2025ರ ಐಪಿಎಲ್ ಮೆಗಾ ಹರಾಜಿಗೆ ಒಟ್ಟು 1574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ನವದೆಹಲಿ: 2025ರ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ನ.24 ಹಾಗೂ 25ಕ್ಕೆ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಮಂಗಳವಾರ ತಿಳಿಸಿದೆ. ಹರಾಜಿಗೆ ಬರೋಬ್ಬರಿ1,574 ಆಟಗಾರರು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 400ರಿಂದ 500 ಆಟಗಾರರಿಗೆ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಬಹುದು. ಮುಂದಿನ ವಾರ ಬಿಸಿಸಿಐ ಅಂತಿಮ ಪಟ್ಟಿ ಪ್ರಕಟಿಸುವ ನಿರೀಕ್ಷೆ ಇದೆ.

ಮೆಗಾ ಹರಾಜಿಗೆ ಹೆಸರು ನೋಂದಾಯಿಸಿರುವ 1,574 ಆಟಗಾರರ ಪೈಕಿ 1,165 ಭಾರತೀಯರು ಹಾಗೂ 409 ವಿದೇಶಿಗರು ಇದ್ದಾರೆ. 320 ಆಟಗಾರರು ಅಂ.ರಾ. ಕ್ರಿಕೆಟ್ ಆಡಿದ್ದು,1,224 ಮಂದಿ ಅಂ.ರಾ. ಕ್ರಿಕೆಟ್ ಆಡಿಲ್ಲ. 30 ಐಸಿಸಿಅಸೋಸಿಯೇಟ್ ರಾಷ್ಟ್ರಗಳ ಆಟಗಾರರೂ ಇದ್ದಾರೆ. ಹರಾಜಿಗೆ ನೋಂದಣಿ ಮಾಡಿಕೊಳ್ಳಲು ನವೆಂಬರ್‌ 4ರ ವರೆಗೆ ಗಡುವು ನೀಡಲಾಗಿತ್ತು.

Scroll to load tweet…

ವಿರಾಟ್ ಕೊಹ್ಲಿ ಅಲ್ಲವೇ ಅಲ್ಲ, ಈ ಯಂಗ್‌ಸ್ಟರ್ ಆರ್‌ಸಿಬಿ ಹೊಸ ಕ್ಯಾಪ್ಟನ್?

ವಿದೇಶಿ ಆಟಗಾರರ ಪೈಕಿ ದಕ್ಷಿಣ ಆಫ್ರಿಕಾದ 91 ಆಟಗಾರರಿದ್ದು, ಆಸ್ಟ್ರೇಲಿಯಾದ 76, ಇಂಗ್ಲೆಂಡ್‌ನ 52 ಮಂದಿ ಇದ್ದಾರೆ. ಉಳಿದಂತೆ ನ್ಯೂಜಿಲೆಂಡ್‌ನ 39, ವೆಸ್ಟ್ ಇಂಡೀಸ್‌ನ 33, ಅಫ್ಘಾನಿಸ್ತಾನ ಹಾಗೂ ಶ್ರೀಲಂಕಾದ ತಲಾ 29, ಬಾಂಗ್ಲಾದೇಶದ 13, ಅಮೆರಿಕದ 10, ಐರ್ಲೆಂಡ್‌ನ 9, ಜಿಂಬಾಬ್ಬೆಯ 8, ಸ್ಕಾಟ್ಲಂಡ್‌ನ 2, ಯುಎಇ ಹಾಗೂ ಇಟಲಿಯ ತಲಾ ಒಬ್ಬ ಆಟಗಾರ ನೋಂದಣಿ ಮಾಡಿಕೊಂಡಿದ್ದಾರೆ.

2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿರುವ ಭಾರತೀಯ ಆಟಗಾರರಿವರು:

ಕೆ ಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಹಲ್, ಮೊಹಮ್ಮದ್ ಶಮಿ, ಖಲೀಲ್ ಅಹಮದ್, ದೀಪಕ್ ಚಹರ್, ವೆಂಕಟೇಶ್ ಅಯ್ಯರ್, ಇಶಾನ್ ಕಿಶನ್, ಆವೇಶ್ ಖಾನ್, ಭುವನೇಶ್ವರ್ ಕುಮಾರ್, ಪ್ರಸಿದ್ಧ್ ಕೃಷ್ಣ, ಟಿ ನಟರಾಜನ್, ದೇವದತ್ ಪಡಿಕ್ಕಲ್, ಕೃನಾಲ್ ಪಾಂಡ್ಯ, ಹರ್ಷಲ್ ಪಟೇಲ್, ಆರ್ಷದೀಪ್ ಸಿಂಗ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್.

ಈ ಷೇರಿನ ಮೇಲೆ 2.5 ಕೋಟಿ ರುಪಾಯಿ ಹೂಡಿಕೆ ಮಾಡಿ 11 ಕೋಟಿ ರುಪಾಯಿ ಲಾಭ ಗಳಿಸಿದ ವಿರುಷ್ಕಾ ಜೋಡಿ

2 ಕೋಟಿ ರುಪಾಯಿ ಮೂಲ ಬೆಲೆಯ ವಿದೇಶಿ ಆಟಗಾರರು:

ಜೋಸ್ ಬಟ್ಲರ್, ಮಿಚೆಲ್ ಸ್ಟಾರ್ಕ್, ಸ್ಟೀವ್ ಸ್ಮಿತ್, ಜಾನಿ ಬೇರ್‌ಸ್ಟೋವ್, ಜೋಫ್ರಾ ಆರ್ಚರ್, ಕಗಿಸೋ ರಬಾಡ, ಮಾರ್ಕ್‌ ವುಡ್, ಅಟ್ಕಿಸನ್.