ನವ​ದೆ​ಹ​ಲಿ[ಡಿ.04]: ಭಾರತ ದಿಗ್ಗಜ ಮಹಿಳಾ ಕ್ರಿಕೆ​ಟರ್‌ ಮಿಥಾಲಿ ರಾಜ್‌ಜೀವ​ನಾ​ಧಾ​ರಿತ ಸಿನಿಮಾ ಬಾಲಿ​ವುಡ್‌ನಲ್ಲಿ ತೆರೆ ಕಾಣ​ಲಿದೆ. ಮಂಗ​ಳ​ವಾರ ಮಿಥಾಲಿ ತಮ್ಮ 37ನೇ ಹುಟ್ಟು​ಹ​ಬ್ಬ​ವನ್ನು ಆಚ​ರಿ​ಸಿ​ಕೊಂಡರು, ಇದೇ ಸಂದ​ರ್ಭ​ದಲ್ಲಿ ಅವರ ಜೀವನಾಧಾ​ರಿತ ಸಿನಿ​ಮಾ​ ಘೋಷಣೆಯಾಯಿ​ತು. 

37ನೇ ವಸಂತಕ್ಕೆ ಕಾಲಿಟ್ಟ ಮಿಥಾಲಿ ರಾಜ್;ಶುಭಾಶಯಗಳ ಸುರಿಮಳೆ!

ಚಿತ್ರಕ್ಕೆ ‘ಶಾಬಾಶ್‌ ಮಿಥೂ’ ಎಂದು ಹೆಸ​ರಿ​ಟ್ಟಿದ್ದು, ಖ್ಯಾತ ನಟಿ ತಾಪ್ಸಿ ಪನ್ನು ಮಿಥಾಲಿ ಪಾತ್ರದಲ್ಲಿ ಕಾಣಿ​ಸಿ​ಕೊಳ್ಳಲಿ​ದ್ದಾರೆ. ಸ್ವತಃ ತಾಪ್ಸಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿತ್ರದ ವಿವರಗಳನ್ನು ಬಹಿ​ರಂಗಪಡಿ​ಸಿ​ದ್ದಾರೆ. ಚಿತ್ರವನ್ನು ರಾಹುಲ್‌ ಢೋಲಾ​ಕಿಯಾ ನಿರ್ದೇ​ಶಿ​ಸ​ಲಿ​ದ್ದಾರೆ.

ಕಾರ್ಯ​ಕ್ರ​ಮ​ದಲ್ಲಿ ಮಿಥಾಲಿಗೆ ಕೇಕ್‌ ತಿನ್ನಿ​ಸಿದ ತಾಪ್ಸಿ, ಅವ​ರಿಂದ ಹಸ್ತಾ​ಕ್ಷರವನ್ನು ಪಡೆ​ದು​ಕೊಂಡರು. ಸಿನಿಮಾ ಬಗ್ಗೆ ವಿವರಗಳನ್ನು ಬಹಿ​ರಂಗಗೊಳಿ​ಸುವ ಮೊದಲು ತಾಪ್ಸಿ ಇನ್‌ಸ್ಟಾಗ್ರಾಂನಲ್ಲಿ ಕ್ರಿಕೆಟ್‌ ಚೆಂಡಿನ ಚಿತ್ರವೊಂದನ್ನು ಹಾಕಿ ಅಭಿ​ಮಾ​ನಿ​ಗಳಲ್ಲಿ ಕುತೂ​ಹಲ ಮೂಡಿ​ಸಿ​ದ್ದರು. ಚಿತ್ರ ಯಾವಾಗ ತೆರೆ ಕಾಣ​ಲಿದೆ, ಭಾರತ ತಂಡದ ಇತರ ಆಟ​ಗಾರ್ತಿಯರ ಪಾತ್ರಗಳನ್ನು ಯಾರು ನಿಭಾ​ಯಿ​ಸ​ಲಿ​ದ್ದಾರೆ, ಚಿತ್ರದಲ್ಲಿ ಯಾವ ವಿಷಯ​ಗ​ಳ ಬಗ್ಗೆ ಹೆಚ್ಚು ಗಮನ ಹರಿ​ಸ​ಲಾ​ಗು​ತ್ತದೆ ಎನ್ನುವ ವಿವರಗಳನ್ನು ಚಿತ್ರ ತಂಡ ಬಿಟ್ಟು​ಕೊ​ಟ್ಟಿಲ್ಲ.