ಭೋಪಾಲ್(ಸೆ. 08) ಗ್ಯಾಂಗ್ ರೇಪ್ ಮತ್ತು ಕೊಲೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಆರೋಪಿಗಳು ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದಾರೆ.

ಆರೋಪಿಗಳಾದ ಕಾಲು ಸಿಂಗ್, ದೀಪಕ್ ಸಿಂಗ್, ರವಿ ಸಿಂಗ್ ರತ್ಲಂ ಜಿಲ್ಲೆಯ ಗುರ್ಜರ್ ಪಾದಾದ ನಿವಾಸಿಗಳು.   ಕಸಿನ್ ಗಳಾದ ಇವರನ್ನು ಹದಿಮೂರು ವರ್ಷದ ಬಾಲಕಿ ಮನೇಲಿನ ಅತ್ಯಾಚಾರ ಆರೋಪದಡಿ ಸೋಮವಾರ ಬಂಧಿಸಲಾಗಿತ್ತು. ದೀಪಕ್ ಸಿಂಗ್, ರವಿ ಸಿಂಗ್ ತಪ್ಪಿಸಿಕೊಂಡಿದ್ದಾರೆ.

ಬರ್ತಡೆ ಪಾರ್ಟಿಗೆ ಬಂದ ಗೆಳತಿಯನ್ನೇ ಅತ್ಯಾಚಾರ ಮಾಡಿದರು
 
ಬಾಲಕಿಯನ್ನು ಅತ್ಯಾಚಾರ ಮಾಡಿ ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದರು. ನಂತರ ಶವವನ್ನು ಹೊಲವೊಂದರಲ್ಲಿ ಎಸೆದು ಪರಾರಿಯಾಗಿದ್ದರು. 

ಸದಾ ಅಮಲಿನಲ್ಲಿ ಇದ್ದು ಊರಿನಲ್ಲಿ ಗಲಾಟೆ ಮಾಡುತ್ತಿದ್ದ ಆರೋಪ ಹೊತ್ತಿದ್ದವರ ಮೇಲೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಆರೋಪಿಗಳನ್ನು ಬಂಧಿಸಲಾಗಿತ್ತು.

ಊರಿನವರನ್ನು ದಾರಿ ತಪ್ಪಿಸಲು ತಾವೇ ಕೃತ್ಯ ಮಾಡಿ ಬಾಲಕಿಯೊಬ್ಬಳ ಮೇಲೆ ಕಾರಿನಲ್ಲಿ ಅತ್ಯಾಚಾರ ನಡೆಯುತ್ತಿತ್ತು, ಆಕೆಯನ್ನು ಹುಡುಕುತ್ತಿದ್ದೇವೆ ಎಂದು ಹೇಳಿದ್ದರು.

ಸೋಮವಾರ ರಾತ್ರಿ ಪೊಲೀಸರ ಗಮನ ಬೇರೆಡೆಗೆ ಸೆಳೆದು ಪರಾರಿಯಾಗಿದ್ದಾರೆ. ಇವರ ಬಗ್ಗೆ ಮಾಹಿತಿ ಕೊಟ್ಟವರಿಗೆ ಹತ್ತು ಸಾವಿರ ರೂ. ಬಹುಮಾನವನ್ನು ಘೋಷಣೆ ಮಾಡಲಾಗಿದೆ.