14 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ; ಡೆತ್ ನೋಟ್ ನಲ್ಲಿ ಸಿಕ್ತು ಆಘಾತಕಾರಿ ಅಂಶ!

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಬಿಜಿಎಸ್ (ವೆಂಕಟೇಶ್ವರ ವಿದ್ಯಾ ಮಂದಿರ) ಶಾಲೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಕೇವಲ 750 ರೂ. ಸಾಲಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ.

14 year student suicide case Shocking fact found in the death note at chikkammagaluru rav

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 
 
ಚಿಕ್ಕಮಗಳೂರು (ಆ.28) : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಬಿಜಿಎಸ್ (ವೆಂಕಟೇಶ್ವರ ವಿದ್ಯಾ ಮಂದಿರ) ಶಾಲೆಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಕೇವಲ 750 ರೂ. ಸಾಲಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಹಿರೇಬಳ್ಳೇಕೆರೆ ಮೂಲದ ವಿದ್ಯಾರ್ಥಿ ಶ್ರೀನಿವಾಸ್ ಆಗಸ್ಟ್ 22ರಂದು ಹಾಸ್ಟೆಲ್ ನಲ್ಲಿ ನೇಣುಬಿಗಿದುಕೊಂಡಿದ್ದ. ಆದರೆ ಇದೀಗ ವಿದ್ಯಾರ್ಥಿ ಬರೆದಿಟ್ಟಿದ್ದ ಡೆತ್ ನೋಟ್ ವೈರಲ್ ಆಗಿದ್ದು ಸಾವಿನ ಸುತ್ತ ಅನುಮಾನದ ಹುತ್ತ ಮೂಡಿಸಿದೆ. 

ಮಗನನ್ನ ನೆನೆದು ಕಣ್ಣೀರು :

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಖಾಸಗಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ. ಶಾಲೆಯ ಹಾಸ್ಟೇಲ್‍ನಲ್ಲೇ ಇದ್ದ. ಮೂಲತಃ ಕಡೂರು ತಾಲೂಕಿನ ಹಿರೇಬಳ್ಳೆಕೆರೆ ಗ್ರಾಮದವನು. ಹಾಸ್ಟೆಲ್‍ನಲ್ಲೇ ಇದ್ದ ಶ್ರೀನಿವಾಸ್ ಇದೇ ಆಗಸ್ಟ್ 22ರಂದು ಹಾಸ್ಟೆಲ್‍ನಲ್ಲೇ ನೇಣಿಗೆ ಶರಣಾಗಿದ್ದ. ಅಂದು ಆತ್ಮಹತ್ಯೆಗೆ ಕಾರಣ ಗೊತ್ತಾಗಿರಲಿಲ್ಲ. ಆದ್ರೀಗ, ಆತ ಬರೆದಿದ್ದ ಡೆತ್‍ನೋಟ್ ವೈರಲ್ ಆಗಿದ್ದು ಸಾವಿನ ಸತ್ಯ ಹೊರಬಿದ್ದಿದೆ. ಆತ ಮಾಡಿದ್ದ 750 ಸಾಲಕ್ಕೆ ಬೆದರಿ ಆತ ಆತ್ಮಹತ್ಯೆಗತೆ ಶರಣಾಗಿದ್ದಾನೆ. ಹಾಸ್ಟೆಲ್ ಸಿಬ್ಬಂದಿಯೊಬ್ಬರ ಬಳಿ ಪಡೆದಿದ್ದ 750 ಸಾಲಕ್ಕೆ ಅವರು 3 ಸಾವಿರ ಕೊಡಬೇಕು ಎಂದು ಹೇಳಿದ್ದರಂತೆ. ಅಷ್ಟೊಂದು ದುಡ್ಡು ಎಲ್ಲಿಂದ ತರೋದು. ಅಪ್ಪನಿಗೆ ಗೊತ್ತಾದ್ರೆ ಬೈತಾರೆ ಎಂದು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತ ಬಾಲಕ ಪೋಷಕರು ಆರೋಪಿಸಿದ್ದು. ಸೇನೆಯಲ್ಲಿ ಸೇವೆಗೈದು ಬಂದಿದ್ದ ತಂದೆ ರಾಮಚಂದ್ರ ಇಂದು ಮಗನನ್ನ ನೆನೆದು ಕಣ್ಣೀರಿಡುತ್ತಿದ್ದಾರೆ. 

