ಚೆನ್ನೈ(ಜ. 03)  ತನ್ನ ಮೇಲೆ ಅತ್ಯಾಚಾರ ಎಸಗಲುಇ ಬಂದ ವ್ಯಕ್ತಿಯನ್ನು ಯುವತಿಯೇ ಹತ್ಯೆ ಮಾಡಿದ್ದಾಳೆ. ತಿರುವಳ್ಳೂರು ಜಿಲ್ಲೆಯ ಶೋಲ್ವಾರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ   19 ವರ್ಷದ ಯುವತಿ 26 ವರ್ಷದ  ಕಾಮುಕನ ಹತ್ಯೆ ಮಾಡಿದ್ದಾಳೆ. 

ತಿರುವಳ್ಳೂರಿನ ಹುಡುಗಿ ಶೋಲವರಂನಲ್ಲಿ ವಾಸಿಸುತ್ತಿರುವ ತನ್ನ ಚಿಕ್ಕಮ್ಮನನ್ನು ನೋಡಲು ಬಂದಿದ್ದಳು. ಸಂಜೆ ತನ್ನ ಚಿಕ್ಕಮ್ಮನ ಮನೆಯ ಪಕ್ಕದ ಕುದುರೆ ಫಾರ್ಮ್ ಬಳಿ ಬಹಿರ್ದೆಸೆಗೆ ತೆರಳಿದ್ದ ವೇಳೆ ಜಿತ್ ಅಲಿಯಾಸ್ ಕಿಲ್ಲಿ ಅವಳ ಮೇಲೆ ಎರಗಲು ಬಂದಿದ್ದಾನೆ.
 
ತಂಗಿಗಾಗಿ ಅಕ್ಕನ ಬೆತ್ತಲು ಮಾಡಿದ ಆಸಾಮಿ ಸಿಕ್ಕಿಬಿದ್ದ

ಆಕೆಯ ಮೇಲೆ ಎರಗಿದ್ದು ಅಲ್ಲದೆ ಚಾಕು ತೋರಿಸಿ ಅತ್ಯಾಚಾರ ಎಸಗಲು ಮುಂದಾಗಿದ್ದಾನೆ.  ಕಂಠಪೂರ್ತಿ ಮದ್ಯ ಸೇವಿಸಿದ್ದವನ ಆಟಾಟೋಪವನ್ನು ಯುವತಿ ತಡೆದಿದ್ದಾಳೆ.

ಆತನನ್ನು  ಜೋರಾಗಿ ತಳ್ಳಿದ ರಿಣಾಮ ಕೆಳಕ್ಕೆ ಬಿದ್ದಿದ್ದಾನೆ. ಚಾಕು ಕಸಿದುಕೊಂಡು ಮುಖ, ಎದೆ ಭಾಗಕ್ಕೆ ತಿವಿದಿದ್ದಾಳೆ. 

ಅತ್ಯಾಚಾರ ಮಾಡಲು ಬಂದವ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.  ನಾವು ಯುವತಿ ಹೇಳಿಕೆ ಆಧಾರದಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಯಾರಾದರೂ ಪ್ರತ್ಯಕ್ಷದರ್ಶಿಗಳು ಇದ್ದಾರೆಯೇ ಎಂದು ಹುಡುಕುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.