ಜಜ್ಪುರ(ಜ.  29) ಓರಿಸ್ಸಾದ ಜಜ್ಪುರದ ರಸ್ತೆ ಬದಿಯಲ್ಲಿ 21 ವರ್ಷದ ವಿದ್ಯಾರ್ಥಿನಿ ಶವ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಗೆಳೆಯನನ್ನು ಗುರುವಾರ ಸಂಜೆ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಭುವನೇಶ್ವರ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಶವ ಕುವಾಖಿಯಾ ಪೊಲೀಸ್ ಠಾಣೆ ಪ್ರದೇಶದ ಮುಲಾಪಾಲಾ ಚಾಚಕ್  ಬಳಿ ಬುಧವಾರ ಪತ್ತೆಯಾಗಿತ್ತು.

ಪತ್ನಿ ಗರ್ಭಿಣಿ, ಕಾನೂನು ವಿದ್ಯಾರ್ಥಿನಿಗೆ ಖಾಸಗಿ ಅಂಗ ತೋರಿಸಿ ಪರಾರಿ!

ಮಯೂರ್ಭಂಜ್ ಮೂಲದ ವಿದ್ಯಾರ್ಥಿನಿ, ಭುವನೇಶ್ವರದಿಂದ ಮನೆಗೆ ಮರಳುತ್ತಿದ್ದ ವೇಳೆ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.  ಭುವನೇಶ್ವರ ಮತ್ತು ಮಯೂರ್ಭಂಜ್ ನಡುವೆ ಇರುವ ಜಜ್ಪುರದಲ್ಲಿ ಶವ ಪತ್ತೆಯಾದ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು.

ಕೆಂಪು ಸ್ಕೂಟರ್ ಒಂದರಲ್ಲಿ ಶವವವನ್ನು ಸಾಗಿಸಿಕೊಂಡು ಬಂದು ರಸ್ತೆ ಬದಿ ಹಾಕಿರುವ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ ಎಂದು  ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ರಾಹುಲ್ ಪಿ.ಆರ್ ತಿಳಿಸಿದ್ದಾರೆ. 

ಹತ್ಯೆಗೀಡಾದ ಯುವತಿಯ ಗೆಳೆಯ ಹಾಗೂ ಇನ್ನೊಬ್ಬನನ್ನು ವಶಕ್ಕೆ ಪಡೆಯಲಾಗಿದೆ.  ಗೆಳೆಯನೇ ಆಕೆಯ ಹತ್ಯೆ ಮಾಡಿದ್ದಾನೆ ಎಂದು ಯುವತಿ ತಂದೆ ಆರೋಪಿಸಿದ್ದು ಯುವತಿಯ ಪೋನ್ ಕರೆಗಳ ಆಧಾರದಲ್ಲಿ ತನಿಖೆ ಮುಂದುವರಿದಿದೆ.