ಮೈಸೂರು, (ಜ.12): ಅನುಮಾನಾಸ್ಪದ ರೀತಿಯಲ್ಲಿ ವಿವಾಹಿತ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕಿನ ಮಲ್ಕುಂಡಿ ಗ್ರಾಮದಲ್ಲಿ ನಡೆದಿದೆ.

ವೀರಭದ್ರ ಎಂಬುವರ ಪತ್ನಿ ದಿವ್ಯಾ (26) ಮೃತ ದುರ್ದೈವಿ.  ಎಚ್.ಡಿ.ಕೋಟೆ ತಾಲೂಕಿನ ಮಾದಾಪುರ ಗ್ರಾಮದ ನಿವಾಸಿಯಾಗಿದ್ದ ದಿವ್ಯಾ, 2 ವರ್ಷಗಳ ಹಿಂದೆ ಮಲ್ಕುಂಡಿ ಗ್ರಾಮದ ವೀರಭದ್ರ ಎಂಬವರನ್ನು ವಿವಾಹವಾಗಿದ್ದು, ಈ ದಂಪತಿಗೆ 1 ವರ್ಷದ ಹೆಣ್ಣು ಮಗುವಿದೆ. 

ಮದ್ವೆ ಮುಂಚೆನೇ ಭಾವಿ ಪತ್ನಿಯೊಂದಿಗೆ ಚಟ ತೀರಿಸಿಕೊಂಡ: ನಂತ್ರ ಮದ್ವೆ ಬೇಡ ಎಂದ 

ಇದ್ದಕ್ಕಿದ್ದಂತೆನೇ ಣುಬಿಗಿದ ಸ್ಥಿತಿಯಲ್ಲಿ ದಿವ್ಯಾ ಮೃತದೇಹ ಪತ್ತೆಯಾಗಿದ್ದು, ಈ ಘಟನೆ ಹಿಂದೆ ಅನುಮಾನಗಳು ಹುಟ್ಟಿಕೊಂಡಿವೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಆದ್ರೆ, ವರದಕ್ಷಿಣೆ ಕಿರುಕುಳದಿಂದ ಪತಿ ವೀರಭದ್ರ ಮತ್ತು ಕುಟುಂಬಸ್ಥರು ಹಲ್ಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಮೃತ ಮಹಿಳೆಯ ಸಹೋದರ ರಘು ಹುಲ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.