ಗುವಾಹಟಿ (ನ.  17)  19 ವರ್ಷದ ಯುವತಿ ಮೇಲೆ ಆಕೆಯ  ಪ್ರೇಮಿ  ಎನಿಸಿಕೊಂಡವ ಮತ್ತು ಅವನ ತಂದೆಯೇ ಅತ್ಯಾಚಾರ ಮಾಡಿದ್ದಾರೆ.

ಅಸ್ಸಾಂನ ಕ್ಯಾಚರ್ ಜಿಲ್ಲೆಯ ಧೋಲೈ ಪೊಲೀಸ್ ಠಾಣೆಯ ಕನಕಪುರದಿಂದ ಈ ಆಘಾತಕಾರಿ ಘಟನೆ ವರದಿಯಾಗಿದೆ. ಹದಿಹರೆಯದ ಹುಡುಗಿಯ ಗೆಳೆಯ, ಪ್ರೀತಮ್ ನಾಥ್ ಮತ್ತು ಆತನ ತಂದೆ ಪಂಚು ನಾಥ್ ವಿರುದ್ಧ ಪೊಲೀಸರು ಅತ್ಯಾಚಾರ ಪ್ರಕರಣ  ದಾಖಲಿಸಿಕೊಂಡಿದ್ದಾರೆ.

ಕೊರೋನಾ ರೋಗಿ ಮೇಲೆ ಲಿಫ್ಟ್ ನಲ್ಲೆ ಎರಗಿದ ಕಾಮಪಿಶಾಚಿಗಳು

ಆರು ತಿಂಗಳಿನಿಂದ ಪ್ರೀತಿಸುತ್ತಿದ್ದ ಹುಡುಗನ ಮನೆಗೆ ಅಕ್ಟೋಬರ್  8  ರಂದು ಹುಡುಗಿ ತೆರಳಿದ್ದಳು. ನವೆಂಬರ್ ತಿಂಗಳಿನಲ್ಲಿ ಇಬ್ಬರು ಮದುವೆಗೆ ಸಿದ್ಧರಾಗಿದ್ದರು.  ಮದುವೆಗೆ ಮುನ್ನ ಒಟ್ಟಿಗೆ ಇರುವುದು ಬೇಡ ಎಂದು ನಿರ್ಧರಿಸಿ ಮನೆಯ ಬೇರೆ ಬೇರೆ ಕೋಣೆಯಲ್ಲಿ ಇರಲು ನಿರ್ಧಾರ ಮಾಡಿದ್ದಾರೆ. ಆದರೆ ಇದೆ ಅವಕಾಶ ಬಳಸಿಕೊಂಡ ತಂದೆ ಮಗ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ನವೆಂಬರ್ 6 ರಂದು ತವರು ಮನೆಗೆ ಬಂದ ಯುವತಿ ನಡೆದ ಘಟನೆಯನ್ನು ವಿವರಿಸಿದ್ದಾಳೆ.  ನಂತರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣವನ್ನು ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ಕುಟುಂಬ ಆರೋಪಿಸಿದೆ.