ಬೆಂಗಳೂರು(ಫೆ. 24)  ಅತ್ತೆಯನ್ನ ಕೊಂದಿದ್ದ ಆರೋಪಿ ಸೊಸೆಯನ್ನು ಬಂಧಿಸಲಾಗಿದೆ. ಸೌಂದರ್ಯ, ಬಂಧಿತ ಆರೋಪಿತೆ.

ಕಳೆದ ಫೆಬ್ರವರಿ 18 ರಂದು ರಾಜಮ್ಮ ಎಂಬ ವೃದ್ದೆಯ ಕೊಲೆ ನಡೆದಿತ್ತು. ಮೈಸೂರು ರಸ್ತೆಯ ಬ್ಯಾಟರಾಯನಪುರದಲ್ಲಿ ಕೊಲೆ ನಡೆದಿತ್ತು. ಜಡೇಸ್ವಾಮಿ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಸೌಂದರ್ಯ ಕೊಲೆ ಮಾಡಿದ್ದಳು.

ಕೊಲೆಯಾದ ದಿನ ಸೌಂದರ್ಯಳನ್ನ ಭೇಟಿ ಮಾಡಲಿಕ್ಕೆ ಮನೆಗೆ ಬಂದಿದ್ದ ಆಕೆಯ ಪ್ರಿಯಕರ ಜಡೇಸ್ವಾಮಿ ಈ ವೇಳೆ ಸೊಸೆ ಸೌಂದರ್ಯ ಹಾಗೂ ಜಡೇಸ್ವಾಮಿಯ ಲವ್ವಿ ಡವ್ವಿಯನ್ನ ಮೃತ ರಾಜಮ್ಮ ಕಣ್ಣಾರೆ ಕಂಡಿದ್ದರು. ಇದನ್ನು ಪ್ರಶ್ನಿಸಿದ ಅತ್ತೆ ರಾಜಮ್ಮಳನ್ನು ಪ್ರಿಯಕರನ ಜೊತೆ ಸೇರಿ ಕೊಲೆಗೈದಿದ್ದಳು

ನಂತರ ಮನೆಯಲ್ಲಿ ಯಾರು ಇಲ್ಲದ ವೇಳೆ ಅತ್ತೆಯನ್ನ ಕೊಲೆ ಮಾಡಿದ್ದಾರೆ ಅಂತ ಗಂಡನಿಗೆ ಕರೆ ಮಾಡಿ ಹೇಳಿದ್ದಳು. ತನಿಖೆ ನಡೆಸಿದ ಪೊಲೀಸರಿಂದ ಸತ್ಯ ಬಯಲಿಗೆ ಬಂದಿದೆ. ಸದ್ಯ ಆರೋಪಿ ಸೌಂದರ್ಯಳನ್ನ ಬಂಧಿಸಿರುವ ಬ್ಯಾಟರಾಯನಪುರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸೌಂದರ್ಯಳ ಪ್ರಿಯಕರ ಜಡೇಸ್ವಾಮಿ ಪರಾರಿಯಾಗಿದ್ದು ಹುಡುಕಾಟ ನಡೆದಿದೆ.