ಲಕ್ನೋ(ಅ. 14) : ಉತ್ತರ ಪ್ರದೇಶದಿಂದ ಮತ್ತೊಂದು ಅತ್ಯಾಚಾರದ ಸುದ್ದಿ ವರದಿಯಾಗಿದೆ.  ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ 19 ವರ್ಷದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ  ಪ್ರಕರಣ ಇಡೀ ದೇಶದ ಜನರ ಆಕ್ರೋಶಕ್ಕೆ ಕಾರಣವಾಗಿತ್ತು.  ಇದೀಗ ಅಂಥದ್ದೆ ಒಂದು ಪೈಶಾಚಿಕ ಕೃತ್ಯ ವರದಿಯಾಗಿದೆ.

ನಾಲ್ಕು ವರ್ಷದ ಬಾಲಕಿ ಮೇಲೆ ಸೋದರಸಂಬಂಧಿ ಅತ್ಯಾಚಾರ ಎಸಗಿದ್ದು ಆರೋಪಿ ಸಂಬಂಧಿಯನ್ನು ಬಂಧಿಸಲಾಗಿದೆ. ಹತ್ರಾಸ್ ನಿಂದಲೇ ಪ್ರಕರಣ ವರದಿಯಾಗಿದೆ.

ಇದು ರೇಪ್ ಅಲ್ಲ..ಮರ್ಯಾದಾ ಹತ್ಯೆ.. ದಾಖಲೆ ಕೊಟ್ಟ ವಕೀಲ

ಈ ಘಟನೆ ರಾಜ್ಯದ ಹತ್ರಾಸ್ ಜಿಲ್ಲೆಯ ಸಾಸ್ನಿ ಗ್ರಾಮದಲ್ಲಿ ನಡೆದಿದೆ.  ಬಾಲಕಿಯ ಮೇಲೆ ಸೋದರ ಸಂಬಂಧಿಯೇ ಅತ್ಯಾಚಾರ ಮಾಡಿದ್ದು ನೆರಮನೆಯಲ್ಲೇ ವಾಸವಿದ್ದ.

ಇಂಥದ್ದೆ ಒಂದು ಪ್ರಕರಣ ತಿಂಗಳ ಹಿಂದೆ ಅಲಿಘಡ ಜಿಲ್ಲೆಯಲ್ಲಿ ನಡೆದಿತ್ತು.  ಸಂತ್ರಸ್ತೆ ಗಾಯಗೊಂಡು ಸಾವನ್ನಪ್ಪಿದ್ದಳೂ. ತಿಂಗಳ ಅಂತರದಲ್ಲಿ ಎರಡು ಭೀಕರ ಘಟನೆಗೆ ಹತ್ರಾಸ್ ಸಾಕ್ಷಿಯಾಗಿದೆ.

ಹತ್ತೊಂಭತ್ತು ವರ್ಷದ ಯುವತಿಯ ಮೇಲೆ ಅತ್ಯಾಚಾರ ಮಾಡಿ ನಲಿಗೆ ಕತ್ತರಿಸಲಾಗಿತ್ತು ಎಂಬುದು ಘಟನೆಯ  ಒಂದು ಮುಖವಾಗಿದ್ದರೆ ಇಲ್ಲ ಈ ಪ್ರಕರಣ ಒಂದು ಮರ್ಯಾದಾ ಹತ್ಯೆ ಎಂಬ ಮಾತುಗಳು ಕೇಳಿ ಬಂದಿದ್ದವು.