ವಿಜಯವಾಡ(ಫೆ.  08)  ಗಾಂಜಾ ದಾಸನಾಗಿದ್ದ ಮಗನನ್ನು ಹೆತ್ತ ತಾಯಿಯೇ ಹತ್ಯೆ ಮಾಡಿದ್ದಾಳೆ.   ಗಾಂಜಾ ಚಟಕ್ಕೆ ಬಲಿಯಾಗಿರುವ 17 ವರ್ಷದ ಮಗನನ್ನು ಆಂಧ್ರಪ್ರದೇಶದ ಗುಂಟೂರು ಪಟ್ಟಣದಲ್ಲಿ ಶನಿವಾರ  43 ವರ್ಷದ ತಾಯಿ ಹತ್ಯೆ ಮಾಡಿದ್ದಾಳೆ.

ಇಬ್ಬರ ನಡುವೆ ವಾಗ್ವಾದ ನಡೆದಿದೆ. ಮಗ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ. ಪತಿಯ ಮರಣದ ನಂತರ ಮನೆ ಜವಾಬ್ದಾರಿಯನ್ನು ತಾಯಿಯೇ ನಿಭಾಯಿಸುತ್ತಿದ್ದಳು. ಅರ್ಧಕ್ಕೆ ಶಾಲೆ ಬಿಟ್ಟಿದ್ದ ಮಗ ಡ್ರಗ್ಸ್ ದಾಸನಾಗಿದ್ದ.

ಬೆಂಗಳೂರು;  ಬಾಡಿಗೆ ಕೇಳಿದ್ದಕ್ಕೆ ವೃದ್ಧ ದಂಪತಿಗೆ ಲೇಡಿ ಡಾನ್ ಅವಾಜ್

ಗುಂಟೂರಿನ ಎಟಿ ಅಗ್ರಹಾರ ಪ್ರದೇಶದ ಬಾಡಿಗೆ ಮನೆಯಲ್ಲಿ ತಾಯಿ ಸುಮಲತಾ ಮತ್ತುಮಗ ಸಿದ್ಧಾರ್ಥ ವಾಸವಿದ್ದರು.  ಗಾಂಜಾ ಚಟಕ್ಕಾಗಿ ಹಣ ನೀಡಲು ತಾಯಿಯನ್ನು ಮೇಲಿಂದ ಮೇಲೆ ಪೀಡಿಸುತ್ತಿದ್ದ.

ಶನಿವಾರ ರಾತ್ರಿ ಇಬ್ಬರ ನಡುವೆ  ಜೋರಾಗಿ ವಾಗ್ವಾದ ನಡೆದಿದೆ. ನಿನ್ನ ಕತೆ ಇಲ್ಲಿಗೆ ಮುಗಿಯಿತು ಎಂದು ಹೇಳುತ್ತ ತಾಯಿ ಮನೆಯಿಂದ ಹೊರ ಬಂದಿದ್ದಾರೆ. ಪಕ್ಕದ ಮನೆಯವರು ಹೋಗಿ ನೋಡಿದಾಗ ಮಗ ಹೆಣವಾಗಿ ಬಿದ್ದಿದ್ದ. 

ಕೊಲೆ ಆರೋಪದ ಮೇಲೆ ಸುಮಲತಾ ಮೇಲೆ ಪ್ರಕರಣ ದಾಖಲಾಗಿದ್ದು ಆಕೆಯನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು  ತಿಳಿಸಿದ್ದಾರೆ. ಕೇರಳದಲ್ಲಿ ತಾಯಿಯೊಬ್ಬಳು ತನ್ನ ಆರು ವರ್ಷದ ಮಗನ ಹತ್ಯೆ ಮಾಡಿ ಅಲ್ಲಾನಿಗಾಗಿ ಮಗು ತ್ಯಾಗ ಮಾಡಿದ್ದೇನೆ ಎಂದು ಪೊಲೀಸರ ಬಳಿ ಹೇಳಿದ್ದರು.