ಲಕ್ನೋ(ಆ. 26)  ಆಕೆ ಸ್ಕಾಲರ್ ಶಿಪ್ ಅರ್ಜಿಯನ್ನು ತುಂಬಲು ತೆರಳಿದ್ದಳು, ಆದರೆ ತನ್ನ ಜೀವನದಲ್ಲಿ ಅದೇ ದಿನ ಅಂತದ್ದೊಂದು ದುರಂತ  ನಡೆದು ಹೋಗುತ್ತದೆ ಎಂದು ಭಾವಿಸಿಯೂ ಇರಲಿಲ್ಲ.

ಉತ್ತರ ಪ್ರದೇಶದ ಲಖಿಮ್ ಪುರ್ ಖೇರಿ ಹೊರವಲಯದಲ್ಲಿ 17  ವರ್ಷದ ದಲಿತ ಯುವತಿ ಶವ ಪತ್ತೆಯಾಗಿದೆ.  ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ.

ಹಾಸನ; ಭಿಕ್ಷುಕಿಯ ಅತ್ಯಾಚಾರ ಮಾಡಿ ಕಲ್ಲು ಎತ್ತಿ ಹಾಕಿದ

ಕಳೆದ ಹತ್ತು ದಿನಗಳ ಅವಧಿಯಲ್ಲಿ ಇದು ಇಂಥದ್ದೆ  ಎರಡನೇ ಪ್ರಕರಣ ಆಗಿದ್ದು  13  ವರ್ಷದ ಬಾಲಕಿಯನ್ನು ಪಾಪಿಗಳು ಕೊಂದು  ಹಾಕಿದ್ದರು.

ಊರಿನಿಂದ ಎರಡು ನೂರು ಮೀಟರ್ ದೂರದ ಖಾಲಿ ಜಾಗದಲ್ಲಿ ಯುವತಿಯ ಶವ ಪತ್ತೆಯಾಗಿದೆ. ಕುತ್ತಿಗೆ ಬಳಿ ಗಾಯದ ಗುರುತುಗಳಿದ್ದು ಬೀದಿ ನಾಯಿಗಳು ಆಕೆಯ ಕಾಲನ್ನು ಕಚ್ಚಿ ಎಳದಾಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ದ್ವಿತಿಯ ಪಿಯು ಅಧ್ಯಯನ ಮಾಡುತ್ತಿದ್ದ ಬಾಲಕಿ ಸ್ಕಾಲರ್ ಶಿಪ್ ಅರ್ಜಿ ಭರ್ತಿ ಮಾಡಲು ಸೋಮವಾರ ಪಕ್ಕದ ಊರಿಗೆ ತೆರಳಿದ್ದಳು.  ನಮಗೆ ಯಾರ ಮೇಲೆಯೂ ಅನುಮಾನ ಇಲ್ಲ ಎಂದು  ಯುವತಿ ಚಿಕ್ಕಪ್ಪ ಹೇಳಿದ್ದಾರೆ. ಸ್ವಾತಂತ್ರ್ಯದಿನದಂದು 13  ವರ್ಷದ ಬಾಲಕಿಯ ಶವ ಕಬ್ಬಿನ ಹೊಲದಲ್ಲಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿತ್ತು. 

ಪಿಶಾಚಿಯೂ ನಾಚುವಂಥ ಹೀನ ಕೃತ್ಯ! ಕೊಲೆ ಮಾಡಿ ರೇಪ್, ಸಿಸಿಟಿವಿಯಲ್ಲಿ ಸೆರೆ.

"