ಪಾಟ್ನಾ(ಮಾ.05): ಅಪ್ರಾಪ್ತ ಮಗನ ಮುಂದೆಯೇ ವಿಧವೆಯನ್ನು ಗ್ಯಾಂಗ್ ರೇಪ್ ಮಾಡಿದ ಘಟನೆ ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಸೇರಿ 30 ವರ್ಷದ ಮಹಿಳೆಯ ಮೇಲೆ ಕ್ರೂರವಾಗಿ ಅತ್ಯಾಚಾರ ಮಾಡಿದ್ದಾರೆ.

ಚಾಕೈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಧವೆ 13 ವರ್ಷದ ಮಗನ ಜೊತೆ ವಾಸವಿದ್ದರು. ಆಕೆಯ ಮೊದಲ ಮಗ 16 ವರ್ಷದ ಬಾಲಕ ಸೂರತ್ಗೆ ಕೆಲಸಕ್ಕೆಂದು ಹೋಗಿದ್ದ.

ಉಸಿರುಗಟ್ಟಿಸಿ ಒಂಟಿ ಮಹಿಳೆ ಕೊಲೆ: ಚಿನ್ನಾಭರಣ ಲೂಟಿ

ಮಧ್ಯರಾತ್ರಿ ಆಕೆಯ ಸಹೋದರಿಯ  ಪತಿ ಸುಕ್ದೇವ್ ಯಾದವ್ ಮತ್ತು ಆತನ ಸಂಬಂಧಿ ಮಹೇಂದ್ರ ಯಾದವ್ ಬಲವಂತವಾಗಿ ಮನೆಯೊಳಗೆ ಪ್ರವೇಶಿಸಿ ಆಕೆಯ ಅಪ್ರಾಪ್ತ ಮಗನ ಮುಂದೆಯೇ ಗ್ಯಾಂಗ್ ರೇಪ್ ಮಾಡಿದ್ದಾರೆ.

ನಂತರ ಮಹಿಳೆಯ ಅಪ್ರಾಪ್ತ ಮಗ ಅಮ್ಮನೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದ. ಆರೋಪಿಗಳ ವಿರುದ್ಧ ಕೇಸು ದಾಖಲಿಸಲು ಬಂದಿದ್ದರು. ಆರಂಭದಲ್ಲಿ ಮಹಿಳೆ ತನಗೆ ಹೊಡೆದಿದ್ದಾಗಿ ಮಾತ್ರ ಹೇಳಿದ್ದರು. ನಂತರ ಆಕೆಯ ಹೇಳಿಕೆ ದಾಖಲಿಸುವಾಗ ತನ್ನಮೇಲೆ ಅತ್ಯಾಚಾರ ನಡೆದಿದ್ದನ್ನು ತಿಳಿಸಿದ್ದಾಳೆ.

ಸ್ಕೂಲ್‌ನಲ್ಲಿ ವಿದ್ಯಾರ್ಥಿನಿ ಜೊತೆ ಸರಸ: ತನ್ನದೇ ಸೆಕ್ಸ್ ವಿಡಿಯೋ ಶೂಟ್ ಮಾಡಿದ ನಟ

ಮಹಿಳೆಯ ವೈದ್ಯಕೀಯ ಪರೀಕ್ಷೆಯನ್ನೂ ಮಾಡಲಾಗಿದೆ. ಮಹಿಳೆಗೆ ಸುಕ್ದೇವ್ ಜೊತೆ ಭೂಮಿ ಸಂಬಂಧ ಜಗಳ ಇತ್ತು ಎನ್ನಲಾಗಿದೆ. 
ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಮೂವರು ಯುವಕರು 20 ವರ್ಷದ ಯುವತಿಯನ್ನು ಉತ್ತರ ಪ್ರದೇಶದ ಮಹೊಬ ನಗರದಲ್ಲಿ ಗ್ಯಾಂಗ್ ರೇಪ್ ಮಾಡಿದ್ದಾರೆ.  ಗ್ಯಾಂಗ್ ರೇಪ್ ಮಾಡಿ ಅದರ ವಿಡಿಯೋವನ್ನು ಮಾಡಿದ್ದಾಗಿ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ.