ಆಸ್ತಿ ವಿವಾದಕ್ಕಾಗಿ ಮಾಜಿ ಸೈನಿಕನ ಬರ್ಬರ ಹತ್ಯೆಗೈದ ಸಹೋದರ
ಬೈಲಹೊಂಗಲದಲ್ಲಿ ಆಸ್ತಿ ವಿಚಾರವಾಗಿ ಸಹೋದರರ ಮಧ್ಯೆ ನಡೆದ ಜಗಳ ನಡೆದಿದ್ದು, ಮಾಜಿ ಸೈನಿಕ ಸಹೋದರನನ್ನೇ ಭೀಕರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಬೆಳಗಾವಿ (ಜೂ.04): ಹುಟ್ಟುತ್ತಾ ಸಹೋದರರು ಬೆಳೆಯುತ್ತಾ ದಾಯಾದುಗಳು ಎಂಬಂತೆ, ಆಸ್ತಿ ವಿಚಾರವಾಗಿ ಸಹೋದರರ ಮಧ್ಯೆ ನಡೆದ ಜಗಳ ನಡೆದಿದ್ದು, ಮಾಜಿ ಸೈನಿಕ ಸಹೋದರನನ್ನೇ ಭೀಕರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ದುರ್ಘಟನೆ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ನಿವಾಸಿ ಸುರೇಶ್ ಖಣಗಾಂವಿ ಹತ್ಯೆಯಾದ ದುರ್ದೈವಿ ಆಗಿದ್ದಾನೆ. ಸುರೇಶ್ ಖಣಗಾಂವಿ ಮಾಜಿ ಸೈನಿಕನಾಗಿದ್ದು, ದೇಶದ ಗಡಿಯನ್ನು ಕಾಯ್ದು ಕೆಲವು ವರ್ಷಗಳ ಹಿಂದೆ ನಿವೃತ್ತಿ ಹೊಂದಿದ್ದನು. ಇನ್ನು ನಿವೃತ್ತಿ ನಂತರ ಕುಟುಂಬದೊಂದಿಗೆ ಸ್ವಗ್ರಾಮದಲ್ಲಿ ನೆಲೆಸಿ ಕೃಷಿಯಲ್ಲಿ ತೊಡಗಿಕೊಂಡಿದ್ದನು. ಕೃಷಿ ಮಾಡಿಕೊಂಡು ಜಮೀನಿನಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. ಆದರೆ, ಆಸ್ತಿ ವಿಚಾರಕ್ಕೆ ಸಹೋದರರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಸಹೋದರರಿಂದಲೇ ಮಾಜಿ ಸೈನಿಕ ಭೀಕರವಾಗಿ ಹತ್ಯೆಯಾಗಿದ್ದಾನೆ. ಜೊತೆಗೆ, ಇವರ ಮತ್ತೊಬ್ಬ ಸಹೋದರ ಸದಾ ಖಣಗಾಂವಿ ಜಗಳ ಬಿಡಿಸಲು ಹೋಗಿ ಗಂಭೀರವಾಗಿ ಗಾಯಗೊಂಡಿದ್ದಾನೆ.
ಕರೆಂಟ್ ಹೊಡೆದು ಕಂಬದಲ್ಲೇ ಒದ್ದಾಡಿ ಪ್ರಾಣಬಿಟ್ಟ ಜೆಸ್ಕಾಂ ಲೈನ್‌ಮ್ಯಾನ್!
ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆ: ಕೊಲೆ ಮಾಡಿದ ಆರೋಪಿಯನ್ನು ಶಂಕರ್ ಖಣಗಾಂವಿ ಎಂದು ಗುರುತಿಸಲಾಗಿದೆ. ಆಸ್ತಿ ವಿಚಾರವಾಗಿ ಆರೋಪಿ ಶಂಕರ್ ಖಣಗಾಂವಿ ಹಾಗೂ ಹತ್ಯೆಗೀಡಾದ ಸುರೇಶ್ ನಡುವೆ ವಾಗ್ವಾದ ನಡೆದಿದೆ. ಇದು ವಿಕೋಪಕ್ಕೆ ತಿರುಗಿದ್ದರಿಂದ ಸುರೇಶ್ ನ ಚಿಕ್ಕಪ್ಪ ಶಂಕರ್ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದರಿಂದ ಬಲವಾಗಿ ಪೆಟ್ಟುಬಿದ್ದಿದ್ದರಿಂದ ಸುರೇಶ್ ಖಣಗಾಂವಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸ್ಥಳದಲ್ಲೇ ಇದ್ದ ಸದಾ ಖಣಗಾಂವಿಗೆ ಗಂಭೀರವಾಗಿ ಗಾಯವಾಗಿದ್ದು, ಸದ್ಯ ಪರಿಸ್ಥಿತಿ ಚಿಂತಾಜಕನವಾಗಿದೆ. ಗಾಯಾಳುವನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬೈಲಹೊಂಗಲ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ವಾರದ ಹಿಂದೆ ಭಾವಿಹಾಳದಲ್ಲಿ ಆಸ್ತಿಗಾಗಿ ಮಾರಾಮಾರಿ: ಮಾಜಿ ಸೈನಿಕನ ಹತ್ಯೆಯ ಘಟನೆಗೂ ಒಂದು ವಾರ ಮೊದಲು ಇದೇ ಬೈಲಹೊಂದಲ ತಾಲೂಕಿನ ಭಾವಿಹಾಳ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಎರಡು ಕುಟುಂಬಗಳ ಮಧ್ಯೆ ಮಾರಾಮಾರಿ ನಡೆದಿತ್ತು. ಎರಡೂ ಕುಡುಂಬದವರು ಪರಸ್ಪರ ಬಡಿಗೆಗಳಿಂದ ಪರಸ್ಪರ ಹೊಡೆದಾಡಿಕೊಳ್ಳುವ ದೃಶ್ಯ ವೈರಲ್ ಆಗಿತ್ತು. ಮೇ 23ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಮಹಾರುದ್ರಪ್ಪ ಕುಂಬಾರ, ಶಂಕರೆಪ್ಪ ಕುಂಬಾರ ಕುಟುಂಬಗಳ ಮಧ್ಯೆ ಜಮೀನು ವಿವಾದ ಆರಂಭವಾಗಿದ್ದು, ಆರೋಪಿ ಶಂಕರೆಪ್ಪ ಕುಂಬಾರ ಕೋರ್ಟ್ ಮೆಟ್ಟಿಲೇರಿದ್ದರು.
ಬೆಂಗಳೂರು - ಹಾಸನ ಹೆದ್ದಾರಿಯಲ್ಲಿ ಲಾರಿ ಹಿಂಭಾಗಕ್ಕೆ ಗುದ್ದಿದ ಕಾರು: ನೆಲಮಂಗಲ ಯುವಕರು ಸಾವು
ಸಾಗುವಾನಿ ಮರ ಸಾಗಣೆ ವೇಳೆ ಜಗಳ ಆರಂಭ: ಜಮೀನಿನಲ್ಲಿ ಬೆಳೆದಿದ್ದ ಸಾಗುವಾನಿ ಮರಗಳನ್ನು ಕಡಿದಿದ್ದ ಕುಟುಂಬ ಸದಸ್ಯರು ಮರಗಳನ್ನು ತೆಗೆದುಕೊಂಡು ಹೋಗಲು ಬಂದಾಗ ಗಲಾಟೆ ಆರಂಭಿಸಲಾಗಿದೆ. ಎರಡು ಕುಟುಂಬಗಳ ಮಧ್ಯೆ ತೀವ್ರ ವಾಗ್ವಾದ, ಹೊಡೆದಾಟ ನಡೆದಿದೆ. ಘಟನೆಯಲ್ಲಿ ನಾಲ್ವರಿಗೆ ಗಾಯ ಬೈಲಹೊಂಗಲ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ಗಾಯಾಳುಗಳು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ. ಈ ಘಟನೆ ಕುರಿತಂತೆ ವೀಡಿಯೋ ಆಧರಿಸಿ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು.