ನವದೆಹಲಿ(ನ. 04) ವಾಯುವ್ಯ ದೆಹಲಿಯ ರೋಹಿಣಿ ಪ್ರದೇಶದ ಆಸ್ಪತ್ರೆಯ ಪಾರ್ಕಿಂಗ್  ಒಂದರಲ್ಲಿ 30 ವರ್ಷದ  ಮಹಿಳೆ ಮೇಲೆ ಮೂವರು ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಸೇರಿ  ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದ ಇಬ್ಬರು ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಕಳೆದ 10 ದಿನಗಳಿಂದ ಮಹಿಳೆ ಇನ್ನೊಬ್ಬ ಮಹಿಳೆಯೊಂದಿಗೆ ಆಸ್ಪತ್ರೆಯ  ವೇಟಿಂಗ್ ರೂಂ ನಲ್ಲಿಯೇ ಇದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಣ್ಣನಿಂದ ತಂಗಿ ಮೇಲೆ ಅತ್ಯಾಚಾರ, ಗರ್ಭಿಣಿಯಾದ ಬಾಲಕಿ

ಸೆಕ್ಯುರಿಟಿ ಗಾರ್ಡ್ ಪರಿಶೀಲಿಸಿದಾಗ ಮಹಿಳೆಗೆ ಕುಟುಂಬ ಸದಸ್ಯರು ಅಥವಾ ಸಂಬಂಧಿಕರು ಯಾರೂ ಆಸ್ಪತ್ರೆಗೆ ದಾಖಲಾಗಲಿಲ್ಲ ಎಂಬ ಮಾಹಿತಿ ಗೊತ್ತಾಗಿದೆ. ಇಲ್ಲಿಂದ ತೆರಳು ಎಂದು ದಬಾಯಿಸಿದ್ದಾನೆ. ಮತ್ತೊಬ್ಬ ಮಹಿಳೆ ಈ ಸಂದರ್ಭ ಅಲ್ಲಿ ಇರಲಿಲ್ಲ. ಅಲ್ಲಿಂದ ಪಾರ್ಕಿಂಗ್ ಏರಿಯಾಕ್ಕೆ ಎಳೆದುಕೊಂಡು ಬಂದು ಅತ್ಯಾಚಾರ ಮಾಡಿದ್ದಾರೆ.

ಅಕ್ಟೋಬರ್ 31 ರಂದು ನಡೆದ ಘಟನೆ ಮಹಿಳೆ ದೂರು ನೀಡಿದ ನಂತರ ಬೆಳಕಿಗೆ ಬಂದಿದೆ. ಸೆಕ್ಯೂರಿಟಿ ಗಾರ್ಡ್ ಕನ್ವರ್ ಪಾಲ್ (32), ಬೌನ್ಸರ್ ಮನೀಶ್ (22) ಮತ್ತು ಪ್ರವೀಣ್ ತಿವಾರಿ (24) ಎಂಬುವರನ್ನು ಬಂಧಿಸಲಾಗಿದೆ.