Asianet Suvarna News Asianet Suvarna News

ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಕಂದನ ಹಿಂಸಿಸುತ್ತಿದ್ದ 'ಹೆತ್ತವ್ವ' ಅರೆಸ್ಟ್!

* ಹೆತ್ತ ಮಗುವಿಗೆ ರಕ್ತ ಬರುವಂತೆ ಥಳಿಸುತ್ತಿದ್ದ ತಾಯಿ

* ಅಕ್ರಮ ಸಂಬಂಧಕ್ಕೆ ಅಡ್ಡಿ ಎಂದು ಕೋಪ

* ಮಗುವಿನ ಮೇಲಿನ ಹಲ್ಲೆಯ ದೃಶ್ಯ ವೈರಲ್, ಮಹಿಳೆ ಅಂದರ್

Andhra Pradesh Woman arrested after viral video shows her beating up 18 month old son pod
Author
Bangalore, First Published Aug 31, 2021, 3:04 PM IST
  • Facebook
  • Twitter
  • Whatsapp

ಹೈದರಾಬಾದ್(ಆ.31): ಕಳೆದೆರಡು ದಿನಗಳ ಹಿಂದೆ ಆಂಧ್ರ ಪ್ರದೇಶದ ಮಹಿಳೆಯೊಬ್ಬಳು ತನ್ನದೇ ಕರುಳ ಕುಡಿಯನ್ನು ಥಳಿಸುತ್ತಿರುವ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಮಹಿಳೆಯ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸದ್ಯ ಈ ಪ್ರಕರಣ ಸಂಬಂಧ ತಮಿಳುನಾಡು ಪೊಲೀಸ್ ಇಲಾಖೆಯ ವಿಶೇಷ ತನಿಖಾ ತಂಡ ಆಂಧ್ರ ಪ್ರದೇಶ ಚಿತ್ತೂರ್‌ನ 22 ವರ್ಷದ ಸೈಕೋ ಮಹಿಳೆಯನ್ನು ಬಂಧಿಸಿದ್ದಾರೆ. 

ಹೌದು ಚಿತ್ತೂರ್‌ನ 22 ವರ್ಷದ ಮಹಿಳೆ ತನ್ನದೇ ಮಗುವನ್ನು ರಕ್ತ ಬರುವಂತೆ ಥಳಿಸಿ, ಈ ಅಮಾನುಷ ಕೃತ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದಳು. ಬಳಿಕ ಆ ದೃಶ್ಯಗಳನ್ನು ಕಂಡು ವಿಕೃತ ಸಂತೋಷಪಡುತ್ತಿದ್ದಳು. ಆದರೀಗ ಆಂಧ್ರ ಪ್ರದೇಶ ಮೂಲದ, ಮಹಿಳೆ ತುಳಸಿಯನ್ನು ಬಂಧಿಸಲಾಗಿದೆ.

ಅಕ್ರಮ ಸಂಬಂಧದಲ್ಲಿ ಹುಟ್ಟಿದ ಮಗು ಮಾರಾಟಕ್ಕೆ ಯತ್ನ

ಆಂಧ್ರ ಮೂಲದ ತುಳಸಿ ಹಾಗೂ ತಮಿಳುನಾಡಿನ ವಿಲುಪ್ಪುರಂ ಜಿಲ್ಲೆಯ ಮೊಟ್ಟು ಗ್ರಾಮದ ವಾಸಿ ವಡಿವಳಗನ್‌ ಕಳೆದ ಐದು ವರ್ಷಗಳ ಹಿಂದೆ ವಿವಾಹವಾಗಿದ್ದರು.  ಈ ದಂಪತಿಗೆ ಗೋಕುಲ್(4) ಹಾಗೂ ಎರಡು ವರ್ಷದ ಪ್ರದೀಪ್ ಹೆಸರಿನ ಪುಟ್ಟ ಮಕ್ಕಳಿದ್ದಾರೆ. ಆದರೆ ಕಳೆದೊಂದು ವರ್ಷದಿಂದ ಇವರ ಸಂಸಾರದಲ್ಲಿ ಬಿರುಕು ಮೂಡಿದೆ. ಇಬ್ಬರ ನಡುವೆ ಹೊಂದಾಣಿಕೆಯಾಗದೆ ಫೆಬ್ರವರಿ ತಿಂಗಳಲ್ಲಿ ಗಂಡ ಹೆಂಡತಿ ಬೇರೆ ಬೇರೆಯಾಗಿದ್ದಾರೆ. ತುಳಸಿ ಮಗುವಿನೊಂದಿಗೆ ತನ್ನ ತವರು ಮನೆಗೆ ತೆರಳಿದ್ದರು. 

