ಬೆಂಗಳೂರು[ನ.27]: ಕಂಠಪೂರ್ತಿ ಕುಡಿದ ಟೆಕ್ಕಿಯೊಬ್ಬ ಕೋಣೆಯಲ್ಲಿ ಮಲಗಿದ್ದ ಸ್ನೇಹಿತನ ಪತ್ನಿಯನ್ನು ಅತ್ಯಾಚಾರಗೈಯ್ಯಲು ಯತ್ನಿಸಿರುವ ಘಟನೆ ಸುವನಹಳ್ಳಿಯ ಕ್ರೀಡಾ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ಆರಂಭಿಸಿದ್ದಾರೆ.

ನಿಲಬ್ ನಯನ್ ಬಂಧಿತ ಆರೋಪಿ. ಈತನ ಗೆಳೆಯ ಭಾನುವಾರದಂದು ಕಸುವನಹಳ್ಳಿಯ ಕ್ರೀಡಾ ಕಾಂಪ್ಲೆಕ್ಸ್ ನಲ್ಲಿ ಬರ್ತ್ ಡೇ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದ. ಈ ಕಾರ್ಯಕ್ರಮಕ್ಕೆ ಆತನ ಗೆಳೆಯರೆಲ್ಲಾ ಆಗಮಿಸಿದ್ದರು. ಆದರೆ ಪಾರ್ಟಿಯಲ್ಲಿ ಕಂಠ ಪೂರ್ತಿ ಕುಡಿದ ನಿಲಬ್ ನಯನ್  ಶೌಚಾಲಯಕ್ಕೆ ತೆರಳಿದ್ದ. ಈ ವೇಳೆ ತನ್ನ ಕೆಲಸ ಮುಗಿಸಿ ಮರಳುವುದನ್ನು ಬಿಟ್ಟು ಶೌಚಾಲಯದ ಪಕ್ಕದ ರೂಮ್‌ನಲ್ಲಿ ಮಲಗಿದ್ದ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಬಾಲಕಿ ಮೇಲೆ ರೇಪ್ ಮಾಡಿದ ಕಾಮುಕನಿಗೆ ಬಿದ್ವು ಸಖತ್ ಗೂಸಾ!

ನಿಲಬ್ ನಯನ್ ವರ್ತನೆ ಕಂಡು ಬೆಚ್ಚಿಬಿದ್ದ ಮಹಿಳೆ ಆತನಿಂದ ತಪ್ಪಿಸಿಕೊಂಡು ಕಿರುಚಾಡಿದ್ದಾಳೆ. ಸಂತ್ರಸ್ಥ ಮಹಿಳೆಯ‌ ಗಂಡ ಹಾಗೂ ಸ್ನೇಹಿತರು ಹಿಡಿಯಲು ಯತ್ನಿಸಿದಾಗ ನಿಲಬ್ ಪರಾರಿಯಾಗಿದ್ದಾನೆ.

ಸಂತ್ರಸ್ಥ ಮಹಿಳೆಯ ಗಂಡ ಕೂಡಲೇ ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ದೂರಿನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಸಿಂಧನೂರು: 5 ವರ್ಷದ ಪುಟ್ಟ ಕಂದಮ್ಮನ ಮೇಲೆ ಕಾಮುಕನ ಅಟ್ಟಹಾಸ