Asianet Suvarna News Asianet Suvarna News

ಕೊಪ್ಪಳ: ಒಂದೇ ಕುಟುಂಬದ ಮೂವರ ನಿಗೂಢ ಸಾವು ಪ್ರಕರಣ, ಭಗ್ನ ಪ್ರೇಮಿಯಿಂದ ಮೂವರ ಹತ್ಯೆ

ಆರೋಪಿ ಹೊಸಪೇಟೆಯ ನಿವಾಸಿ ಆಸೀಫ್‌ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ರಾಜೇಶ್ವರಿ, ವಸಂತ, ಸಾಯಿಧರ್ಮ ತೇಜ ಕೊಲೆಯಾಗಿದ್ದರು. ತಾನು ಪ್ರೀತಿಸಿದಾಕೆಯನ್ನು ತನ್ನ ಅಣ್ಣನೊಂದಿಗೆ ಮದುವೆ ಮಾಡಿಸಿದ್ದಾರೆ ಎಂದು ಸಿಟ್ಟಿಗೆದ್ದು ಕೊಲೆ ಮಾಡಿರುವುದಾಗಿ ಆಸೀಫ್ ತಪ್ಪೊಪ್ಪಿಕೊಂಡಿದ್ದಾನೆ ಎಂದ ಎಸ್ಪಿ ಯಶೋದಾ ವಂಟಗೋಡಿ 

Accused Arrested on Three Mysterious Death in a Same Family Case in Koppal grg
Author
First Published May 30, 2024, 9:32 AM IST

ಕೊಪ್ಪಳ(ಮೇ.30):  ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮದಲ್ಲಿ ತಾಯಿ, ಮಗಳು ಮತ್ತು ಮೊಮ್ಮಗ ನಿಗೂಢ ಸಾವು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಇದು ಆತ್ಮಹತ್ಯೆಯಲ್ಲ, ಕೊಲೆ ಎನ್ನುವುದು ರುಜುವಾತಾಗಿದ್ದು, ಕೊಲೆಯ ಆರೋಪಿಯನ್ನು ಬಂಧಿಸುವಲ್ಲಿ ಕೊಪ್ಪಳ ಪೊಲೀಸರು ಯಶಸ್ವಿಯಾಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಎಸ್ಪಿ ಯಶೋದಾ ವಂಟಗೋಡಿ, ಆರೋಪಿ ಹೊಸಪೇಟೆಯ ನಿವಾಸಿ ಆಸೀಫ್‌ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ರಾಜೇಶ್ವರಿ, ವಸಂತ, ಸಾಯಿಧರ್ಮ ತೇಜ ಕೊಲೆಯಾಗಿದ್ದರು. ತಾನು ಪ್ರೀತಿಸಿದಾಕೆಯನ್ನು ತನ್ನ ಅಣ್ಣನೊಂದಿಗೆ ಮದುವೆ ಮಾಡಿಸಿದ್ದಾರೆ ಎಂದು ಸಿಟ್ಟಿಗೆದ್ದು ಕೊಲೆ ಮಾಡಿರುವುದಾಗಿ ಆಸೀಫ್ ತಪ್ಪೊಪ್ಪಿಕೊಂಡಿದ್ದಾನೆ ಎಂದರು.

ಅನ್ಯಕೋಮಿನ ವ್ಯಕ್ತಿ ಮದುವೆಯಾಗಿದ್ದ ಮಹಿಳೆ ಸೇರಿ, ಒಂದೇ ಕುಟುಂಬದ ಮೂವರು ಶವವಾಗಿ ಪತ್ತೆ!

ಘಟನೆ ಹಿನ್ನೆಲೆ: 

ಆಂಧ್ರ ಮೂಲದ ವಸಂತ ಮನಸ್ತಾಪದಿಂದ ನಾಲ್ಕು ವರ್ಷಗಳ ಹಿಂದೆಯೇ ಪತಿಯನ್ನು ತೊರೆದು ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಗ್ರಾಮಕ್ಕೆ ಬಂದು ವಾಸಿಸುತ್ತಿದ್ದಳು. ಈ ವೇಳೆ ಹೊಸಪೇಟೆಯಲ್ಲಿ ಈಗಾಗಲೆ ಮದುವೆಯಾಗಿದ್ದ ಆರೀಫ್‌ನೊಂದಿಗೆ ಪ್ರೇಮಾಂಕುರವಾಗಿ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದಾಳೆ.

ಇದು ಆರೀಫ್ ಅವರ ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ನಡುವೆ ಆರೀಫ್‌ನ ಸಹೋದರ ಆಸೀಫ್‌ ಸಹ ಈಕೆಯನ್ನು ಪ್ರೀತಿಸಿ, ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಆರೀಫ್‌, ವಸಂತ ಮದುವೆಯಾಗಿದ್ದು ಆಸೀಫ್‌ನ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನು ಮೀರಿ ವಸಂತ, ಆರೀಫ್‌ನೊಂದಿಗೆ ಮುದುವೆಯಾಗಿದ್ದರಿಂದ ಆಸೀಫ್ ರೊಚ್ಚಿಗೆದ್ದು ಕೊಲೆ ಮಾಡಿದ್ದಾನೆ ಎನ್ನುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Latest Videos
Follow Us:
Download App:
  • android
  • ios