ಇನ್ನು ಇತ್ತೀಚೆಗೆ ಮಗುವಿಗೆ ಪದೇ ಪದೇ ಆನಾರೋಗ್ಯ ಕಾಡುತ್ತಿತ್ತು. ಈ ನಡುವೆ ತುಳಸಿ ಮಗುವಿಗೆ ನಿರ್ದಯವಾಗಿ ಥಳಿಸುವುದನ್ನು ಕುಟುಂಬ ಸದಸ್ಯರೊಬ್ಬರು ನೋಡಿ., ಕೂಡಲೇ ಮಗುವಿನ ತಂದೆ ವಡಿವಳಗನ್​ಗೆ ಮಾಹಿತಿ ನೀಡಿದ್ದಾರೆ.

ಹೆಂಡತಿ ಮನೆಗೆ ಬಂದು ಪತ್ನಿ ತುಳಸಿ ಮೊಬೈಲ್ ಪರಿಶೀಲನೆ ನಡೆಸಿದಾಗ ಮಗುವಿಗೆ ಹಲ್ಲೆ ಮಾಡಿ ಚಿತ್ರಹಿಂಸೆ ನೀಡಿರುವ ವಿಡಿಯೋಗಳು ಕಂಡು ತಂದೆಯೂ ಬೆಚ್ಚಿ ಬಿದ್ದಿದ್ದಾರೆ. ಮಗುವಿನ ಮುಖ, ಮೂಗಿಗೆ ಹೊಡೆದು ರಕ್ತ ಬರುತ್ತಿದ್ದರೂ ನಿಲ್ಲಿಸದೇ ಹಲ್ಲೆ ಮುಂದುವರೆಸಿದ ಹೆಂಡತಿಯ ವರ್ತನೆ ಕಂಡು ಕುಪಿತಗೊಂಡ ಪತಿ ಸತ್ಯ ಮಂಗಲಂ ಪೊಲೀಸ್ ಠಾಣೆಯಲ್ಲಿ ಆಕೆ ವಿರುದ್ಧ ದೂರು ದಾಖಲು ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಸತ್ಯಮಂಗಲಂ ಪೊಲೀಸರು ಪಾಪಿ ತಾಯಿ ತುಳಸಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಹಿರಂಗವಾಗಿದೆ.

ಲಿವ್-ಇನ್ ಸಂಬಂಧ: ಗಂಡನಿಂದ ರಕ್ಷಣೆ ಬೇಕೆಂದ ಮಹಿಳೆಗೆ ಕೋರ್ಟ್ ಹೇಳಿದ್ದಿಷ್ಟು

ಅಕ್ರಮ ಸಂಬಂಧ

ಪ್ರೇಮ್ ಕುಮಾರ್ ಎಂಬಾತನ ತುಳಸಿಗೆ ಕಳೆದ ಹಲವು ವರ್ಷಗಳಿಂದ ಅಕ್ರಮ ಸಂಬಂಧವಿತ್ತೆನ್ನಲಾಗಿದೆ. ಆತನ ಜೊತೆ ವಿಡಿಯೋ ಕಾಲ್ ಮಾಡುವ ವೇಳೆ ಮಗು ಅಡ್ಡಿಪಡಿಸುತ್ತಿತ್ತು. ಇದರಿಂದ ಕೋಪಗೊಂಡು ಮಗುವಿನ ಮೇಲೆ ಹಲ್ಲೆ ಮಾಡಿ, ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿ, ಬಳಿಕ ಅದನ್ನು ನೋಡಿ ವಿಕೃತ ಸಂತಸ ಪಡೆಯುತ್ತಿದ್ದಳೆಂದು ಪೊಲೀಸರ ತನಿಖೆಯಲ್ಲಿ ತುಳಸಿ ಬಹಿರಂಗಪಡಿಸಿದ್ದಾಳೆ. ಸದ್ಯ ಸತ್ಯಮಂಗಲಂ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

Follow Us:
Download App:
  • android
  • ios