ಶಿವಮೊಗ್ಗ, (ಡಿ.31): ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಜಿ.ಜಿ.ಸುರೇಶ್ ಅವರ ಮನೆ ಮೇಲೆ ಭ್ರಷ್ಟಾಚಾರ ನಗ್ರಹ ದಳ(ಎಸಿಬಿ)ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಕ್ರಮ ಆಸ್ತಿ ಮತ್ತು ಹಣ ಗಳಿಕೆ ಆರೋಪ ಮೇರೆಗೆ ಎಸಿಬಿ ಅಧಿಕಾರಿಗಳು, ಇಂದು (ಗುರುವಾರ) ಸುರೇಶ್ ಅವರ ಶಿವಮೊಗ್ಗ ಮಲ್ಲೇಶ್ವರ ನಗರ 1ನೇ ಹಂತ 2ನೇ ಕ್ರಾಸ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಮನೆ, ಗೋಪಾಲಗೌಡ ಬಡಾವಣೆಯಲ್ಲಿನ ಮನೆ, ಭದ್ರಾವತಿ ತಾಲೂಕು ಹುಣಸೇಕಟ್ಟೆ ಸರ್ವೆ ನಂ.13ರಲ್ಲಿನ ತೋಟ ಮತ್ತು ತೋಟದ ಮನೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಮೇಲೆ ಏಕ ಕಾಲಕ್ಕೆ ದಾಳಿ ಮಾಡಿದ್ದಾರೆ.

ನಾಯಕತ್ವದ ಬದಲಾವಣೆಗೆ ಸಿಎಂ ಮಹತ್ವದ ಪ್ರತಿಕ್ರಿಯೆ..!

ಎಸಿಬಿ ಎಸ್.ಪಿ. ಜಯಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆಸಿರುವ ಎಸಿಬಿ ಪೊಲೀಸರು, 3 ನಿವಾಸ ಮತ್ತು ತೋಟ ಹಾಗೂ ಕಚೇರಿಯಲ್ಲಿ ಶೋಧನಾ ಕಾರ್ಯ ಮುಂದುವರೆಸಿದ್ದಾರೆ.

ದಾಳಿ ಸಂದರ್ಭದಲ್ಲಿ ಅವರ ಚರ ಮತ್ತು ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪರಿಶೀಲಿಸಿ ವಶಪಡಿಸಿಕೊಳ್ಳುವ ಪ್ರಕ್ರಿಯೆ ನಡೆದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.