Asianet Suvarna News Asianet Suvarna News

ಕಾಮ ಪಿಶಾಚಿಗಳು.. ಬಾಲಕಿ ಮೇಲೆ 13 ಕಿರಾತಕರ ದೌರ್ಜನ್ಯ, ರೈಲ್ವೆ ಸಿಬ್ಬಂದಿಯದ್ದೂ ಪಾತ್ರ!

* ಬಾಲಕಿಯ ಮೇಲೆ ಕೀಚಕತನ ಮೆರೆದ 13 ಜನರು
* ಆಟೋ ಚಾಲಕ ಸೇರಿ ರೈಲ್ವೆ ಇಲಾಖೆ ನೌಕರರ ಬಂಧನ
* ಚಂಡಿಘಡದಿಂದ ಮುಂಬೈಗೆ ಹೊರಟಿದ್ದ ಬಾಲಕಿ
* ಬಾಲಕಿಯನ್ನು ರಕ್ಷಣೆ ಮಾಡಿದ ಪೊಲೀಸರು

14-year-old gang-raped in Pune eight of 13 attackers arrested mah
Author
Bengaluru, First Published Sep 8, 2021, 10:45 PM IST

ಪುಣೆ(ಸೆ. 08) ಘೋರ ಪ್ರಕರಣ ವರದಿಯಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ 13 ಮಂದಿಯನ್ನು ಪುಣೆಯ ಪೊಲೀಸರು  ಬಂಧಿಸಿದ್ದಾರೆ.  ಪುಣೆ ರೈಲ್ವೆ ನಿಲ್ದಾಣದ ಸುತ್ತ ಮುತ್ತ ಬಾಲಕಿಯ ಮೇಲೆ ನಿರಂತರ ದೌರ್ಜನ್ಯ ನಡೆದಿದೆ. ಆಗಸ್ಟ್  31 ರಿಂದ ಸೆ.  01 ರ ನಡುವೆ ಕಾಮುಕರು ಕೀಚಕತನ ಮೆರೆದಿದ್ದಾರೆ.

ಆಟೋ ಚಾಲಕ ಸೇರಿದಂತೆ ರೈಲ್ವೆ ಇಲಾಖೆಯ ನಾಲ್ಕನೇ ದರ್ಜೆ ನೌಕರರನ್ನು ಬಂಧಿಸಲಾಗಿದೆ. ಪ್ರಮುಖ ಮೂರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ದೀಪಕ್ ಲಗಾಡ್ ತಿಳಿಸಿದ್ದಾರೆ.

ಬಾಲಕಿ ಬೆಳಗ್ಗೆ 10. 30ಕ್ಕೆ ಮನೆ ಬಿಟ್ಟಿದ್ದರು. ಬಾಲಕಿ ತನ್ನ ಸ್ನೇಹಿತರನ್ನು ಭೇಟಿ ಮಾಡಲು ತೆರಳಿದ್ದರು ಎಂದು ಹೇಳಲಾಗಿದೆ. ಸ್ನೇಹಿತನ ಒತ್ತಾಯದ ಮೇಲೆ 14 ವರ್ಷದ ಅಪ್ರಾಪ್ತೆ, ಮನೆಯಿಂದ ಓಡಿ ಹೋಗಿದ್ದಳು. ಚಂಡಿಘಡ  ಮೂಲದ ಬಾಲಕಿ  ಮುಂಬೈನಲ್ಲಿ ಆಕೆ ಸ್ನೇಹಿತ ಸಿಗುವುದಾಗಿ ಹೇಳಿದ್ದ ಎಂಬ  ಕಾರಣಕ್ಕೆ ಮನೆ ಬಿಟ್ಟು ತೆರಳಿದ್ದಳು.

ಮೈಸೂರು ಗ್ಯಾಂಗ್ ರೇಪ್; ಏಳನೇ ಆರೋಪಿಯೂ ಸೆರೆಸಿಕ್ಕ

ಸೆ. 1  ರಂದು ಪೊಲೀಸರಿಗೆ ಬಾಲಕಿಯ ಪೋಷಕರು ಮಿಸ್ಸಿಂಗ್ ದೂರು ದಾಖಲಿಸಿದ್ದಾರೆ. ಸಿಸಿಟಿವಿಯ ದೃಶ್ಯಾವಳಿಯನ್ನು ಪರಿಶೀಲನೆ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಬಾಲಕಿ ನಾಪತ್ತೆ ವಿಚಾರ ಗೊತ್ತಾದ ತಕ್ಷಣ ಪೊಲೀಸರು ಎಲ್ಲ ಕಡೆ ಮಾಹಿತಿ ನೀಡಿದ್ದಾರೆ. ಚಂಡಿಘಡ ರೈಲ್ವೆ ನಿಲ್ದಾಣದಲ್ಲಿ ಬಾಲಕಿ ಇದ್ದಾಳೆ ಎಂಬ ಮಾಹಿತಿ ಗೊತ್ತಾಗಿದೆ. ಅಲ್ಲಿಗೆ ಹೋಗಿ ಬಾಲಕಿ ರಕ್ಷಣೆ ಮಾಡಿದಾಗ ಆಕೆ ನಡೆದ ಘೋರ ದುರಂತವನ್ನು ತಿಳಿಸಿದ್ದಾಳೆ.

ಪ್ರಕರಣದಲ್ಲಿ ಹೆಸರು ಕೇಳಿ ಬಂದರುವ ರೈಲ್ವೆ ಇಲಾಖೆಯ ನಾಲ್ಕನೇ ದರ್ಜೆ ನೌಕರರನ್ನು ವಜಾ ಮಾಡಲಾಗಿದೆ.  ಎಲ್ಲರ ಮೇಲೆಯೂ ಪೋಕ್ಸೋ ಮತ್ತು ಲೈಂಗಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

 

Follow Us:
Download App:
  • android
  • ios