ಆಗ್ರಾ(ಜ. 07)  ಉತ್ತರ ಪ್ರದೇಶದಿಂದ ಮೇಲಿಂದ ಮೇಲೆ  ಲೈಂಗಿಕ ದೌರ್ಜನ್ಯ  ಪ್ರಕರಣಗಳು  ವರದಿಯಾಗುತ್ತಲೆ ಇವೆ. ಆಗ್ರಾದ ಫಿರೋಜಾಬಾದ್‌ನಲ್ಲಿ ಹದಿಹರೆಯದ ಬಾಲಕಿಯನ್ನು ಹೊಲಕ್ಕೆ ಎಳೆದೊಯ್ದು 28 ವರ್ಷದ ಯುವಕ ಅತ್ಯಾಚಾರ ಎಸಗಿದ್ದಾನೆ.  ಇಷ್ಟೆ ಅಲ್ಲದೆ ಪಾಪಿಗಳು ಅತ್ಯಾಚಾರದ ದೃಶ್ಯ ಸೆರೆಹಿಡಿದು ಸೋಶಿಯಲ್ ಮೀಡಿಯಾಕ್ಕೆ ಹರಿ ಬಿಟ್ಟಿದ್ದಾರೆ.

ಫಿರೋಜಾಬಾದ್ ಜಿಲ್ಲೆಯ ನರ್ಕಿ ಪ್ರದೇಶದಿಂದ ಈ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳು ಅಶ್ಲೀಲ ಕೃತ್ಯದ ವಿಡಿಯೋವನ್ನು ಚಿತ್ರೀಕರಿಸಿಕೊಂಡು 16 ವರ್ಷದ ಬಾಲಕಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದರು.

ಹೆತ್ತ ಮಗನಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ  ಮಹಿಳೆ ಅರೆಸ್ಟ್

ಡಿಸೆಂಬರ್ 1 ರಂದು ಬಾಲಕಿ ಮೇವು ಸಂಗ್ರಹಿಸಲು ಮನೆಯಿಂದ ಹೊರಗೆ ಹೋದಾಗ ಈ ಘಟನೆ ನಡೆದಿದೆ. ಪಾಪಿ ಭೂರಿ ಸಿಂಗ್  ಅವಕಾಶ ಬಳಸಿಕೊಂಡು ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿ ವ್ಯಕ್ತಿಯ ಸ್ನೇಹಿತ ಅನಿಲ್ ಕುಮಾರ್ ಚಿತ್ರೀಕರಣ ಮಾಡಿಕೊಂಡಿದ್ದಾನೆ.

ಅತ್ಯಾಚಾರದ ಬಗ್ಗೆ ಯಾರಿಗಾದರೂ ಹೇಳಿದರೆ ಅವರು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಾಗಿ ಇಬ್ಬರು ಹದಿಹರೆಯದವರಿಗೆ ತಿಳಿಸಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಆರೋಪಿ ತನ್ನನ್ನು ಬ್ಲ್ಯಾಕ್‌ಮೇಲ್ ಮಾಡಿ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ ಎಂದು ಬಾಲಕಿ ತಿಳಿಸಿದ್ದಾಳೆ

ಕರೆದಲ್ಲಿಗೆ ಬರಬೇಕು  ಎಂದು ಯುವಕರು ಪದೇ ಪದೇ  ಹೇಳಿದ್ದಾರೆ. ಇದನ್ನು ನಿರಾಕರಿಸಿದ್ದಕ್ಕೆ ಅತ್ಯಾಚಾರದ ದೃಶ್ಯವನ್ನುದ್ವೇಷದಿಂದ ಸೋಶಿಯಲ್  ಮೀಡಿಯಾಕ್ಕೆ ಹರಿಬಿಟ್ಟಿದ್ದಾರೆ.