Asianet Suvarna News Asianet Suvarna News

ನಟ ಸುಶಾಂತ್‌ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಏಮ್ಸ್‌ ಅಂತಿಮ ವರದಿ!

ನಟ ಸುಶಾಂತ್‌ದು ಕೊಲೆ ಅಲ್ಲ, ಆತ್ಮ​ಹತ್ಯೆ| ನೇಣು ಹಾಕಿಕೊಂಡು ಸಾವು| ದೇಹದ ಇತರೆಡೆ ಗಾಯದ ಗುರು​ತಿ​ಲ್ಲ| ಸಿಬಿ​ಐಗೆ ಏಮ್ಸ್‌ನಿಂದ ಅಂತಿಮ ವರ​ದಿ| ಪ್ರಕ​ರ​ಣಕ್ಕೆ ಮಹ​ತ್ವದ ತಿರು​ವು| ‘ಆ​ತ್ಮ​ಹ​ತ್ಯೆಗೆ ಪ್ರಚೋ​ದ​ನೆ’ ದೃಷ್ಟಿ​ಕೋ​ನ​ದಲ್ಲಿ ಸಿಬಿಐನಿಂದ ತನಿಖೆ ಸಾಧ್ಯ​ತೆ

Bollywood Star Sushant Singh Rajput died by suicide was not murdered AIIMS tells CBI pod
Author
Bangalore, First Published Oct 4, 2020, 7:38 AM IST
  • Facebook
  • Twitter
  • Whatsapp

ಮುಂಬೈ(ಅ.04): ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜ​ಪೂತ್‌ ಸಾವಿನ ಪ್ರಕ​ರ​ಣಕ್ಕೆ ಮಹ​ತ್ವದ ತಿರುವು ಸಿಕ್ಕಿದೆ. ‘ಸುಶಾಂತ್‌ ಅವ​ರದ್ದು ಕೊಲೆ ಅಲ್ಲ. ಅದು ಆತ್ಮ​ಹತ್ಯೆ. ನೇಣು ಹಾಕಿಕೊಂಡು ಅವರು ಸಾವಿಗೆ ಶರಣಾಗಿದ್ದಾ​ರೆ’ ಎಂದು ದಿಲ್ಲಿಯ ಪ್ರತಿ​ಷ್ಠಿತ ಏಮ್ಸ್‌ ಆಸ್ಪ​ತ್ರೆಯ ವೈದ್ಯ​ಕೀಯ ಮಂಡ​ಳಿಯು ಪ್ರಕ​ರ​ಣದ ತನಿಖೆ ನಡೆ​ಸು​ತ್ತಿ​ರುವ ಸಿಬಿ​ಐಗೆ ಅಂತಿ​ಮ ವರದಿ ನೀಡಿ​ದೆ. ‘ಸುಶಾಂತ್‌ ಅ​ವ​ರಿಗೆ ವಿಷ​ಪ್ರಾ​ಶನ ಮಾಡಿ​ಸಿದ ಅಥವಾ ಬೇರೆ​ಯ​ವರು ಹಗ್ಗ ಬಿಗಿದ ಯಾವುದೇ ಕುರುಹು ಇಲ್ಲ’ ಎಂದೂ ವರದಿ ಸ್ಪಷ್ಟ​ಪ​ಡಿ​ಸಿ​ದೆ.

‘ಸುಶಾಂತ್‌ ಅವ​ರದ್ದು ಆತ್ಮ​ಹತ್ಯೆ ಅಲ್ಲ, ಕೊಲೆ​’ ಎಂದು ಅವರ ಕುಟುಂಬ ಆರೋ​ಪಿ​ಸು​ತ್ತಿದೆ. ಸುಶಾಂತ್‌ ಬಿಹಾರ ಮೂಲ​ದ​ವ​ರಾದ ಕಾರ​ಣ ಅಲ್ಲೂ ಈ ಕುರಿತ ರಾಜ​ಕೀಯ ಬಲು ಜೋರಾಗಿ ನಡೆ​ದಿದೆ. ಈ ಸಂದ​ರ್ಭ​ದಲ್ಲಿ ಏಮ್ಸ್‌ ವರ​ದಿ ಮಹ​ತ್ವ ಪಡೆ​ದಿ​ದೆ. ಹೀಗಾಗಿ ಇನ್ನು ಮುಂದೆ ಸಿಬಿಐ, ‘ಕೊಲೆ’ ಬದಲು ‘ಆ​ತ್ಮ​ಹ​ತ್ಯೆಗೆ ಪ್ರಚೋ​ದ​ನೆ’ ದೃಷ್ಟಿ​ಕೋ​ನ​ದಲ್ಲಿ ತನಿಖೆ ನಡೆ​ಸ​ಲಿದೆ ಎಂದು ಮೂಲ​ಗಳು ಹೇಳಿ​ವೆ.

