ಚೆನ್ನೈ(ಫೆ. 27)  ಬಾಲ ಪ್ರತಿಭೆಯಾಗಿ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಗಾಯತ್ರಿ ಸಾಯಿ ಸ್ಫೋಟಕ ವಿಚಾರವೊಂದನ್ನು ತಮ್ಮ ಸೋಶಿಯಲ್  ಮೀಡಿಯಾ ಖಾತೆ ಮೂಲಕ ಹಂಚಿಕೊಂಡಿದ್ದಾರೆ.

ಪಿಜ್ಜಾ ಡಿಲೆವರಿ ಬಾಯ್ ನಟಿಗೆ ಸಂಕಷ್ಟ ತಂದಿಟ್ಟಿದ್ದಾನೆ. ಆಕೆಯ ಮನೆಬಳಿ ಡಿಲೆವರಿಗೆ ಬಂದ ಡಿಲೆವರಿ ಬಾಯ್ ಪೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಅಡಲ್ಟ್ ಚಿತ್ರದಲ್ಲಿ ಕಾಣಿಸಿಕೊಂಡ ಮಿಯಾಗೆ ಸಿಕ್ಕ ಸಂಭಾವನೆ!

ಪಿಜ್ಜಾ ಡಿಲೆವರಿ ಬಾಯ್ ನಟಿಯ ನಂಬರ್ ಅನ್ನು ಅಡಲ್ಟ್ ಸೈಟ್ ನಲ್ಲಿ ಹಾಕಿದ್ದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಅಲ್ಲಿಂದ ಆಕೆಯ ಪೋನ್ ನಂಬರ್ ಹಲವಾರು ಗ್ರೂಪ್ ಗಳಲ್ಲಿ ಹರಿದಾಡಿದೆ.

ಫೆಬ್ರವರಿ 9ರಂದೇ ಈ ಘಟನೆ ನಡೆದಿದೆ. ಪಿಜ್ಜಾ ಬಾಯ್ ಮತ್ತು ಡಿಲೆವರಿ ಕಂಪನಿಯ ಜಾಡು ಪತ್ತೆ ಮಾಡಲು ನಟಿ ಹರಸಾಹಸ ಮಾಡಿದ್ದಾರೆ. ಚೆನ್ನೈನ ಪೊಲೀಸರು ಮತ್ತು ಮಹಿಳಾ ಆಯೋಗಕ್ಕೂ ದೂರು ನೀಡಿದ್ದು ಕೂಡಲೇ ತಮ್ಮ ನಂಬರ್ ಅಲ್ಲಿಂದ ಕಿತ್ತು ಹಾಕಿ ಅಪರಾಧಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಕೋರೊದ್ದಾರೆ.