ಭೋಪಾಲ್ (ಜ. 11)  ಉತ್ತರ ಪ್ರದೇಶದ ನಂತರ ಮಧ್ಯಪ್ರದೇಶದಿಂದ ಮಹಿಳಾ ದೌರ್ಜನ್ಯದ ಪ್ರಕರಣಗಳು ನಿರಂತರವಾಗಿ ವರದಿಯಾಗಲು ಆರಂಭವಾಗಿದೆ.  ಕಿರಿಯ ಸಹೋದರನ ಎದುರಿನಲ್ಲಿಯೇ ಅಕ್ಕನ ಬಟ್ಟೆಗಳನ್ನು ಹರಿದು ಹಾಕಲಾಗಿದೆ.

ನಾಲ್ಕು ಜನ ಕಿರಾತರಕರು  ಇಂಥ ಕೆಲಸ ಮಾಡಿದ್ದಾರೆ. ರತಿಬಾದ್ ಪ್ರದೇಶದ ನಿವಾಸಿ 25 ವರ್ಷದ  ಮಹಿಳೆ ಪ್ರಕರಣದ  ದುರಂತವನ್ನು ವಿವರಿಸುತ್ತಾಳೆ.  ಮಾಸ್ಕ್ ಧರಿಸಿದ ನಾಲ್ವರು ಪುರುಷರು ನೀಚ ಕೆಲಸ ಮಾಖಡಿದ್ದಾರೆ. ನಾಲ್ವರಲ್ಲಿ ಒಬ್ಬ ಸ್ಥಳೀಯನೂ ಇದ್ದಾನೆ ಎಂದು ಪೊಲೀಸರ ಮುಂದೆ ಮಹಿಳೆ ಹೇಳಿಕೆ ನೀಡಿದ್ದಾಳೆ.

ರೇಪ್ ಮಾಡಿ ಸೋಶಿಯಲ್ ಮೀಡಿಯಾಕ್ಕೆ ಬಿಟ್ಟರು!

ಶನಿವಾರ ರಾತ್ರಿ  1. 30 ರ ಸುಮಾರಿಗೆ ಕಾರಿನಲ್ಲಿ ತನ್ನ ಮನೆಗೆ ಬಂದ ಕಿರಾತಕರು ಸೇರಿದಂತೆ ನಾಲ್ಕು ತಾಯಿಯನ್ನು ಮೊದಲು ಹಿಡಿದುಕೊಂಡಿದ್ದಾರೆ. ನಂತರ ಯುವತಿಯನ್ನು ಇನ್ನೊಂದು ಕೋಣೆಗೆ ಎಳೆದುಕೊಂಡು ಹೋಗಲಾಗಿದೆ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಆರಂಭಿಸಿದಾಗ ಆಕೆಯ ಕಿರಿಯ ಸಹೋದರ ಪ್ರತಿಭಟನೆ  ನಡೆಸಲು ಮುಂದಾಗಿದ್ದಾನೆ. ಆತನ ಮೇಲೆ ಹಲ್ಲೆ ಮಾಡಿ  ಯುವತಿಯ ಬಟ್ಟೆಗಳನ್ನು ಹರಿದು ಹಾಕಿ ಮನೆಯಿಂದ ಹೊರ ಹೋಗಿದ್ದಾರೆ.

ಕಿರಾತಕರಲ್ಲಿ ಒಬ್ಬನನ್ನು  ಸ್ಥಳೀಯ ನಿವಾಸಿ, ರವಿ ಎಂದು ಗುರುತಿಸಲಾಗಿದ್ದು ಸಹಚರರ ಪತ್ತೆಗೂ ಬಲೆ ಬೀಸಲಾಗಿದೆ. ರವಿ ಯುವತಿಯನ್ನು  ಮದುವೆಯಾಗ ಬಯಸಿದ್ದು  ಮೇಲಿಂದ ಮೇಲೆ ಒತ್ತಡ  ಹೇರುತ್ತಿದ್ದ. ಇದೇ ಕಾರಣಕ್ಕೆ ಇಂಥ ಕೆಲಸ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.