Asianet Suvarna News Asianet Suvarna News

ಸತ್ತ ತಾಯಿಗೆ ಸ್ಯಾನಿಟರಿ ಪ್ಯಾಡ್ ಹಾಕಿ ಋತುಚಕ್ರದ ನಾಟಕವಾಡಿದ್ದ ಮಗಳು! ಪ್ರಿಯಕರನಿಗಾಗಿ ಹೆತ್ತವಳನ್ನೇ ಕೊಂದ ಪಾಪಿ

ಸತ್ತ ತಾಯಿಗೆ ಸ್ಯಾನಿಟರಿ ಪ್ಯಾಡ್ ಹಾಕಿ ಋತುಚಕ್ರದ ನಾಟಕವಾಡಿದ್ದ ಮಗಳು. ಬೆಂಗಳೂರಿನಲ್ಲಿ ನಡೆದ ಜಯಲಕ್ಷ್ಮೀ ಕೊನೆ ಪ್ರಕರಣದ ರಹಸ್ಯ ಭೇದಿಸಿದ ಬೊಮ್ಮನಹಳ್ಳಿ ಪೊಲೀಸರು.

bengaluru Jayalakshmi murder case daughter arrested who killed her mother at bengaluru rav
Author
First Published Sep 14, 2024, 2:59 PM IST | Last Updated Sep 14, 2024, 3:20 PM IST

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್.ಬೆಂಗಳೂರು

ಬೆಂಗಳೂರು (ಸೆ.14) : ಆಕೆಗೆ ಮದುವೆ ಆಗಿತ್ತು..ಆದರೂ ವಯಸ್ಸಿನ‌ ಹುಡಗನ ಸಾಂಗತ್ಯ ಬೆಳೆಸಿದ್ಳು.ಬಾತ್ ರೂಂ ನಲ್ಲಿ ಅಮ್ಮನ ಕೈಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದೇ ತಡ.. ಅಂದಿನಿಂದ ತಾಯಿಯ ಕೆಂಗಣ್ಣಿಗೆ ಗುರಿಯಾಗಿದ್ಳು.ಇದರಿಂದ ಕೋಪಗೊಂಡ ಮಗಳು ಹಾಗೂ ಪ್ರಿಯಕರ ಜೀವ ಕೊಟ್ಟಾಕೆಯ ಜೀವವನೇ ತೆಗೆದಿದ್ರು..ಕೊಲೆ ಬಳಿಕ ಬಚಾವಾಗಲು ಸ್ಯಾನಿಟರಿ ಪ್ಯಾಡ್ ಕಥೆ ಕಟ್ಟಿದ್ರು.. ಪೊಲೀಸರು ಈ ಕೊಲೆ ಕೇಸ್ ಭೇದಿಸಿದ್ದೇ ರೋಚಕ..

ಬೊಮ್ಮನಹಳ್ಳಿಯ ಹೊಂಗಸಂದ್ರದ ಗುರುಮೂರ್ತಿ ರೆಡ್ಡಿ ಬಡವಾಣೆಯಲ್ಲಿ ನಡೆದಿದ್ದ ಜಯಲಕ್ಷ್ಮಿ ಕೊಲೆ ಪ್ರಕರಣ ತಿರುವು ಪಡೆದುಕೊಂಡಿದೆ.. ಹೆತ್ತ ಮಗಳೇ ಪ್ರಿಯಕರನ ಜೊತೆ ಸೇರಿ ತಾಯಿಯ ಕತ್ತನ್ನ ಟವಲ್ ನಿಂದ ಬಿಗಿದು ಹತ್ಯೆ ಮಾಡಿದ್ಳು.. ಇದೊಂದು ಆಕಸ್ಮಿಕ ಸಾವು ಅಂತಾ ಬಿಂಬಿಸಲು ಹರಸಾಹಸವನ್ನೇ ಮಾಡಿದ್ರು.. ಆದ್ರೆ ಕೊನೆಗೂ ಖಾಕಿಯ ಮುಂದೆ ಇವ್ರ ಡ್ರಾಮ ನಡೆಯಲೇ ಇಲ್ಲ..ಕೊನೆಗೂ ಪೊಲೀಸರು ಕೊಲೆ ರಹಸ್ಯ ಬೇಧಿಸಿದ್ದಾರೆ..

