ಕೊಡಗು, [ಡಿ.07]: ಹಣ ಅಂದ್ರೆ, ಹೆಣನೂ ಬಾಯಿ ಬಿಡುತ್ತೆ ಅಂತಾರೆ. ಅದರಂತೆ ಇಲ್ಲೊಬ್ಬ ಆಸ್ತಿಗಾಗಿ ತನ್ನ ಅತ್ತಿಗೆಯನ್ನೇ ಕೊಂದಿದ್ದಾನೆ.   

ಹೌದು...ಆಸ್ತಿ ವೈಷಮ್ಯ ಹಿನ್ನೆಲೆಯಲ್ಲಿ ಬಾವ ಮತ್ತು ಮೈದುನ ಸೇರಿ ತಮ್ಮ ಅತ್ತಿಗೆಯನ್ನೇ ಕೊಂದಾಕಿರುವ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ರಂಗ ಸಮುದ್ರದಲ್ಲಿ ನಡೆದಿದೆ.

ಬೇರೊಬ್ಬನ ಪರಸಂಗಕ್ಕೆ ಅಡ್ಡಿಯಾದ ಗಂಡನನ್ನೇ ಸುಟ್ಟ ಬೂದಿ ಮಾಡಿದ ಕೀಚಕಿ

ರಂಜನ್ ಎಂಬುವವರ ಪತ್ನಿ ಮರಿ ಹತ್ಯೆಯಾದ ಮಹಿಳೆ. ರಂಗಸಮುದ್ರ ಗ್ರಾಮದ ಉಳುವಾರನ ಕುಮಾರ್ , ಬಿಪಿನ್ ಸೇರಿ ರಂಜನ್ ಎಂಬುವವರ ಪತ್ನಿ ಮರಿ ಎನ್ನುವರನ್ನ ದೊಣ್ಣೆಯಿಂದ ಮನಬಂದಂತೆ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾರೆ.

ಆಸ್ತಿ ವಿಚಾರವಾಗಿ ಮರಿ ಅವರನ್ನ ಬಾವ, ಮೈದುನ ಸೇರಿ ಕೊಂದಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. 

ಅತ್ತಿಗೆಯೊಂದಿಗೆ ಚಕ್ಕಂದವಾಡುತ್ತಿದ್ದವನನ್ನು ಹತ್ಯೆಗೈದ ಮೈದುನ..!

ಈ ಬಗ್ಗೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.  ಬಳಿಕ ಕೊಲೆಗೆ ಅಸಲಿ ಕಾರಣವೇನು ಎನ್ನುವುದು ತಿಳಿಯಲಿದೆ.