ಸೂಕ್ತ ಕ್ರಮ ಕೈಗೊಳ್ಳುವಂತೆ ನಿವೃತ್ತ ಸೈನಿಕ ಕುಟುಂಬ ಆಗ್ರಹ : 

ಬಾಲಕನ ಆತ್ಮಹತ್ಯೆಗೆ ಆ ಸಾಲ ಕೊಟ್ಟಿದ್ದೇ ಕಾರಣ ಅಂತಿದೆ ಮೃತ ಶ್ರೀನಿವಾಸ್ ಕುಟುಂಬ. ಕೊಟ್ಟ ಹಣಕ್ಕಿಂತ ಹೆಚ್ಚಿನ ಹಣ ಕೇಳಿದಕ್ಕೇ ಆತ ಮನನೊಂದು, ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಅಂತ ಶ್ರೀನಿವಾಸ್ ಪೋಷಕರು ಆರೋಪಿಸಿದ್ದಾರೆ. ಆ ಸಿಬ್ಬಂದಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿವೃತ್ತ ಸೈನಿಕ ಕುಟುಂಬ ಆಗ್ರಹಿಸಿದೆ. ಈಗಾಗಲೇ ದೂರು ನೀಡಿ, ತನಿಖೆ ನಡೆಸಿ ಅಂತ ಮನವಿ ಮಾಡಿದ್ದಾರೆ. ಮಗನ ಸಾವಿಗೆ ಸೂಕ್ತ ನ್ಯಾಯ ಒದಗಿಸದಿದ್ದರೆ ಎಸ್ಪಿ ಕಚೇರಿ ಮುಂದೆ ಪ್ರತಿಭಟಿಸೋದಾಗಿ ಎಚ್ಚರಿಕೆ ನೀಡಿದ್ದಾರೆ. ಬಾಲಕನ ಸಾವಿನಿಂದ ನೋವಿಗೀಡಾಗಿರೋ ಗ್ರಾಮಸ್ಥರು ಕೂಡ ಮೃತನ ಬಾಲಕನ ಪೋಷಕರ ಜೊತೆಗೂಡಿ ನ್ಯಾಯಕ್ಕಾಗಿ ಹೋರಾಡೋ ಎಚ್ಚರಿಕೆ ನೀಡಿದ್ದಾರೆ. 

ಡೆತ್ ನೋಟ್ ನಲ್ಲಿ ಏನಿದೆ : 

ಇದೀಗ ವೈರಲ್ ಆಗಿರುವ ಡೆತ್ ನೋಟ್ ನಲ್ಲಿ ‘ನನ್ನ ಸಾವಿಗೆ ಕಾರಣ drushya was trochring to give to money and I take 750₹ from anty and anty said 3000₹ for my death reason person are sahil drushya ಎಂದು ಬರೆದುಕೊಂಡಿದ್ದಾನೆ ಎನ್ನಲಾಗಿದೆ. ಮೃತ ವಿದ್ಯಾರ್ಥಿ ಶ್ರೀನಿವಾಸ್ ಅವರ ತಂದೆ ರಮೇಶ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸದ್ಯ ಕಂದಾಯ ಇಲಾಖೆಯಲ್ಲಿ ಗ್ರಾಮ ಆಡಳಿತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಮಗನ ಡೆತ್ ನೋಟ್ ನೋಡಿ ಕಣ್ಣೀರಿಟ್ಟಿರುವ ರಮೇಶ್, ಮಗನ ಸಾವಿನ ಕುರಿತು ಅನುಮಾನ ವ್ಯಕ್ಯಪಡಿಸಿದ್ದಾರೆ.ಶಾಲೆಗೆ ಫೀಸ್ ಕಟ್ಟಿರ್ತಾರೆ. ಹಾಸ್ಟೆಲ್‍ಗೆ ಮಂತ್ಲಿ ಹಣ ಕೊಡ್ತಾರೆ. ಆ ಹುಡಗು 750 ರೂಪಾಯಿ ಸಾಲ ಮಾಡಿದ್ದೇಕೆ. ಹಾಸ್ಟೆಲ್ ಸಿಬ್ಬಂದಿಗಳು ಮಕ್ಕಳಿಗೆ ಸಾಲ ನೀಡಿದ್ದೇಕೆ. ಕೊಟ್ಟ ಹಣಕ್ಕಿಂತ ಹೆಚ್ಚು ಹಣ ಕೇಳಿದ್ಯಾಕೆ ಎಂಬೆಲ್ಲಾ ಪ್ರಶ್ನೆ ಮೂಡಿದೆ. ಆದ್ರೆ, ಕಾರಣ ಏನೇ ಇದ್ರು, 9ನೇ ಕ್ಲಾಸ್ ಬಾಲಕನ ಸಾವು ಮಾತ್ರ ನಿಜಕ್ಕೂ ದುರಂತ. ಆದ್ರೆ, ಆತನ ಸಾವಿಗೆ ಕಾರಣವಾಗಿದ್ದು ಅದೇ 750 ರೂಪಾಯಿಯೇ ಕಾರಣವಾ ಎಂಬ ಪ್ರಶ್ನೆಯೂ ಮೂಡಿದೆ. ಪೊಲೀಸರ ನಿಷ್ಪಕ್ಷಪಾತವಾದ ತನಿಖೆಯಿಂದ ಬಾಲಕನ ಸಾವಿಗೆ ನ್ಯಾಯ ಸಿಗಬೇಕಿದೆ.

Latest Videos
Follow Us:
Download App:
  • android
  • ios