ಹೆಬ್ಬಾವಿನ ಮರಿಯೆಂದು  ವಿಷದ ಹಾವು ಹಿಡಿದು ಕಚ್ಚಿಸಿಕೊಂಡ ವ್ಯಕ್ತಿ ಸಾವು!

 ಸೆಪ್ಟೆಂಬರ್ 11 ರ ಸಂಜೆ 4.30 ರ ಸಮಯ. ಜಯಲಕ್ಷ್ಮೀ ಮನೆಯಲ್ಲಿಯೇ ಸಾವನ್ನಪ್ಪಿದ್ಳು ತಕ್ಷಣಕ್ಕೆ ಮಗಳು ಪವಿತ್ರಾ ಅಲ್ಲೇ ಇದ್ದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ. ವೈದ್ಯರು ಮೃತಪಟ್ಟ ಬಗ್ಗೆ ಖಚಿತ ಪಡಿಸಿದ್ದು ಬೊಮ್ಮನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗಳನ್ನ ವಿಚಾರಸಿದಾಗ ನನ್ನ ತಾಯಿಗೆ ಋತುಚಕ್ರವಾದಾಗ ಹೆಚ್ಚಿ ರಕ್ತಸ್ರಾವ ಆಗುತ್ತೆ. ಇದರಿಂದ ಸುಸ್ತಾಗಿ ಬಾತ್ ರೂಂ ನಲ್ಲಿ ಬಿದ್ದಿದ್ದಳು..ಆಸ್ಪತ್ರೆಗೆ ಕರೆತಂದಿದ್ವಿ. ಆದರೆ ವೈದ್ಯರು ತಾಯಿ ಸಾವನ್ನಪ್ಪಿರೋದಾಗಿ ಹೇಳಿದ್ರು ಎಂದು ಗೋಳಾಡಿದ್ಳು. ಮುಂದೆ ನೋಡೋಣ ಎಂದು ಯೋಚಿಸಿದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಮೃತದೇಹ ಸೆಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಿದ್ರು.

ಶವಾಗಾರದಿಂದ ಹೊರಬಂದ ಇನ್ಸ್ಪೆಕ್ಟರ್ ಪ್ರೀತಂಗೆ ಅದಾಗಲೇ ಇದು ಸಹಜ ಸಾವಲ್ಲ ಕೊಲೆ ಎಂಬ ಅನುಮಾನ ಬಂದಿದೆ. ವಾಪಸ್ಸು ಬಂದು ಸ್ಯಾನಿಟರಿ ಪ್ಯಾಡ್ ಪರಿಶೀಲಿಸಿದ್ದಾರೆ. ಆದರೆ ರಕ್ತದ ಕಲೆಗಳು ಇರ್ಲಿಲ್ಲ. ವೈದ್ಯರ ಬಳಿ ವಿಚಾರಸಿದಾಗ ಋತುಚಕ್ರ ನಿಂತು ಐದು ದಿನವಾಗಿದೆ ಎಂದು ಗೊತ್ತಾಗಿದೆ. ಅಲ್ಲದೇ ಕೈ ಹಾಗೂ ಗಲ್ಲದ ಮೇಲೆ ಉಗುರಿನಿಂದ ಪರಚಿದ ಗುರುತು ಇತ್ತು ಜೊತೆಗೆ ಕತ್ತಿನಲ್ಲಿ ಜೋರಾದ ಬಿಗಿದ ಗುರುತು ಕೂಡ ಇತ್ತು ಹಾಗಾಗಿ ಪೊಲೀಸರಿಗೆ ಅದ್ಯಾಕೊ ಅಳಿಯ ಸುರೇಶ್ ಮೇಲೆ ಅನುಮಾನ ಮೂಡಿತ್ತು..ಯಾವ್ದಕ್ಕೂ ಇರಲಿ ಅಂತಾ ಮಗಳು ಪವಿತ್ರಾಳನ್ನ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಪ್ರಶ್ನೆ ಮಾಡ್ತಿದ್ದಂತೆ..ಮಗಳ ಮೇಲೆಯೇ ಅನುಮಾನ ಪಡ್ತೀರ ಎಂದು ‌ಹೇಳಿದ್ದಾಳೆ. ಇದು ಪೊಲೀಸರಿಗೆ ಮತ್ತಷ್ಟು ಡೌಟ್ ಮೂಡುವಂತೆ ಮಾಡಿತ್ತು. ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ ಪ್ರಿಯಕರ ಲವನೀತ್ ಜೊತೆಗೆ ಸೇರಿ ಕೊಲೆ ಮಾಡಿರೋದನ್ನ ಒಪ್ಪಿಕೊಂಡಿದ್ದಾಳೆ..

