Asianet Suvarna News Asianet Suvarna News

ಅಪ್ರಾಪ್ತೆಯ ಅತ್ಯಾಚಾರಗೈದು ವಿಡಿಯೋ ಮಾಡಿದ ಕ್ರೂರಿಗಳು, ಬಾಲಕಿ ಆಸ್ಪತ್ರೆಗೆ ದಾಖಲು!

ಮುಂದುವರೆದ ಕಾಮುಕರ ಅಟ್ಟಹಾಸ| ಹತ್ರಾಸ್ ಪ್ರಕರಣ ಬೆನ್ನಲ್ಲೇ ಇತ್ತ ರಾಜಸ್ಥಾನದಲ್ಲಿ ಅಪ್ರಾಪ್ತೆಯ ರೇಪ್| ಅತ್ಯಾಚಾರಗೈದು ವಿಡಿಯೋ ಮಾಡಿದ ಕಾಮುಕರು

15 year old girl was allegedly raped in Rajasthan Barmer pod
Author
Bangalore, First Published Oct 7, 2020, 3:40 PM IST

ಬರ್ಮೇರ್(ಅ.07): ದೇಶದಲ್ಲಿ ಕೊರೋನಾತಂಕ ನಡುವೆಯೂ ಅತ್ಯಾಚಾರದಂತಹ ಘೋರ ಅಪರಾಧ ಕೃತ್ಯಗಳು ಕಡಿಮೆಯಾಗಿಲ್ಲ. ಕಳೆದ ಕೆಲ ದಿನಗಳ ಹಿಂದೆ ಹತ್ರಾಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಅಲ್ದೇ ತೀವ್ರ ಆಕ್ರೋಶವೂ ವ್ಯಕ್ತವಾಗಿತ್ತು. ಆದರೀಗ ಇದರ ಬೆನ್ನಲ್ಲೇ ರಾಜಸ್ಥಾನದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ದುರುಳರು ಅತ್ಯಾಚಾರ ನಡೆಸಿದ್ದಾರೆ.

ಹೌದು ರಾಜಸ್ಥಾನದ ಬರ್ಮೇರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುಷ್ಕೃತ್ಯ ನಡೆದಿದೆ. ಇಲ್ಲಿನ 15 ವರ್ಷದ ಬಾಲಕಿ ಮೇಲೆ ವ್ಯಕ್ತಿಯೊಬ್ಬ ತನ್ನ ಸ್ನೇಹಿತನೊಂದಿಗೆ ಸೇರಿ ಅತ್ಯಾಚಾರ ನಡೆಸಿದ್ದಲ್ಲದೇ, ಇದನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್‌ ಮಾಡಿದ್ದಾರೆ. ಸದ್ಯ ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿ ವೈದ್ಯಕೀಯ ಚಿಕಿತ್ಸೆ ನಿಡಿಲಾಗಿದೆ.

ಇನ್ನು ಈ ಸಂಬಂಧ ತನಿಖೆ ಚುರುಕುಗೊಳಿಸಿರುವ ಬರ್ಮೇರ್‌ ಪೊಲೀಸರುಇ ಆರೋಪಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ. 

Follow Us:
Download App:
  • android
  • ios