ಕಾರಿನ ಶೆಡ್ ಬಳಿ ಅಜಿತ್ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಹಂತಕರಿಗೆ ದರ್ಶನ್ ಕರಿಯ ಸಿನಿಮಾ ಸ್ಪೂರ್ತಿ!
ಪುಲಿಕೇಶಿ ನಗರದ ಪಿಎಸ್‌ಕೆ ನಾಯ್ಡು ಲೇಔಟ್‌ನ ಕಾರಿನ ಶೆಡ್ ಬಳಿ ಬುಧವಾರ ನಡೆದಿದ್ದ ದೇವನಹಳ್ಳಿ ಐಟಿಸಿ ಖಾಸಗಿ ಕಂಪನಿ ಉದ್ಯೋಗಿ ಅಜಿತ್ ಹತ್ಯೆಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ದರ್ಶನ್ ಸಿನೆಮಾ ಸ್ಫೂರ್ತಿ ಪಡೆಯಲಾಗಿದೆ.
ಬೆಂಗಳೂರು (ಜು.5): ಪುಲಿಕೇಶಿ ನಗರದ ಪಿಎಸ್‌ಕೆ ನಾಯ್ಡು ಲೇಔಟ್‌ನ ಕಾರಿನ ಶೆಡ್ ಬಳಿ ಬುಧವಾರ ನಡೆದಿದ್ದ ದೇವನಹಳ್ಳಿ ಐಟಿಸಿ ಖಾಸಗಿ ಕಂಪನಿ ಉದ್ಯೋಗಿ ಅಜಿತ್ (30) ಹತ್ಯೆ ನಡೆದು 24 ತಾಸಿನೊಳಗೆ ಇಬ್ಬರು ಪ್ರಮುಖ ಆರೋಪಿಗಳನ್ನು ಪುಲಿಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಂತಕರಾದ ದೊಡ್ಡಗುಬ್ಬಿಯ ಕಿರಣ್ ಹಾಗೂ ರಾಹುಲ್ ಬಂಧಿತರಾಗಿದ್ದು, ಮತ್ತೋರ್ವ ಆರೋಪಿ ಬಾಲಾಜಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಆದರೆ ಇದೀಗ ಅಜಿತ್ ಕೊಲೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದೆ. ಹಂತಕರಿಗೆ ದರ್ಶನ್ ನ ಕರಿಯ ಸಿನಿಮಾ ಸ್ಪೂರ್ತಿ ಎಂದು ತಿಳಿದು ಬಂದಿದೆ. 'ಆ ರೀತಿ' ಮಾಡಿದರೆ ಟಾರ್ಗೆಟ್ ಮಿಸ್ಸಾಗೋದೆ ಇಲ್ಲ ಎಂಬ ನಂಬಿಕೆ ಹಂತಕರಿಗಿತ್ತು. ಸಿನಿಮಾ ಸ್ಫೂರ್ತಿ ಪಡೆದು ಅಜಿತ್ ಹತ್ಯೆಗೆ ಮುಂಚೆ ಹಂತಕರ ಪೂರ್ವ ತಯಾರಿ ನಡೆದಿತ್ತು.
ಮದುವೆಯಾದವನ ಜತೆ ವಿದ್ಯಾರ್ಥಿನಿಯ ಲವ್ವೀ ಡವ್ವೀ, ನಾ ನಿನ್ನ ಬಿಟ್ಟಿರಲಾರೆನೆಂದು ಇಬ್ಬರೂ ಆತ್ಮಹತ್ಯೆ!
ವಿಚಾರಣೆ ವೇಳೆ ಬಯಲಾಯ್ತು ಹಂತಕರ ದೈವ ಭಕ್ತಿ ಬಯಲಾಗಿದೆ. ಹಂತಕರ ಟ್ರಾವೆಲ್ ಹಿಸ್ಟರಿ ತೆಗೆದಾಗ ಹತ್ಯೆಗೆ ಮುಂಚೆ ತಮಿಳುನಾಡಿಗೆ ಹೋಗಿದ್ದ ವಿಚಾರ ತಿಳಿದು ಪೊಲೀಸರು ಶಾಕ್ ಆಗಿದ್ದಾರೆ. ಸಿನಿಮಾ ಪ್ರಭಾವದಿಂದ ತಮಿಳುನಾಡಿಗೆ ಹೋಗಿದ್ದಾಗಿ ಹಂಕರು ತಪ್ಪೊಪ್ಪಿಕೊಂಡಿದ್ದು, ಹತ್ಯೆ ಸಕಸ್ಸ್ ಆಗಲು ಮಾರಕಾಸ್ತಗಳ ಜೊತೆ ಹಂತಕರು ತಮಿಳುನಾಡಿಗೆ ಹೋಗಿದ್ದರು. ತಮಿಳುನಾಡಿನ ದೇವಸ್ಥಾನವೊಂದರ ಮುಂದೆ ಮಾರಕಾಸ್ತ್ರ ಇಟ್ಟು ಪೂಜೆ ಮಾಡಿದ್ದರು. ಹತ್ಯೆ ಸಕ್ಸಸ್ ಆಗಲಿ ಎಂದು ಮಾರಕಾಸ್ತ್ರಗಳಿಗೆ ಪೂಜೆ ಮಾಡಿಸಿದ್ದರು. ಸಾಮಾನ್ಯವಾಗಿ ಪ್ರೊಫೆಷನಲ್ ಹಂತಕರು ಕೂಡ ತಮಿಳುನಾಡಿನ ಆ ದೇವಿಯ ದೇವಸ್ಥಾನಕ್ಕೆ ಹೋಗ್ತಾರೆ.