ಇನ್ನು ಕೊಲೆ ಮರೆ ಮಾಚಲು ಪವಿತ್ರಾ ಹಾಗೂ ವಲನೀತ್ ನಡೆಸಿದ ಡ್ರಾಮಾ ಅಷ್ಟಿಷ್ಟಲ್ಲ..ಮನೆಯಲ್ಲಿಯೇ ಟವಲ್ ನಿಂದ ಕತ್ತು ಬಿಗಿದು ಸಾಯಿಸಿದ್ದ ಆರೋಪಿಗಳು ಬಳಿಕ. ಮೃತ ಜಯಲಕ್ಷ್ಮೀ ಗೆ ಸ್ಯಾನಿಟರಿ ಪ್ಯಾಡ್ ಹಾಕಿದ್ದಾರೆ..ಇನ್ನೂ ಕತ್ತಿನಲ್ಲಿದ್ದ ಗಾಯದ ಗುರುತು ಬಗ್ಗೆ ವಿಚಾರಸಿದಾಗ ನನ್ನ ತಾಯಿ ಯಾವಾಗಲು ತಲೆಗೆ ಅಮೃತಾಂಜನ್ ಹಚ್ಚಿಕೊಳ್ತಾರೆ. ಜೊತೆಗೆ ತಲೆಗೆ ಸ್ಕಾಫ್ ಕಟ್ಟಿಕೊಳ್ತಾರೆ..ಅದನ್ನ ಬಿಚ್ಚಿದಾಗ ಹೀಗಾಗಿದೆ ಎಂದು ಕಥೆ ಕಟ್ಟಿದ್ಳು.

