Bengaluru Crime: ಪೊಲೀಸರಿಗೇ ಸವಾಲು ಹಾಕಿದ್ದ ಕಳ್ಳ ಜೈಲು ಅರೆಸ್ಟ್‌

*   ಕದ್ದ ಕಾರಲ್ಲಿ 200 ಕಿ.ಮೀ. ವೇಗದಲ್ಲಿ ರಾಜಸ್ಥಾನ ತಲುಪುತ್ತಿದ್ದ ಕಳ್ಳ
*  ಐಷಾರಾಮಿ ಸಕಾರನ್ನೇ ಕದಿಯುತ್ತಿದ್ದ ಎಂಬಿಎ ಪದವೀಧರ
*  ಅಮೃತಹಳ್ಳಿ ಪೊಲೀಸರಿಂದ ಜೈಪುರದಲ್ಲಿ ಆರೋಪಿಯ ಬಂಧನ
 

Accused Arrested for Car Theft Cases in Bengaluru grg

ಬೆಂಗಳೂರು(ಮಾ.17): ಐಷಾರಾಮಿ ಕಾರು ಕದ್ದಿದ್ದಲ್ಲದೆ ಪೊಲೀಸರಿಗೆ(Police) ‘ಕ್ಯಾಚ್‌ ಮಿ ಇಫ್‌ ಯೂ ಕ್ಯಾನ್‌’(Catch Me If You Can) ಎಂದು ಸವಾಲು ಹಾಕಿದ್ದ ಕುಖ್ಯಾತ ಖದೀಮನೊಬ್ಬ ನಗರದ ಅಮೃತಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ರಾಜಸ್ಥಾನ(Rajasthan) ರಾಜ್ಯದ ಜೈಪುರ ನಗರದ ಸತ್ಯೇಂದ್ರ ಸಿಂಗ್‌ ಶೇಖಾವತ್‌ ಬಂಧಿತನಾಗಿದ್ದು(Arrest), ಆರೋಪಿಯಿಂದ(Accused) ಆಡಿ, ಟೊಯೋಟಾ ಫಾರ್ಚೂನರ್‌ ಸೇರಿದಂತೆ ಸುಮಾರು 4 ಕೋಟಿ ಮೌಲ್ಯದ ಕಾರುಗಳನ್ನು ಜಪ್ತಿ ಮಾಡಲಾಗಿದೆ.

ಕೆಲ ತಿಂಗಳ ಹಿಂದೆ ಅಮೃತಹಳ್ಳಿ ಸಮೀಪದ ಗೋದ್ರೇಜ್‌ ಅಪಾರ್ಟ್‌ಮೆಂಟ್‌ನಲ್ಲಿ ಬಿ.ಅಭಿಷೇಕ್‌ ಅವರ ಟೊಯೋಟಾ ಫಾರ್ಚೂನರ್‌ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ(Investigation) ನಡೆಸಿದ ಇನ್‌ಸ್ಪೆಕ್ಟರ್‌ ಗುರುಪ್ರಸಾದ್‌ ನೇತೃತ್ವದ ತಂಡವು, ಆರೋಪಿಯನ್ನು ರಾಜಸ್ಥಾನದಲ್ಲಿ ಬಂಧಿಸಿ ಕರೆ ತಂದಿದೆ.

ಶಿವಮೊಗ್ಗ :  ಆರೈಕೆ ಇಲ್ಲ.. ಅನ್ಯ ಕೋಮಿನ ಯುವಕನ ಮದುವೆ... ಮಗುವಿಗೆ ಜನ್ಮ ನೀಡಿ ಸಾವು

ಕಳ್ಳ ಎಂಬಿಎ ಪದವೀಧರ:

ಎಂಬಿಎ ಪದವೀಧರನಾಗಿರುವ ಸತ್ಯೇಂದ್ರ ಸಿಂಗ್‌ ವೃತ್ತಿಪರ ಕ್ರಿಮಿನಲ್‌ ಆಗಿದ್ದು, 2003ರಿಂದಲೇ ಕಾರುಗಳ್ಳತನದಲ್ಲಿ ಆತ ಕುಖ್ಯಾತಿ ಪಡೆದಿದ್ದಾನೆ. ಸತ್ಯೇಂದ್ರನ ಮೇಲೆ ದೆಹಲಿ, ಗುಜರಾತ್‌(Gujarath), ರಾಜಸ್ಥಾನ, ಮಹಾರಾಷ್ಟ್ರ, ದಿಯು ಧಮನ್‌, ತೆಲಂಗಾಣ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಸುಮಾರು 40ಕ್ಕೂ ಐಷಾರಾಮಿ ಕಾರಗಳ್ಳತನ ಬಗ್ಗೆ ಪ್ರಕರಣಗಳು ದಾಖಲಾಗಿವೆ. ಈಗ ಬಂಧನದಿಂದ ಬೆಂಗಳೂರು(Bengaluru) 14, ಹೈದರಾಬಾದ್‌ 5, ರಾಜಸ್ಥಾನ ಹಾಗೂ ತಮಿಳುನಾಡು ಚೆನ್ನೈ ತಲಾ ಒಂದು ಸೇರಿದಂತೆ 20 ಕಾರುಗಳ್ಳತನ(Car Theft) ಪ್ರಕರಣಗಳು ಹಾಗೂ ಒಂದು ಸ್ಕೂಟರ್‌ ಕಳ್ಳತನ ಪ್ರಕರಣ ಪತ್ತೆಯಾಗಿದೆ. ಹಳೇ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ಆತ ತಲೆಮರೆಸಿಕೊಂಡಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

