ಬೆಂಗಳೂರು[ಮಾ. 10]  ಹೆಂಡತಿ ಸುಂದರಿ ಅಲ್ಲ ಎಂದು ಆಕೆಯನ್ನು ಹತ್ಯೆ ಮಾಡಲು ಮುಂದಾದ ಪತಿರಾಯನೊಬ್ಬನ ಕತೆ ಇದು. ಬೆಂಗಳೂರಿನಲ್ಲಿಯೇ ಬೆಳಕಿಗೆ ಬಂದ ಪ್ರಕರಣ ಹಲವಾರು ಅನುಮಾನಗಳನ್ನು ಎತ್ತಿದೆ.

ವಿಜಯನಗರದ ಮಾರೇನಹಳ್ಳಿ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ವಿಜಯಲಕ್ಷ್ಮಿ ಪತಿಯಿಂದ ಹಲ್ಲೆಗೊಳಗಾದ ಪತ್ನಿ. ಶಶಿಕುಮಾರ್ ಹಾಗೂ ವಿಜಯಲಕ್ಷ್ಮಿಗೆ ವರ್ಷದ ಹಿಂದೆ ಮದುವೆಯಾಗಿತ್ತು.  ಮದುವೆಯಾಗಿ 6 ತಿಂಗಳ ನಂತರ ಪತ್ನಿ ಚೆನ್ನಾಗಿಲ್ಲ ಎಂದು ವರಸೆ ಬದಲಿಸಿದ್ದ ಪತಿರಾಯ ಸಲ್ಲದ ಕಾರಣ ನೀಡಿ ಕ್ಯಾತೆ ತೆಗೆಯುತ್ತಿದ್ದ.

ಶಿರಸಿ: ಹಣಕ್ಕಾಗಿ ಮನೆಯನ್ನೇ ವೇಶ್ಯಾವಾಟಿಕೆ ಅಡ್ಡೆ ಮಾಡಿಕೊಂಡ್ರು!

ನೀನು ನೋಡಲು ಚೆನ್ನಾಗಿಲ್ಲ, ನಾನು ಬೇರೆ ವಿವಾಗವಾಗಬೇಕು ಎಂದಿದ್ದ ಶಶಿಕುಮಾರ್  ಪತ್ನಿಗೆ ನಿರಂತರವಾಗಿ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ. ಈ  ಕಾರಣಕ್ಕೆ ಪತ್ನಿ ತವರು ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಳು.

ಇದಾದ ಮೇಲೆ ಇಬ್ಬರನ್ನೂ ಕೂರಿಸಿ ವಿಜಯಲಕ್ಷ್ಮಿ ಪೋಷಕರು ಬುದ್ಧಿಮಾತು ಹೇಳಿದ್ದರು. ತದನಂತರ ಶಶಿಕುಮಾರ್ ಮನೆಗೆ ಹೆಂಡತಿ ತರಳಿದ್ದರು. ಈ ನಡುವೆ ವಿಜಯಲಕ್ಷ್ಮಿಗೆ ಗೊತ್ತಿಲ್ಲದೇ ವಿಚ್ಛೇದನಕ್ಕೆ ಅರ್ಜಿ ಹಾಕಿ ಸಹಿ ಮಾಡುವಂತೆ ಒತ್ತಾಯ ಮಾಡಿದ್ದ.

ಸಹಿ ಮಾಡಲು ನಿರಾಕರಿಸಿದ್ದಕ್ಕೆ ಕಬ್ಬಿಣದ ರಾಡ್ ನಿಂದ ಮಾರಣಾಂತಿಕ ಹಲ್ಲೆಮ ಮಾಡಿದ್ದು ನೀನು  ಸತ್ತರೆ ನಾನು ಬೇರೆ ವಿವಾಹ ವಾಗಬಹುದು ಎಂದು ಹೇಳಿದ್ದ. ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಜಯಲಕ್ಷ್ಮಿ ಭದ್ರತೆ ಒದಗಿಸಲು ಕೋರಿ ವಿಜಯನಗರ ಪೊಲೀಸ್ ಠಾಣೆಗೆ ಮನವಿ ಮಾಡಿಕೊಂಡಿದ್ದು ಗಂಡನ ವಿರುದ್ಧ ದೂರು ನೀಡಿದ್ದಾರೆ.