ಗಂಡ‌ ಇದ್ರು ಬಾಡಿಗೆದಾರನ ಸಂಘ ಮಾಡಿದ್ದ ಪವಿತ್ರಾ 

ಸುರೇಶ್ ಪವಿತ್ರಾ ತಾಯಿಯ ಸ್ವಂತ ತಮ್ಮ. ದಂಪತಿಗೆ 10 ವರ್ಷದ ಹೆಣ್ಣು ಮಗು ಹಾಗೂ 6 ವರ್ಷದ ಒಂದು ಗಂಡು ಮಗು‌ ಇದೆ. ಜಯಲಕ್ಷ್ಮೀ ಸ್ವಲ್ಪ ಸ್ವಲ್ಪ ಹಣ ಕೂಡಿ ಹಾಕಿ ಮೂರು ಕಟ್ಟಡ ಕಟ್ಟಿಸಿದ್ದು. ತಿಂಗಳಿಗೆ ಮೂರು ಲಕ್ಷ ಬಾಡಿಗೆ ಬರುತ್ತೆ. ಗುರುಮೂರ್ತಿ ರೆಡ್ಡಿ ಬಡವಾಣೆಯಲ್ಲಿ ಜಯಲಕ್ಷ್ಮೀ ಹಾಗೂ ಪತಿ ಮುನಿರಾಜು ವಾಸವಿದ್ರೆ, ಸುರೇಶ್ ಹಾಗೂ ಪವಿತ್ರಾ ಮೈಕೋಲೇಔಟ್ ಮನೆಯಲ್ಲಿದ್ರು. ಇತ್ತೀಚೆಗೆ ತಾಯಿಗೆ ಅನಾರೋಗ್ಯ ಇದ್ದಿದ್ದರಿಂದ ಪವಿತ್ರ ತಾಯಿ ನಡೆಸ್ತಿದ್ದ ಅಂಗಡಿ ಬಂದು ನೋಡಿಕೊಳ್ತಿದ್ಳು ಹೀಗೆ ಬರ್ತಿದ್ದವಳಿಗೆ ಪರಿಚಯವಾದವನು ಇದೇ ಮನೆಯಲ್ಲಿ ಬಾಡಿಗೆಗೆ ಇದ್ದ ಲವನೀಶ್. ಇಬ್ಬರ ಮಧ್ಯೆ ಕಳೆದ ಒಂದು ವರ್ಷದಿಂದ ಪ್ರೀತಿ ಶುರವಾಗಿ ಅನೈತಿಕ‌ ಸಂಬಂಧ ಕೂಡ ಬೆಳೆದಿತ್ತು. 

ಅನೈತಿಕ ಸಂಬಂಧ ಪ್ರಶ್ನಿಸಿದ್ದ ಪತ್ನಿಯ ಮೇಲೆ ಹಲ್ಲೆ ಬಳಿಕ ಆತ್ಮಹತ್ಯೆ ಮಾಡಿಕೊಂಡ ಪತಿ!

ಒಂದು ತಿಂಗಳ ಹಿಂದೆ ತಾಯಿ‌ ಹಾಲ್‌ನಲ್ಲಿ ಮಲಗಿದ್ರು. ಈ ವೇಳೆ ಇಬ್ಬರು ಬಾತ್ ರೂಮ್ ಸೇರಿದ್ರು. ತಾಯಿ ಬಂದು ಬಾಗಿಲು ಓಪನ್ ಮಾಡಿದಾಗ ಮಗಳ ಕಳ್ಳಾಟ ಗೊತ್ತಾಗಿದೆ. ಇದರಿಂದಾಗಿ ಜಯಲಕ್ಷ್ಮೀ ನಿರಂತರವಾಗಿ ಮಗಳಿಗೆ ಬುದ್ಧಿ ಹೇಳಿ ಬೈಯ್ದಿದ್ದಾಳೆ. ಅಲ್ಲದೇ ಲವನೀಶ್ ಇದ್ದ ಮನೆ ಕೂಡ ಖಾಲಿ ಮಾಡಿಸಿದ್ರು. ಬಿಟ್ರೆ ಈ ವಿಚಾರ ನನ್ನ ಗಂಡನವರೆಗೂ ಹೋಗಬಹುದು ಎಂದು ಆತಂಕಗೊಂಡಿದ್ದ ಪವಿತ್ರಾ ತಾಯಿಯ ಕೊಲೆ ಪ್ಲಾನ್ ರೆಡಿ ಮಾಡಿದ್ದಾಳೆ. ಪ್ರಿಯಕರನ ಜೊತೆಗೆ ಸೇರಿ ಟವಲ್ ನಿಂದ ಕುತ್ತಿಗೆ ಬಿಗಿದು ತಾಯಿ ಜಯಲಕ್ಷ್ಮೀ ಕೊಲೆ ಮಾಡಿದ್ದಾಳೆ. ಬಳಿಕ ಮುಚ್ಚಿಹಾಕಲು ಸರ್ಕಸ್ ನಡೆಸಿದ್ದಾಳೆ. ಸದ್ಯ ಘಟನೆ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ‌ ಪ್ರಕರಣ ದಾಖಲಾಗಿದ್ದು..ಆರೋಪಿ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ.

Latest Videos
Follow Us:
Download App:
  • android
  • ios