ಬಲೂನ್ ತರಲೆಂದು ಹೋಗಿದ್ದ ಮಗು ವಾರದ ನಂತ್ರ ಶವವಾಗಿ ಪತ್ತೆ, ಆರೋಪಿಯೂ ಅರೆಸ್ಟ್
ಮನೆಯಿಂದ ನಾಪತ್ತೆಯಾಗಿದ್ದ ನಾಲ್ಕು ವರ್ಷದ ಮಗುವಿನ ಶವ ಪತ್ತೆಯಾಗಿದೆ. ಅಲ್ಲದೇ ಇದರ ಹಿಂದಿನ ಆರೋಪಿಯನ್ನು ಸಹ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮನಗರ, (ಸೆ.22): ಬಲೂನ್ ತರುತ್ತೇನೆ ಎಂದು ಮನೆಯಿಂದ ಹೊರಗೆ ಹೋಗಿ ನಾಪತ್ತೆಯಾಗಿದ್ದ 4 ವರ್ಷದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ.
ಸುಮೇರ್ ಖಾನ್, ಅಲ್ಮಜ್ ಬೇಗಂ ದಂಪತಿಯ ದತ್ತು ಮಗು ಶವವಾಗಿ ಪತ್ತೆ. ರಾಮನಗರದ ದ್ಯಾವರಸೇಗೌಡನ ದೊಡ್ಡಿ ಗ್ರಾಮದ ಬಳಿಯ ಹೊಳೆಯಲ್ಲಿ ಇಂದು (ಮಂಗಳವಾರ) ಶವ ಸಿಕ್ಕಿದೆ.
ಮಾಲ್ ಇದ್ಯಾ ಪ್ಲೀಸ್ ಎಂದ ದೀಪಿಕಾ, ಭಾರಿ ಮಳೆ ಭೀತಿಯಲ್ಲಿ ಕರ್ನಾಟಕ: ಸೆ.22ರ ಟಾಪ್ 10 ಸುದ್ದಿ!
ಸಾಕು ಮಗ ದಯಾನ್ ಖಾನ್ ಸೆ.14ರ ರಾತ್ರಿ 9 ಗಂಟೆಯಿಂದ ನಾಪತ್ತೆಯಾಗಿದ್ದ. ಈ ಸಂಬಂಧ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಅರೆಸ್ಟ್
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮಗುವಿನ ಹುಡುಕಾಟಕ್ಕಾ ಬಲೆ ಬೀಸಿದ್ದು, ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಗುವಿನ ಸಂಬಂಧಿ ಮುಜಾಮಿಲ್‌ನೇ ಮಗುವನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಕೊಲೆ ಸಂಬಂಧ ರಾಮನಗರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.