Asianet Suvarna News Asianet Suvarna News

ಬೆಂಗಳೂರು: ರಸ್ತೆ ಬದಿ ಕಸ ಎಸೆದಿದ್ದಕ್ಕೆ ಬೈದ ವೃದ್ಧನ ಕುತ್ತಿಗೆ ಕಡಿದು ಬರ್ಬರ ಹತ್ಯೆ..!

ಕಸ ತುಂಬಿದ ಕವರ್ ಎಸೆದು, ರಸ್ತೆಯಲ್ಲೇ ಗುಟ್ಕಾ ಉಗಿದು ಹೋಗುತ್ತಿದ್ದ. ಈ ವೇಳೆ ಹಿಂದೆ ಬರುತ್ತಿದ್ದ ಸಿದ್ದಪ್ಪ ಯುವಕನಿಗೆ ಬೈದಿದ್ದಾನೆ. ಇಷ್ಟಕ್ಕೆ ಕುಪಿತಗೊಂಡ ಯುವಕ ಪುನೀತ್, ಸಮೀಪದ ಮನೆಯಿಂದ ಮಚ್ಚು ತಂದು ವೃದ್ಧನ ಕುತ್ತಿಗೆಯನ್ನು ಕಡಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ. 
 

70 years old man killed in bengaluru grg
Author
First Published Aug 10, 2024, 7:59 AM IST | Last Updated Aug 12, 2024, 10:36 AM IST

ಪೀಣ್ಯ ದಾಸರಹಳ್ಳಿ(ಆ.10):  ಓಡಾಡುವ ರಸ್ತೆಯಲ್ಲಿ ಗುಟ್ಕಾ ಉಗಿಯುವುದು ಮತ್ತು ಕಸ ಎಸೆಯುವ ಕ್ಲುಲ್ಲಕ ವಿಷಯಕ್ಕೆ ವೃದ್ದನನ್ನೇ ಯುವಕನೊಬ್ಬ ಕೊಂದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.

ಸಿದ್ದಪ್ಪ(70) ಹತ್ಯೆಯಾದ ವೃದ್ದ. ತುಮಕೂರು ಜಿಲ್ಲೆ ಶಿರಾ ಮೂಲದ ಪುನೀತ್‌ (24) ಬಂಧಿತ ಆರೋಪಿ. ಶುಕ್ರವಾರ ಬೆಳಗ್ಗೆ 9ಕ್ಕೆ ಆರೋಪಿ ಪುನೀತ್, ಕಸ ತುಂಬಿದ ಕವರ್ ಎಸೆದು, ರಸ್ತೆಯಲ್ಲೇ ಗುಟ್ಕಾ ಉಗಿದು ಹೋಗುತ್ತಿದ್ದ. ಈ ವೇಳೆ ಹಿಂದೆ ಬರುತ್ತಿದ್ದ ಸಿದ್ದಪ್ಪ ಯುವಕನಿಗೆ ಬೈದಿದ್ದಾನೆ.

ಬೆಂಗಳೂರು: ಬರ್ತ್‌ಡೇ ಖುಷಿಯಲ್ಲಿ ಗಾಂಜಾ ಸೇವಿಸಿ ಬೈಕ್‌ನಲ್ಲಿ ವ್ಹೀಲಿಂಗ್‌..!

ಇಷ್ಟಕ್ಕೆ ಕುಪಿತಗೊಂಡ ಯುವಕ, ಸಮೀಪದ ಮನೆಯಿಂದ ಮಚ್ಚು ತಂದು ವೃದ್ದನ ಕುತ್ತಿಗೆಯನ್ನು ಕಡಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕೊಲೆ ಬಳಿಕ ಮನೆಗೆ ತೆರಳಿ ತನ್ನ ತಾಯಿಯ ಜೊತೆ ಚಿಕ್ಕಬಿದರಕಲ್ಲಿನಲ್ಲಿ ಇರುವ ತನ್ನ ಅಣ್ಣನ ಮನೆಯಲ್ಲಿ ತಲೆಮರೆಸಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಕಳೆದ 10 ವರ್ಷಗಳ ಹಿಂದೆ ಪ್ರತಿಷ್ಠಿತ ಹಿಮಾಲಯ ಡ್ರಗ್ಸ್ ಕಂಪನಿ ಕೆಲಸಕ್ಕಿದ್ದು ನಿವೃತ್ತಿ ಹೊಂದಿದ್ದರು. ಬಳಿಕ ತಮ್ಮ ಬಳಿಯಿದ್ದ ಸುಮಾರು 10ರಿಂದ 15 ಮನೆಯನ್ನು ಬಾಡಿಗೆ ಕೊಟ್ಟು, ನಿವೃತ್ತಿ ಜೀವನ ಸಾಗಿಸುತ್ತಿದ್ದರು. ಸ್ವಚ್ಚತೆ ವಿಷಯದಲ್ಲಿ ಬಾಡಿಗೆ ಮನೆಯವರ ಜೊತೆ ಸಣ್ಣಪುಟ್ಟ ಗಲಾಟೆ ಬಿಟ್ಟರೆ ಬೇರೆ ಯಾವುದೇ ತಕರಾರು ಇರಲಿಲ್ಲ. ಹೀಗಿರುವಾಗ ಇಂತಹದೊಂದು ದುರ್ಘಟನೆ ನಡೆದು ಹೋಗಿದೆ. ಇನ್ನು ಸ್ಥಳಕ್ಕೆ ಬಂದ ಸೀನ್ ಅಫ್ ಕ್ರೈಂ ಟೀಮ್​ನಿಂದ ತನಿಖಾ ಕಾರ್ಯ ನಡೆಯುತ್ತಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Latest Videos
Follow Us:
Download App:
  • android
  • ios