ಲಕ್ನೊ(ನ.  28)  ಪಕ್ಕದ ಮನೆಯವ ಕೊಟ್ಟಿದ್ದ ಮುಂಗಡ ಹಣವನ್ನು ಹಿಂದಕ್ಕೆ ಕೊಡದ ಕಾರಣಕ್ಕೆ ಯುವತಿಯೊಬ್ಬಳ ಕೊಲೆಯಾಗಿಹೋಗಿದೆ.

ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಲಕ್ಷ್ಮೀಪುರ ನಡೆದ ಘಟನೆ ಆತಂಕ ಹೆಚ್ಚಿಸಿದೆ.   ಕೊಲೆ ಆರೋಪಿ ಬೇರೆ ಸಮುದಾಯಕ್ಕೆ ಸೇರಿದ್ದು ಉದ್ವಿಘ್ನ ವಾತಾವರಣ  ನಿರ್ಮಾಣವಾಗಿದೆ.

ಕೊಲೆಯಾದ  ಯುವತಿಯನ್ನು ರಿತಿಕಾ ಎಂದು ಗುರುತಿಸಲಾಗಿದ್ದು ಆರೋಪಿ ಸೈಯದ್ ಅಲಿ ಯನ್ನು ಬಂಧಿಸಲಾಗಿದೆ. ಕೊಲೆಯಾದ ದಿನ ಏನಾಯ್ತು? ಯುವತಿ ರಿತಿಕಾ ಕೆಲಸದ ನಿಮಿತ್ತ ಹೊಲಕ್ಕೆ ಹೋಗಿದ್ದಾರೆ. ಹೊಲದಲ್ಲಿ ಚಾಕು ಹಿಡಿದು ಕಾಯುತ್ತಿದ್ದ ಆರೋಪಿ ಏಕಾಏಕಿ ದಾಳಿ ಮಾಡಿದ್ದಾನೆ. ಕುತ್ತಿಗೆ ಬಳಿ ಚಾಕು ನುಗ್ಗಿಸಿದ ಪರಿಣಾಮ ಯುವತಿ ಹತ್ಯೆಯಾಗಿದ್ದಾಳೆ.

ಲಾಕ್ ಡೌನ್ ಎಫೆಕ್ಟ್; ಪತ್ನಿ ಮನೆಯಲ್ಲಿದ್ದ ಗಂಡ ನಾದಿನಿ ಜತೆ ಪರಾರಿ

ಯುವತಿ ಜತೆಗೆ ಇಬ್ಬರು ಇದ್ದರೂ ಅಲಿಯ ಆಟಾಟೋಪ ತಡೆಯಲು ಸಾಧ್ಯವಾಗಿಲ್ಲ. ಹತ್ಯೆಯಾದ ನಂತರ ಆರೋಪಿಯನ್ನು ಸ್ಥಳೀಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದು ಹಣದ ವಿಚಾರಕ್ಕೆ ನಡೆದ ಕೊಲೆ ಅಲ್ಲ. ಯುವತಿಯನ್ನು ಅಲಿ ಪ್ರೀತಿ ಮಾಡುತ್ತಿದ್ದ , ಆಕೆ ಒಪ್ಪಿಕೊಳ್ಳದ ಕಾರಣಕ್ಕೆ ಇಂಥ ತೀರ್ಮಾನ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.