Asianet Suvarna News Asianet Suvarna News

ಆಪರೇಷನ್ ಥಿಯೇಟರ್‌ನಲ್ಲಿ ಸಿಬ್ಬಂದಿಯಿಂದ ಮಹಿಳಾ ರೋಗಿಯ ಗ್ಯಾಂಗ್‌ರೇಪ್!

* ಚಿಕಿತ್ಸೆಗೆ ಬಂದಿದ್ದ ಮಹಿಳೆ ಮೇಲೆ ಅತ್ಯಾಚಾರ

* ಆಪರೇಷನ್‌ ಥಿಯೆಟರ್‌ನಲ್ಲಿ ನಡೆಯಿತು ಕುಕೃತ್ಯ

* ಅನಸ್ತೇಶಿಯಾ ಕೊಟ್ಟು ಅತ್ಯಾಚಾರಗೈದ ಸಿಬ್ಬಂದಿ

Bathinda Hospital staff gangraped woman in operation theatre pod
Author
Bangalore, First Published Oct 10, 2021, 4:15 PM IST

ಭಟಿಂಡಾ(ಅ.10): ಆಸ್ಪತ್ರೆಯ(Hospital) ಸಿಬ್ಬಂದಿ ದೇವರೆಂದೇ ಹೇಳಲಾಗುತ್ತದೆ, ಅವರು ತಮ್ಮ ಜೀವ ಪಣಕ್ಕಿಟ್ಟು ರೋಗಿಗಳ ಪ್ರಾಣ ಉಳಿಸುತ್ತಾರೆ. ಆದರೀಗ ಭಾರೀ ಮುಜುಗರಕ್ಕೀಡು ಮಾಡುವ ಪಗ್ರಕರಣ ಪಂಜಾಬಿನ(Punjab) ಬಟಿಂಡಾದಲ್ಲಿ ಬೆಳಕಿಗೆ ಬಂದಿದೆ. ಇದು ಈ ವೃತ್ತಿಯಲ್ಲಿ ಕೆಲಸ ಮಾಡುವರನ್ನು ತಲೆ ತಗ್ಗಿಸುವಂತೆ ಮಾಡಿದೆ. ಆಸ್ಪತ್ರೆಯ 6 ಮಂದಿ ಸಿಬ್ಬಂದಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ(Gangrape). ಅಚ್ಚರಿ ಎಂಬಂತೆ ಆರೋಪಿಗಳು ರೋಗಿಗೆ ಅನಸ್ತೇಶಿಯಾ ನೀಡಿ ಈ ಕುಕೃತ್ಯ ಎಸಗಿದ್ದಾರೆ.

ಮೂತ್ರಪಿಂಡ ಚಿಕಿತ್ಸೆಗಾಗಿ ಬಂದಿದ್ದ ಸಂತ್ರಸ್ತೆ

ವಾಸ್ತವವಾಗಿ, ಮಾನವೀಯತೆಗೆ ಕಳಂಕ ತರುವ ಈ ನಾಚಿಕೆಗೇಡಿನ ಘಟನೆ ಬಟಿಂಡಾದ ಸಿವಿಲ್ ಆಸ್ಪತ್ರೆಯಲ್ಲಿ ನಡೆದಿದೆ. ಅಕ್ಟೋಬರ್ 4 ರಂದು, ಜಲಾಲಾಬಾದ್‌ನಲ್ಲಿ(Jalalabad) ವಾಸಿಸುತ್ತಿರುವ ಮಹಿಳೆಯೊಬ್ಬರು ತಮ್ಮ ಮೂತ್ರಪಿಂಡದ ಚಿಕಿತ್ಸೆಗಾಗಿ ಪತಿಯೊಂದಿಗೆ ಆಸ್ಪತ್ರೆಗೆ ಬಂದಿದ್ದರು. ವೈದ್ಯಕೀಯ ಪರೀಕ್ಷೆಯ ನಂತರ ಸಂತ್ರಸ್ತೆಯನ್ನು ಅಡ್ಮಿಟ್ ಮಾಡಲಾಗಿತ್ತು.

ನೆಪ ನೀಡಿ ಮಹಿಳಾ ಸಿಬ್ಬಂದಿಯನ್ನು ಹೊಸ ಕಳುಹಿಸಿದ್ದ ಆರೋಪಿಗಳು

ಆಸ್ಪತ್ರೆಯ ಸಿಬ್ಬಂದಿ ಬಂದು ನನ್ನನ್ನು ಆಪರೇಷನ್ ಥಿಯೇಟರ್‌ಗೆ(Operation Theatre) ಕರೆದೊಯ್ದರು ಎಂದು ಮಹಿಳೆ ಹೇಳಿದ್ದಾರೆ. ಅದೇ ಸಮಯದಲ್ಲಿ, ಗಂಡನನ್ನು ಹೊರಗೆ ಕುಳಿತುಕೊಳ್ಳಲು ಕೇಳಲಾಯಿತು. ಇನ್ನು ಮಹಿಳೆಯನ್ನು ಆಪರೇಷನ್ ಥಿಯೇಟರ್‌ಗೆ ಕರೆದೊಯ್ದ ನಂತರ, ಪುರುಷ ಸಿಬ್ಬಂದಿ ಕೆಲ ನೆಪ ಕೊಟ್ಟು ಮಹಿಳಾ ಸಿಬ್ಬಂದಿಯನ್ನು ಕೊಠಡಿಯಿಂದ ಹೊರಹಾಕಿದ್ದಾರೆ. ಇದರ ನಂತರ ಬಳಿಕ ಅನಸ್ತೇಶಿಯಾ ಕೊಟ್ಟು, ಒಬ್ಬರಾದ ಬಳಿಕ ಮತ್ತೊಬ್ಬರಂತೆ ಅತ್ಯಾಚಾರಗೈದಿದ್ದಾರೆ.

ಅರೆಪ್ರಜ್ಞಾವಸ್ಥೆಯಲ್ಲಿ ಇದ್ದುದರಿಂದ ಆರೋಪಿಗಳ ಮುಖಗಳು ಮಸುಕಾಗಿದ್ದವು

ಇನ್ನು ಈ ಬಗ್ಗೆ ಹೇಳಿಕೆ ಕೊಟ್ಟಿರುವ ಸಂಸತ್ರಸ್ತೆ ತನಗೆ ಸ್ವಲ್ಪ ಪ್ರಜ್ಞೆ ಇತ್ತು ಹಾಗೂ ನನ್ನ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂದು ಭಾಸವಾಗಿತ್ತು. ಆದರೆ ಪ್ರತಿಭಟಿಸಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಪ್ರಜ್ಞಾಹೀನತೆಯಿಂದಾಗಿ, ಆರೋಪಿಗಳ ಮುಖ ಮಸುಕಾಗಿ ಕಂಡಿವೆ. ಹೀಗಾಗಿ ಆರೋಪಿಗ ಮುಖ ಗುರುತಿಸುವಲ್ಲಿ ಕಷ್ಟವಾಗಬಹುದು ಎಂದು ಮಹಿಳೆ ಹೇಳಿದ್ದಾರೆ. ಸಂತ್ರಸ್ತೆಯು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
 

Follow Us:
Download App:
  • android
  • ios