ಮುಂಬೈ( ಮೇ 16) ಫೇಸ್ ಬುಕ್ ಗೆಳೆಯನ ಮಾತು ನಂಬಿ ತೆರಳಿದ್ದ ಯುವತಿ ಮೇಲೆ  25   ಜನ ಕಾಮಾಂಧರು ಅತ್ಯಾಚಾರ ನಡೆಸಿದ್ದ ಪ್ರಕರಣ ರಾಷ್ಟ್ರ ರಾಜಧಾನಿ ದೆಹಲಿಯಿಂದ ವರದಿಯಾಗಿತ್ತು.   ಈ ಘೋರ ಪ್ರಕರಣ ವರದಿಯಾಗಿರುವುದು ವಾಣಿಜ್ಯ ರಾಜಧಾನಿ ಮುಂಬೈನಿಂದ.

ಬಾಂದ್ರಾದ ಬ್ಯಾಂಡ್‌ಸ್ಟ್ಯಾಂಡ್‌ ಬಳಿಯೇ  19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. 

ರಾಜಧಾನಿಯಲ್ಲಿ ಘೋರ ಪ್ರಕರಣ;  ಯುವತಿ ಮೇಲೆ ಎರಗಿದ 25 ಕ್ರೂರಿಗಳು

ಗೆಳೆಯರ ಜತೆ  ಸಮುದ್ರ ತೀರಕ್ಕೆ ತೆರಳಿ ವಾಪಸ್ ಆಗುತ್ತಿದ್ದ ಯುವತಿ ಮೇಲೆ ದೌರ್ಜನ್ಯ ನಡೆದಿದೆ. ರಾತ್ರಿ 11 ಗಂಟೆ ಸುಮಾರಿಗೆ ಸಂತ್ರಸ್ತೆ ಹಿಂದಿರುಗುತ್ತಿದ್ದರು.  ಮೊಟಾರ್ ಸೈಕಲ್ ನಲ್ಲಿ ಹಿಂದಿರುಗುತ್ತಿದ್ದಾಗ ಗೆಳೆಯರು ಎಂದು ಕರೆಸಿಕೊಂಡವರು ಕ್ರೂರತ್ವ ಮೆರೆದಿದ್ದಾರೆ.

ಮೂವರು ಆಕೆಯನ್ನು ಕರಾವಳಿಯ ನಿರ್ಜನ ಪ್ರದೇಶಕ್ಕೆ ಎಳೆದುಕೊಂಡು ಹೋಗಿದ್ದಾರೆ.  ಮನೆಗೆ ಬಂದ ಯುವತಿಗೆ ಹೊಟ್ಟೆ ನೋವು ಆರಂಭವಾಗಿದೆ. ತನ್ನ ತಂಗಿ ಬಳಿ ನಡೆ ಘಟನೆಯನ್ನು ಯುವತಿ ಹೇಳಿಕೊಂಡಿದ್ದಾಳೆ. ಗೋವಂಡಿಯ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಆರೋಪಿಗಳನ್ನು ಬಂಧಿಸಲಾಗಿದೆ.