ನವದೆಹಲಿ(ಮಾ.18): ಭಾರತ ಕ್ರಿಕೆಟ್‌ ತಂಡದ ಲೆಗ್‌ ಸ್ಪಿನ್ನರ್‌ ಯಜುವೇಂದ್ರ ಚಹಲ್‌, ಟಿಕ್‌ ಟಾಕ್‌ ಮಾಡುವ ಮೂಲಕ ಜಾಲತಾಣಗಳಲ್ಲಿ ಬ್ಯುಸಿ ಆಗಿರುತ್ತಾರೆ. ಇದೀಗ ಚಹಲ್‌, ತಮ್ಮನ್ನು ತಾವೇ ಟ್ರೋಲ್‌ ಮಾಡಿಕೊಂಡು ಸುದ್ದಿಯಾಗಿದ್ದಾರೆ. 

ನನ್ನ ನೀ ಗೆಲ್ಲಲಾರೆ, ತಿಳಿದು ತಿಳಿದು ಅನುಕರಣೆ ಏತಕೆ? ಡಿಕಾಕ್‌ಗೆ ಚಹಾಲ್ ಸವಾಲ್!

ಇತ್ತೀಚೆಗಷ್ಟೇ ಪಂದ್ಯವೊಂದರಲ್ಲಿ ಡ್ರಿಂಕ್ಸ್‌ ಬಾಟಲಿಗಳನ್ನು ಇಟ್ಟುಕೊಂಡು ಬೌಂಡರಿ ಗೆರೆ ಬಳಿ ಮಲಗಿದ್ದ ಫೋಟೋ ವೈರಲ್‌ ಆಗಿತ್ತು. ಚಹಲ್‌ ಶೈಲಿಯಲ್ಲೇ ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌, ದ.ಆಫ್ರಿಕಾದ ಕ್ವಿಂಟನ್‌ ಡಿಕಾಕ್‌ ಹಾಗೂ ಆಸ್ಪ್ರೇಲಿಯಾ ಮಹಿಳಾ ತಂಡದ ಆಲ್ರೌಂಡರ್‌ ಎಲೈಸೆ ಪೆರ್ರಿ ಮಲಗಿರುವ ಫೋಟೋ ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು. 

ಚಹಲ್‌ ಇನ್‌ಸ್ಟಾಗ್ರಾಂನಲ್ಲಿ ಅವರೆಲ್ಲರ ಫೋಟೋಗಳ ಜತೆ ತಮ್ಮ ಫೋಟೋವನ್ನು ಸಹ ಹಾಕಿಕೊಂಡು ‘ನನ್ನನ್ನು ಮೀರಿಸಲು ಸಾಧ್ಯವಿಲ್ಲ’ ಎಂದು ಶೀರ್ಷಿಕೆ ಬರೆದಿದ್ದಾರೆ. ಈ ಮೂಲಕ ಚಹಲ್ ತಮ್ಮನ್ನು ತಾವೇ ಟ್ರೋಲ್‌ ಮಾಡಿಕೊಂಡು ಸುದ್ದಿಯಾಗಿದ್ದಾರೆ.