ಮಹಾರಾಷ್ಟ್ರ[ಫೆ.10]: ಮಹಾರಾಷ್ಟ್ರದ ಅಹಮದಾನಗರ್ ಜಿಲ್ಲೆಯ ಕರ್ತಜ್ ಜೈಲಿನಿಂದ ಐವರು ಅರೋಪಿಗಳು ಪರಾರಿಯಾಗಿದ್ದಾರೆ. ವರದಿಗಳನ್ವಯ ಈ ಐವರೂ ಕೈದಿಗಳು ಜೈಲಿನ ಛಾವಣಿ ಒಡೆದು ಕಾಲ್ಕಿತ್ತಿದ್ದಾರೆ. ಈ ಘಟನೆಯಿಂದ ಜೈಲು ಆಡಳಿತಾಧಿಕಾರಿಗಳಲ್ಲಿ ಆತಂಕ ಮನೆ ಮಾಡಿದೆ. 

ಇನ್ನು ಪರಾರಿಯಾಗಿರುವ ಐವರೂ ಆರೋಪಿಗಳು ವಿಭಿನ್ನ ಪ್ರಕರಣಗಳಿಗೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದರು. ಸದ್ಯ ತಲೆ ಮರೆಸಿಕೊಂಡಿರುವ ಐವರಿಗಗಿ ತೀವ್ರ ಹುಡುಕಾಟ ಮುಂದುವರೆದಿದೆ. ಪ್ರಕರಣ ಸಂಬಂಧ ಮಾಹಿತಿ ನೀಡಿರುವ ಪೊಲೀಸರು ಈ ಆರೋಪಿಗಳು ಜೈಲು ಕೋಣೆಯ ಮರದ ಛಾವಣಿ ಮುರಿದು ಪರಾರಿಯಾಗಿದ್ದಾರೆ. ಇವರನ್ನು ಪತ್ತೆ ಹಚ್ಚಲು ಐದು ತಂಡಗಳನ್ನು ರಚಿಸಲಾಗಿದೆ.

3 ವರ್ಷದ ಬಾಲಕಿ ರೇಪ್‌ ಮಾಡಿದಾತಗೆ ಫೆ. 29ಕ್ಕೆ ಗಲ್ಲು

ಪರಾರಿಯಾದ ಕೈದಿಗಳಲ್ಲಿ ಜ್ಞಾನೇಶ್ವರ ತುಕಾರಾಮ್ ಕೋಲ್ಹೆ ಆರ್ಮ್ಸ್ ಆ್ಯಕ್ಟ್ ಆರೋಪಿ, ಅಕ್ಷಯ್ ರಾಮ್ ದಾಸ್ ರಾವತ್ ಹತ್ಯೆ ಆರೋಪಿ, ಮೋಹನ್ ಕುಂಡಲೀಕ್ ಭೋರೆಹತ್ಯೆ ಆರೋಪಿ, ಚಂದ್ರಕಾಂತ್ ಮಹಾದೇವ್ ರಾವತ್ ಕೂಡಾ ಹತ್ಯೆ ಆರೋಪಿಯಾಗಿದ್ದು, ಲಕ್ಷ್ಮಣ ಜಗತಾಪ್ ಅತ್ಯಾಚಾರ ಆರೋಪಿಯಾಗಿದ್ದಾನೆ.

ಇಂತಹುದೇ ಘಟನೆಯೊಂದು ತಿ ಹೆಚ್ಚು ಭದ್ರತೆಯುಳ್ಳ ಅಮೃತಸರ ಕೇಂದ್ರ ಕಾರಾಗ್ರಹದಲ್ಲೂ ನಡೆದಿತ್ತು. ಇಲ್ಲಿಂದ ಮೂವರು ವಿಚಾರಣಾಧೀನ ಕೈದಿಗಳು ಜೈಲಿನಿಂದ ಪರಾರಿಯಾಗಿದ್ದರು. ಇವರು ಸುಮಾರು 16 ಅಡಿ ಎತ್ತರದ ಒಳ ಬದಿಯಲ್ಲಿದ್ದ ಗೋಡೆಯನ್ನು ಒಬ್ಬರ ಮೇಲೊಬ್ಬರು ನಿಂತು ಹತ್ತಿ ಹಾರಿದ್ದರೆ, ಹೊರ ಬದಿಯ 21 ಅಡಿ ಎತ್ತರದ ಗೋಡೆಯನ್ನು ಸ್ಟೀಲ್ ಒಂದರ ಸಹಾಯದಿಂದ ಹಾರಿದ್ದರು.