Mangaluru Airport Bomb: ಬಾಂಬ್ ಇಟ್ಟಿದ್ದ ಆದಿತ್ಯಗೆ 20 ವರ್ಷ ಶಿಕ್ಷೆ

ಐದು ತಿಂಗಳ ಹಿಂದೆ ಅಮೃತಹಳ್ಳಿ ಸಮೀಪ ನಡೆದಿದ್ದ ಅಭಿಷೇಕ್‌ ಎಂಬುವರ ಕಾರುಗಳ್ಳತನ ಬಗ್ಗೆ ತನಿಖೆ ನಡೆಸುತ್ತಿದ್ದ ಪೊಲೀಸರು, ಕಳವಾದ ಕಾರು ಬೆನ್ನುಹತ್ತಿದ್ದಾಗ ಅದೂ ರಾಜಸ್ಥಾನ ಸೇರಿರುವುದು ಗೊತ್ತಾಯಿತು. ಹಲವು ಟೋಲ್‌ಗಳ ಸಿಸಿಟಿವಿ ಕ್ಯಾಮೆರಾದಲ್ಲಿ ಕಾರಿನ ಸಂಚಾರದ ದೃಶ್ಯ ಸೆರೆಯಾಗಿತ್ತು. ಅದೇ ವೇಳೆ ತೆಲಂಗಾಣದ ಹೈದರಾಬಾದ್‌ ಪೊಲೀಸರು ಕೂಡಾ ಕಾರುಗಳ್ಳತನ ಪ್ರಕರಣದಲ್ಲಿ ಆರೋಪಿಗೆ ಹುಡುಕಾಡುತ್ತಿರುವ ಸಂಗತಿ ಗೊತ್ತಾಯಿತು. ಕೂಡಲೇ ನೆರೆರಾಜ್ಯದ ಪೊಲೀಸರನ್ನು ಸಂಪರ್ಕಿಸಿ ಆರೋಪಿ ಕುರಿತು ಮಾಹಿತಿ ಕೋರಲಾಯಿತು. ಆಗ ನಮಗೆ ಆರೋಪಿ ಹೆಸರು ಮತ್ತು ವಿಳಾಸ ಗೊತ್ತಾಯಿತು. ಅಲ್ಲದೆ ರಾಜಸ್ಥಾನದಲ್ಲಿ ಆರೋಪಿ ಬಂಧನಕ್ಕೆ ತೆಲಂಗಾಣ ಪೊಲೀಸರು(Telangana Police) ಕಾರ್ಯಾಚರಣೆ ನಡೆಸಿದ್ದರು. ಆ ವೇಳೆ ತೆಲಂಗಾಣ ಪೊಲೀಸರಿಗೆ ಕ್ಯಾಚ್‌ ಮಿ ಇಫ್‌ ಯೂ ಕ್ಯಾನ್‌ ಎಂದು ಚಾಲೆಂಜ್‌ ಮಾಡಿ ತಪ್ಪಿಸಿಕೊಂಡಿದ್ದ. ಆದರೆ ಸಿಸಿಟಿವಿ(CCTV) ಕ್ಯಾಮೆರಾ ದೃಶ್ಯಾವಳಿ ಹಾಗೂ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಜೈಪುರದಲ್ಲಿ ಆರೋಪಿ ಸಿಕ್ಕಿಬಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳ್ಳತನಕ್ಕೆ ಆನ್ಲೈನಲ್ಲಿ ಟೂಲ್ಸ್‌ ಖರೀದಿ

ಕಾರುಗಳ್ಳತನಕ್ಕೆ ಆರೋಪಿ ಸತ್ಯೇಂದ್ರ ಸಿಂಗ್‌, ಆನ್‌ಲೈನ್‌(Online) ಮೂಲಕ ಅತ್ಯಾಧುನಿಕ ಸಾಧನಗಳನ್ನು ಖರೀದಿಸಿದ್ದ. ಅಲ್ಲದೆ ವಿವಿಧ ಕಾರುಗಳಿಗೆ ನಕಲಿ ಕೀಗಳನ್ನು ತಯಾರಿಸಿದ್ದ ಆತ, ಆ ಸಾಧನ ಮತ್ತು ಕೀ ಬಳಸಿ ಕೃತ್ಯ ಎಸಗುತ್ತಿದ್ದ.

ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಿಗೆ ಕಾರು ಕಳ್ಳತನ ಸಲುವಾಗಿ ತೆರಳುತ್ತಿದ್ದ ಆತ, ಕೃತ್ಯ ಎಸಗಿದ ತಕ್ಷಣವೇ ನಗರ ತೊರೆದು 200 ಕಿ.ಮೀ ವೇಗ ಮಿತಿಯಲ್ಲಿ ಅತಿವೇಗವಾಗಿ ಕಾರು ಚಾಲನೆ ಮಾಡಿಕೊಂಡು ರಾಜಸ್ಥಾನ ಸೇರುತ್ತಿದ್ದ. ಹೀಗೆ ಕಳವು ಮಾಡಿ ಕಾರುಗಳನ್ನು ನಕಲಿ ದಾಖಲೆ ಸೃಷ್ಟಿಸಿ ರಾಜಸ್ಥಾನದಲ್ಲಿ ಆರೋಪಿ ಮಾರಾಟ ಮಾಡಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.
 

Latest Videos
Follow Us:
Download App:
  • android
  • ios