ಸಿಬಿಐ ಕೋರಿಕೆ ಮೇರೆಗೆ ಸುಶಾಂತ್‌ ಮರ​ಣೋ​ತ್ತರ ವರ​ದಿ ಮರು​ಮೌ​ಲ್ಯ​ಮಾ​ಪ​ನ​ವನ್ನು ಡಾ

ಸುಧೀರ್‌ ಗುಪ್ತಾ ನೇತೃ​ತ್ವದ ಏಮ್ಸ್‌ನ 6 ವಿಧಿ​ವಿ​ಜ್ಞಾ​ನ ತಜ್ಞರ ವೈದ್ಯ​ಕೀಯ ಮಂಡ​ಳಿ ನಡೆ​ಸಿದೆ. ‘ಸು​ಶಾಂತ್‌ ನೇಣು ಬಿಗಿ​ದು​ಕೊಂಡಿ​ದ್ದಾರೆ. ಇದು ಆತ್ಮ​ಹ​ತ್ಯೆ​ಯಿಂದ ಸಂಭ​ವಿ​ಸಿದ ಸಾವು ಎಂದು ಸಿಬಿ​ಐಗೆ ವರದಿ ನೀಡಿ​ದ್ದೇ​ವೆ. ನೇ​ಣಿಗೆ ಹೊರ​ತಾಗಿ ದೇಹದ ಇತರ ಭಾಗ​ದಲ್ಲಿ ಯಾವುದೇ ಗಾಯ​ಗ​ಳಿಲ್ಲ. ಬದು​ಕಲು ಹೋರಾ​ಡಿದ ಯಾವುದೇ ಕುರು​ಹು​ಗ​ಳಿ​ಲ್ಲ’ ಎಂದು ಗುಪ್ತಾ ಸ್ಪಷ್ಟ​ಪ​ಡಿ​ಸಿ​ದ್ದಾ​ರೆ.

‘ಸು​ಶಾಂತ್‌ ಅವರ ದೇಹದ ಮೇಲೆ ಗುರು​ತು​ಗ​ಳಿವೆ ಎಂದ ಮಾತ್ರಕ್ಕೆ ಅದರ ಆಧಾ​ರದ ಮೇಲೆ ಯಾವುದೇ ತೀರ್ಮಾ​ನ​ಕ್ಕೆ ಬರ​ಲಾ​ಗ​ದು’ ಎಂದು ಇತ್ತೀ​ಚೆಗೆ ಕೂಡ ಡಾ

ಗುಪ್ತಾ ಹೇಳಿ​ದ್ದರು. ‘ಸು​ಶಾಂತ್‌ ದೇಹದ ಮೇಲೆ ಗುರು​ತು​ಗ​ಳಿದ್ದು, ಇದು ಕೊಲೆ ಎಂಬು​ದನ್ನು ಸ್ಪಷ್ಟ​ವಾಗಿ ತೋರಿ​ಸು​ತ್ತದೆ’ ಎಂದು ಸುಶಾಂತ್‌ ಕುಟುಂಬದ ವಕೀಲ ವಿಕಾಸ್‌ ಸಿಂಗ್‌ ಮಾಡಿದ ಆರೋಪಕ್ಕೆ ಅವರು ಈ ಪ್ರತಿ​ಕ್ರಿಯೆ ನೀಡಿ​ದ್ದ​ರು.

ಇದನ್ನೂ ನೋಡಿ | ಸುಶಾಂತ್ ಪುನರ್ಜನ್ಮ ಬಗ್ಗೆ ರಾಖಿ ಸಾವಂತ್ ಹೇಳಿದ್ದಿಷ್ಟು...!

"

 

Follow Us:
Download App:
  • android
  • ios