್ತುಗಳ ಜೊತೆಗೆ ಕರೆದುಕೊಂಡು ಹೋಗಿದ್ದೆವು ಎಂದು ತಪ್ಪೊಪ್ಪಿಕೊಂಡಿದ್ದಾನೆ.

ತನಿಖಾ ಅಧಿಕಾರಿಗಳು ಹೇಳುವ ಪ್ರಕಾರ ಯುವತಿ, ಸಂಜುನನ್ನು ಮದುವೆಯಾಗಲು ಬಯಸಿದ್ದಳು ಎಂದು ಶಂಕಿಸಿದ್ದಾರೆ. ಆದರೆ, ಸಂಜು ಮಾತ್ರ ಇನ್ನೂ ಸ್ವಲ್ಪ ಸಮಯ ಕೇಳುತ್ತಿದ್ದ. ಪೋಲೀಸರ ಪ್ರಕಾರ, ಕರ್ವಾ ಚೌತ್ ದಿನದಂದು ಸಂತ್ರಸ್ಥೆ ಉಪವಾಸ ಇರಿಸಿಕೊಂಡಿದ್ದಳು. ಈ ವೇಳೆ ಸಂಜು ಜೊತೆ ಈಕೆಯ ಗಲಾಟೆಯಾಗಿದೆ. ಬಳಿಕ ಇಬ್ಬರೂ ಭೇಟಿಯಾಗಲು ನಿರ್ಧಾರ ಮಾಡಿದ್ದರು.

ಗಲಾಟೆ ನಡೆದ ಬಳಕ ಸಂಜು ತನ್ನ ಸ್ನೇಹಿತರಾದ ಪಂಕಜ್‌ ಹಾಗೂ ರಿತಿಕ್‌ಗೆ ಕರೆ ಮಾಡಿ, ಲಾಂಗ್‌ ಡ್ರೈವ್‌ಗೆ ಹೋಗಬೇಕು ಒಂದು ಕಾರ್ ಅರೇಂಜ್‌ ಮಾಡುವಂತೆ ಕೇಳಿಕೊಂಡಿದ್ದಾನೆ. ಅವರೆಲ್ಲರೂ ಕಾರನ್ನು ಹತ್ತಿ ಹರಿಯಾಣದ ರೋಹ್ಟಕ್ ಕಡೆಗೆ ಪ್ರಯಾಣ ಮಾಡಿದ್ದಾರೆ. ನಂತರ ಸಂತ್ರಸ್ತೆಯನ್ನು ಕೊಂದು ಆಕೆಯ ದೇಹವನ್ನು ರೋಹ್ಟಕ್ ಜಿಲ್ಲೆಯ ಮದೀನಾದ ನಿರ್ಜನ  ಪ್ರದೇಶದಲ್ಲಿ ನಾಲ್ಕು ಅಡಿ ಆಳದ ಗುಂಡಿಯ ಅಡಿಯಲ್ಲಿ ಹೂತು ಹಾಕಿದರು ಎಂದು ಪ್ರಾಥಮಿಕ ತನಿಖೆಯ ಪ್ರಕಾರ ಪೊಲೀಸರು ತಿಳಿಸಿದ್ದಾರೆ.

ಮುಂಬೈನಲ್ಲಿ ಆಸ್ತಿ ಖರೀದಿ ಮಾಡಿದ ಸುನಿಲ್‌ ಶೆಟ್ಟಿ, ಅಹಾನ್‌ ಶೆಟ್ಟಿ!

19 ವರ್ಷದ ಸಂತ್ರಸ್ತೆಯ ಮೃತದೇಹವು ಮದೀನಾದ ನಿರ್ಜನ ಪ್ರದೇಶದಲ್ಲಿನ ಹಳ್ಳದಿಂದ ಪತ್ತೆಯಾಗಿದೆ. ಪ್ರಕರಣದ ಮೂರನೇ ಆರೋಪಿ ರಿತಿಕ್‌ಗಾಗಿ ಪೊಲೀಸರು ಹುಡುಕುತ್ತಿದ್ದಾರೆ ಮತ್ತು ಸಂತ್ರಸ್ತೆ ಗರ್ಭಿಣಿ ಎಂದು ಕುಟುಂಬದ ಕೆಲವರು ಹೇಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

10 ಸಾವಿರ ಕೋಟಿಯ ವಿಲ್‌ನಲ್ಲಿ ನಂಬಿಕಸ್ತ ಗೆಳೆಯ ಶಂತನು ನಾಯ್ಡುರನ್ನು ಮರೆಯದ ರತನ್‌ ಟಾಟಾ!

Latest Videos
Follow Us:
Download App:
  • android
  • ios