ಸದ್ಯ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಆರೋಪಿ ನಟ ದರ್ಶನ್ ನಟಿಸಿದ್ದ ಕರಿಯ ಎಂಬ ಚಿತ್ರದಲ್ಲಿ ಕೂಡ ಅದೇ ಸೀನ್ ಇದೆ. ಈ ನಂಬಿಕೆ ಮೇಲೆ ದೇವಳಕ್ಕೆ ತೆರಳಿ ಪೂಜೆ ಮಾಡಿಸಿದ್ದ ಹಂತಕರು . ಸದ್ಯ ವಿಚಾರಣೆ ವೇಳೆ ಮತ್ತಷ್ಟು ವಿಚಾರ ಬೆಳಕಿಗೆ ಬಂದಿದೆ.
ದೆಹಲಿಯ ಕರ್ನಾಟಕ ಭವನದಲ್ಲಿ ಕಿಚನ್ ವಿಭಾಗದ ನೌಕರನಾಗಿದ್ದ ಯುವಕ ಆತ್ಮಹತ್ಯೆ!
ಹಲವು ವರ್ಷಗಳಿಂದ ಜಿದ್ದು: ಎರಡ್ಮೂರು ವರ್ಷಗಳಿಂದ ಕ್ಷುಲ್ಲಕ ವಿಚಾರಕ್ಕೆ ಕಿರಣ್ ಹಾಗೂ ಅಜಿತ್ ಮಧ್ಯೆ ಮನಸ್ತಾಪವಾಗಿತ್ತು. ಒಂದೂವರೆ ವರ್ಷದ ಹಿಂದೆ ರಾಮಮೂರ್ತಿ ನಗರ ಸಮೀಪ ಗುರಾಯಿಸಿದ ಎಂಬ ಕಾರಣಕ್ಕೆ ಕಿರಣ್ ಮೇಲೆ ಹಲ್ಲೆ ನಡೆಸಿದ್ದ. ಈ ಘಟನೆ ಬಳಿಕ ಇಬ್ಬರ ನಡುವೆ ದ್ವೇಷ ಹೆಚ್ಚಾಗಿತ್ತು. ಕಳೆದ ತಿಂಗಳ 19 ರಂದು ತನ್ನ ಹುಟ್ಟು ಹಬ್ಬ ಆಚರಿಸಲು ಸ್ನೇಹಿತರ ಜತೆ ಪಿಎಸ್‌ಕೆ ನಾಯ್ದು ಲೇಔಟ್‌ಗೆ ಬಂದಿದ್ದ ಕಿರಣ್‌ಗೆ ಮತ್ತೆ ಅಜಿತ್ ಹೊಡೆದು ಕಳುಹಿಸಿದ್ದ. ಆ ವೇಳೆ ರಾಮಮೂರ್ತಿ ನಗರದಲ್ಲಿ ಕೊಟ್ಟಿದ್ದ ಹೊಡೆತ ಸಾಕಾಗಿಲ್ವಾ ಎಂದು ಅಜಿತ್ ಲೇವಡಿ ಮಾಡಿದ್ದ. ಈ ಮಾತುಗಳಿಂದ ಕೆರಳಿದ ಕಿರಣ್, ಕೊನೆಗೆ ಅಜಿತ್ ಕೊಲೆಗೆ ನಿರ್ಧರಿಸಿದ್ದಾನೆ. ಈ ಕೃತ್ಯಕ್ಕೆ ಆತನ ಇಬ್ಬರು ಸ್ನೇಹಿತರು ಸಾಥ್ ಕೊಟ್ಟಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಏಳೆಂಟು ದಿನಗಳಿಂದ ಪುಲಿಕೇಶಿನಗರ ಸಮೀಪದ ಲಾಡ್ಜ್‌ನಲ್ಲಿ ರೂಂ ಮಾಡಿಕೊಂಡು ಅಜಿತ್ ಅನ್ನು ಆರೋಪಿಗಳು ಹಿಂಬಾಲಿಸಿ ಚಲನವಲನಗಳ ಮಾಹಿತಿ ಸಂಗ್ರಹಿಸಿದ್ದರು. ಅಂತಿಮವಾಗಿ ಪಿಎಸ್‌ಕೆ ನಾಯ್ಡು ಲೇಔಟ್‌ನ ಕಾರಿನ ಶೆಡ್‌ಗೆ ಅಜಿತ್ ಬರುವುದು ಖಚಿತ ಪಡಿಸಿಕೊಂಡು ಬುಧವಾರ ಬೆಳಗ್ಗೆ ಆರೋಪಿಗಳು ಹತ್ಯೆ ಕೃತ್ಯ ಎಸಗಿದ್ದಾರೆ.